
ಬಾಗಲಕೋಟೆ(ಮಾ.27): ಜನನಿಬಿಡ ಪ್ರದೇಶದಲ್ಲಿ ಕೊರೋನಾ ಐಸೋಲೇಶನ್ ವಾರ್ಡ್ ಬೇಡವೆಂದು ಜನರು ಆಕ್ಷೇಪ ತಗೆದ ಘಟನೆ ನವನಗರದ ವಾಂಬೆ ಕಾಲೋನಿಯಲ್ಲಿ ಇಂದು(ಶುಕ್ರವಾರ) ನಡೆದಿದೆ.
ಆರೋಗ್ಯ ಇಲಾಖೆ ಅಧಿಕಾರಿಗಳು ಸರ್ಕಾರಿ ಹಾಸ್ಟೆಲ್‌ನಲ್ಲಿ ಐಸೋಲೇಶನ್ ವಾರ್ಡ್ ರೂಪಿಸಲು ಮುಂದಾಗಿದ್ದ ವೇಳೆ ಸ್ಥಳೀಯರು ಆಕ್ಷೇಪ ತಗೆದಿದ್ದಾರೆ.
ಕೊರೋನಾ ನಿರ್ಮೂಲನೆಗೆ ಔಷಧಿ..? 3ರಿಂದ 5ದಿನದಲ್ಲಿ ಸೋಂಕಿತ ಗುಣಮುಖ?
ಅಧಿಕಾರಿಗಳ ನಿರ್ಧಾರದ ಮಾಹಿತಿ ತಿಳಿದು ವಾಂಬೆ ಕಾಲೋನಿ ಮಹಿಳೆಯರು, ಪುರುಷರು ಆಕ್ಷೇಪ ವ್ಯಕ್ತಪಡಿಸಲು ಮುಂದಾಗಿದ್ದರು. ಈ ವೇಳೆ ಮಹಿಳೆಯರು ಪೋಲಿಸರೊಂದಿಗೆ ವಾಗ್ವಾದಕ್ಕೆ ಇಳಿದಿದ್ದರು. ಇಲ್ಲಿ ಯಾವುದೇ ಕಾರಣಕ್ಕೂ ಐಸೋಲೇಶನ್ ವಾರ್ಡ್ ಸ್ಥಾಪಿಸಲು ಬಿಡೋದಿಲ್ಲವೆಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರು ಸ್ಥಳದಿಂದ ನಿರ್ಗಮಿಸದೇ ಹೋದಾಗ ಜನರನ್ನು ಪೋಲಿಸರು ಚದುರಿಸಿದ್ದಾರೆ.