ಮಹಾಮಾರಿ ಕೊರೋನಾ ಹರಡೋಣ ಬನ್ನಿ ಎಂದು ಕರೆ ಕೊಟ್ಟ ಟೆಕ್ಕಿ!

By Kannadaprabha NewsFirst Published Mar 27, 2020, 1:53 PM IST
Highlights

ಸಾರ್ವಜನಿಕ ಸ್ಥಳದಲ್ಲಿ ಬಾಯಿ ತೆರೆದು ಸೀನುವ ಮೂಲಕ ವೈರಸ್ ಹರಡಲು ಕೈಜೋಡಿಸಿ ಎಂದು ಕರೆ ಕೊಟ್ಟ ವ್ಯಕ್ತಿ|ಲಿಂಕ್‌ಡಿನ್ ಖಾತೆಯಲ್ಲಿ ಈ ವಿವಾದಿತ ಪೋಸ್ಟ್| ಈತನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ನೆಟ್ಟಿಗರ ಒತ್ತಾಯ|

ಬೆಂಗಳೂರು(ಮಾ.27): ಇಡೀ ಜಗತ್ತೇ ಕೊರೋನಾ ವೈರಸ್ ಹರಡುವ ಆತಂಕದಲ್ಲಿರುವಾಗ ಇನ್ಪೋಸಿಸ್ ಉದ್ಯೋಗಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಸಾಮಾಜಿಕ ಜಾಲಾತಾಣದಲ್ಲಿ 'ಸಾರ್ವಜನಿಕ ಸ್ಥಳದಲ್ಲಿ ಬಾಯಿ ತೆರೆದು ಸೀನುವ ಮೂಲಕ ವೈರಸ್ ಹರಡಲು ಕೈಜೋಡಿಸಿ ಎಂದು ಬರೆದು ಪೋಸ್ಟ್ ಮಾಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. 

ಮುಜಿದ್ ಮೊಹಮ್ಮದ್ ಹೆಸರಿನ ಲಿಂಕ್‌ಡಿನ್ ಖಾತೆಯಲ್ಲಿ ಈ ವಿವಾದಿತ ಪೋಸ್ಟ್ ದಾಖಲಾಗಿದೆ. ಈ ಕುರಿತು ಆಕ್ರೋಷ ವ್ಯಕ್ತಪಡಿಸಿರುವ ನೆಟ್ಟಿಗರು ಈತನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ನಡುವೆ ಲಿಂಕ್‌ಡಿನ್ ಮಜೀದ್‌ ಹೆಸರಿನ ಖಾತೆ ಡಿಲೀಟ್‌ ಆಗಿದೆ. ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಇನ್ಫೋಸಿಸ್, ನಮ್ಮ ಕಂಪನಿಯ ಉದ್ಯೋಗಿ ಎನ್ನಲಾದ ವ್ಯಕ್ತಿಯ ಪೋಸ್ಟ್‌ ಕುರಿತು ಪರಿಶೀಲನೆ ನಡೆಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಈತ ನಮ್ಮ ಉದ್ಯೋಗಿ ಅಲ್ಲ ಎಂಬುದು ತಿಳಿದು ಬಂದಿದೆ.

ಟೆಕ್ಕಿ ತಂದ ಆತಂಕ: ವಿದೇಶದಿಂದ ಆಗಮಿಸಿದ್ದ ವಿಚಾರ ಮುಚ್ಚಿಟ್ಟು ಚಿಕಿತ್ಸೆ ಪಡೆದಿದ್ದ!

Infosys is aware that someone claiming to be an Infosys employee has posted inappropriate content. We are investigating this internally, and will take appropriate action as needed. Infosys takes violations of its code of conduct seriously.

— Infosys (@Infosys)

ಆದರೂ ಈ ವಿಚಾರವನ್ನ ಕಂಪನಿ ಗಂಭೀರವಾಗಿ ಪರಿಗಣಿಸಿದ್ದು, ಈ ಸಂಬಂಧ ಹೆಚ್ಚಿನ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದೆ. 
 

click me!