ನಡ್ಡಾ ಜೊತೆ ಅಶೋಕ್ ವಿಡಿಯೋ ಸಂವಾದ: ಬಡವರಿಗೆ ಆಹಾರ-ಅಗತ್ಯ ವಸ್ತುಗಳ ಪೂರೈಕೆಗೆ ಸೂಚನೆ

Suvarna News   | Asianet News
Published : Mar 28, 2020, 02:54 PM ISTUpdated : Mar 28, 2020, 02:58 PM IST
ನಡ್ಡಾ ಜೊತೆ ಅಶೋಕ್ ವಿಡಿಯೋ ಸಂವಾದ: ಬಡವರಿಗೆ ಆಹಾರ-ಅಗತ್ಯ ವಸ್ತುಗಳ ಪೂರೈಕೆಗೆ ಸೂಚನೆ

ಸಾರಾಂಶ

ಹಿನ್ನಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಜೊತೆ ಆರ್. ಅಶೋಕ್ ವಿಡಿಯೋ ಸಂವಾದ| ಲಾಕ್‌ಡೌನ್ ಸಂಪೂರ್ಣವಾಗಿ ಯಶಸ್ವಿ ಆಗುವಂತೆ ನೋಡಿಕೊಳ್ಳಿ ಎಂದು ಜೆಪಿ ನಡ್ಡಾ ಸೂಚನೆ| ಪೊಲೀಸರಿಗೆ ಮಾಸ್ಕ್, ಇತ್ಯಾದಿ ಮೆಡಿಕಲ್ ಫೆಸಿಲಿಟಿ ಹೆಚ್ಚುವರಿ ನೀಡುವಂತೆ ಮನವಿ ಮಾಡಿದ ಅಶೋಕ್| 

ಬೆಂಗಳೂರು(ಮಾ.28): ಭಾರತ ಲಾಕ್‌ಡೌನ್‌ ಇರುವ ಹಿನ್ನಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ರಾಜ್ಯದ ಸಚಿವರಾದ ಆರ್ ಅಶೋಕ್, ಡಾ.ಸುಧಾಕರ್, ಡಾ.ಸುಧಾಕರ್, ಗೋಪಾಲಯ್ಯ ಜೊತೆ ವಿಡಿಯೊ ಸಂವಾದ ನಡೆಸಿದ್ದಾರೆ. 

ಕೊರೋನಾ ವೈರಸ್‌ ತಡೆಗಟ್ಟಲು ದೇಶಾದ್ಯಂತ ಲಾಕ್‌ಡೌನ್‌ ಇರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಗತ್ಯ ವಸ್ತುಗಳು ಯಾವುದೇ ಕೊರತೆ ಆಗದಂತೆ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಲಾಕ್‌ಡೌನ್ ಸಂಪೂರ್ಣವಾಗಿ ಯಶಸ್ವಿ ಆಗುವಂತೆ ನೋಡಿಕೊಳ್ಳಿ ಎಂದು ಜೆಪಿ ನಡ್ಡಾ ಸೂಚನೆ ನೀಡಿದ್ದಾರೆ.

ರಾಜ್ಯದಲ್ಲಿ ಒಂದೇ ದಿನ 6 ಮಂದಿಗೆ ಕೊರೋನಾ, ಸೋಂಕಿತರ ಸಂಖ್ಯೆ 75ಕ್ಕೇರಿಕೆ!

ಸದ್ಯ NDRF ನಿಂದ ಶೇ. 25 ರಷ್ಟು ಹಣ ಬಳಕೆಗೆ ಅವಕಾಶ ನೀಡಿದ್ದೀರಿ. ಆದರೆ ಶೇ. 50 ರಷ್ಟು ಬಳಕೆಗೆ ಅವಕಾಶ ನೀಡುವಂತೆ ಸಚಿವ ಆರ್‌. ಅಶೋಕ್ ಅವರು ಮನವಿ ಮಾಡಿದ್ದಾರೆ. ಜೊತೆಗೆ ಪೊಲೀಸರಿಗೆ ಮಾಸ್ಕ್, ಇತ್ಯಾದಿ ಮೆಡಿಕಲ್ ಫೆಸಿಲಿಟಿ ಹೆಚ್ಚುವರಿ ನೀಡುವಂತೆಯೂ ಕೇಳಿದ್ದಾರೆ. 
 

PREV
click me!

Recommended Stories

ವೈರಸ್‌ ಕಾಟ: ಕೊರೋನಾ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ, ಸಚಿವ ಪಾಟೀಲ್‌
ಮತ್ತೆ ಕೊರೋನಾರ್ಭಟ: ಪೂಲಿಂಗ್ ಟೆಸ್ಟ್ ಮೊರೆಹೋದ ಆರೋಗ್ಯ ಇಲಾಖೆ, ಏನಿದು ಹೊಸ ಪರೀಕ್ಷೆ?