ಕೊರೋನಾ ಏನೇನ್ ಮಾಡಿಸ್ತಿದೆ ನೋಡಿ..! ಊರೊಳಗೆ ಕಾಲಿಟ್ರೆ ದೈವಕ್ಕೆ ಹರಕೆ..!

By Suvarna NewsFirst Published Mar 28, 2020, 3:20 PM IST
Highlights

ಕೊರೋನಾ ವೈರಸ್ ಹಬ್ಬುವ ಭೀತಿ ಜನರಿಂದ ಏನೇನೋ ಕೆಲಸ ಮಾಡಿಸುತ್ತಿದೆ. ಜನರೇ ತಮ್ಮ ಊರುಗಳಿಗೆ ರಸ್ತೆ ಮುಚ್ಚುವುದು, ಬೇಲಿ ಹಾಕುವುದು, ಗುಂಡಿ ಮಾಡಿ ವಾಹನ ಬರದಂತೆನ ತಡೆಯುವ ಕೆಲಸ ಮಾಡುತ್ತಿದ್ದಾರೆ. ಆದರೆ ಮಂಗಳೂರಿನಲ್ಲಿ ದೈವಕ್ಕೇ ಹರಕೆ ಹೇಳಿದ್ದಾರೆ.

ಮಂಗಳೂರು(ಮಾ.28): ಕೊರೋನಾ ವೈರಸ್ ಹಬ್ಬುವ ಭೀತಿ ಜನರಿಂದ ಏನೇನೋ ಕೆಲಸ ಮಾಡಿಸುತ್ತಿದೆ. ಜನರೇ ತಮ್ಮ ಊರುಗಳಿಗೆ ರಸ್ತೆ ಮುಚ್ಚುವುದು, ಬೇಲಿ ಹಾಕುವುದು, ಗುಂಡಿ ಮಾಡಿ ವಾಹನ ಬರದಂತೆನ ತಡೆಯುವ ಕೆಲಸ ಮಾಡುತ್ತಿದ್ದಾರೆ. ಆದರೆ ಮಂಗಳೂರಿನಲ್ಲಿ ದೈವಕ್ಕೇ ಹರಕೆ ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಕರಾಯ ಗ್ರಾಮದ ಯುವಕನಿಗೆ ಕೊರೋನ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಕಬ್ಬಿಣದ ಗೇಟ್ ಅಳವಡಿಸಿ ರಸ್ತೆ ಸಂಪರ್ಕ ಬಂದ್ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕರಾಯ ರಸ್ತೆ ಸಂಪರ್ಕ ಬಂದ್ ಮಾಡಲಾಗಿದ್ದು, ಕರಾಯದಿಂದ ಅಂಡೆತಡ್ಕಕ್ಕೆ ತೆರಳುವ ರಸ್ತೆ ಸಂಪರ್ಕ ಸಂಫೂರ್ಣ ಬಂದ್‌ ಆಗಿದೆ.

ಹೊರಗೆ ಬರ್ಬೇಡಿ, ರಸ್ತೆಯ ತುಂಬೆಲ್ಲಾ ಇದೆ ಕೊರೋನಾ ವೈರಸ್..!

ಯಾರದರೂ ಗೇಟ್ ಮುಟ್ಟಿದರೆ ಊರಿನ ದೈವಕ್ಕೆ ಹರಕೆ ಇಡುವ ಎಚ್ಚರಿಕೆಯನ್ನೂ ನೀಡಲಾಗಿದೆ. ಹರಕೆ ಇಡುವ ಎಚ್ಚರಿಕೆ ಬೋರ್ಡ್ ಹಾಕಿದ ಗ್ರಾಮದ ಜನರು ಗೇಟ್ ಲಾಕ್ ಮಾಡಿದ್ದಾರೆ.

ಬದ್ಧ ವೈರತ್ವವಿದ್ದಾಗ, ಶತ್ರುಗಳ ನಡುವೆ ದೈವಕ್ಕೆ ಹರಕೆ ಹೇಳುವ ಪದ್ಧತಿ ತುಳುನಾಡಿನಲ್ಲಿದೆ. ಎರಡು ಕುಟುಂಬಗಳ ಕಲಹ, ಗ್ರಾಮಗಳ ಕಲಹದ ಸಂದರ್ಭ ಇದು ನಡೆಯುತ್ತದೆ. ಇದೀಗ ಕೊರೋನ ಜನರ ಅತ್ಯಂತ ದೊಡ್ಡ ಶತ್ರುವಾಗಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.

click me!