ಮಂಗಳೂರು: ಮೂರನೇ ದಿನವೂ ಕೊರೋನಾ ನೆಗೆಟಿವ್‌

By Kannadaprabha NewsFirst Published Mar 31, 2020, 8:21 AM IST
Highlights

ಕಳೆದೆರಡು ದಿನಗಳಿಂದ ಯಾವುದೇ ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಕೂಡ ಬಂದ ಎಲ್ಲ ವರದಿಗಳು ಕೂಡ ನೆಗೆಟಿವ್‌ ಆಗಿವೆ.

ಮಂಗಳೂರು(ಮಾ.31): ಕಳೆದೆರಡು ದಿನಗಳಿಂದ ಯಾವುದೇ ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಕೂಡ ಬಂದ ಎಲ್ಲ ವರದಿಗಳು ಕೂಡ ನೆಗೆಟಿವ್‌ ಆಗಿವೆ. ಆದರೆ ಈ ಹಿಂದೆ ಪ್ರಯೋಗಾಲಯಕ್ಕೆ ಕಳುಹಿಸಿರುವ 5 ಮಂದಿಯ ಗಂಟಲ ಸ್ರಾವದ ಮಾದರಿಗಳ ವರದಿ ಇನ್ನಷ್ಟೆಬರಬೇಕಿದ್ದು, ಮರು ಪರಿಶೀಲನೆ ಪ್ರಕ್ರಿಯೆಯಲ್ಲಿದೆ ಎಂದು ತಿಳಿದುಬಂದಿದೆ. ಮಂಗಳವಾರ ಇವುಗಳ ವರದಿ ದೊರೆಯುವ ನಿರೀಕ್ಷೆಯಿದೆ. ಸೋಮವಾರ ಮತ್ತೆ 8 ಜನರ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.

5,875 ಹೋಮ್‌ ಕ್ವಾರಂಟೈನ್‌!

ಜಿಲ್ಲೆಯಲ್ಲಿ ವಾರದ ಹಿಂದಷ್ಟೆಹೋಮ್‌ ಕ್ವಾರಂಟೈನ್‌ನಲ್ಲಿ ಇದ್ದವರ ಸಂಖ್ಯೆ 3 ಸಾವಿರದಷ್ಟಿತ್ತು. ಈಗ ದಿಢೀರನೆ ದುಪ್ಪಟ್ಟಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಈಗ ಒಟ್ಟು 5,875 ಮಂದಿ ಹೋಮ್‌ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್‌ ತಿಳಿಸಿದ್ದಾರೆ.

ರಾಜ್ಯದಲ್ಲಿ 33000 ಶಂಕಿತರ ಹೋಂ ಕ್ವಾರಂಟೈನ್‌ ಅಂತ್ಯ!

ಸೋಮವಾರ ಒಟ್ಟು 48 ಮಂದಿಯನ್ನು ಸ್ಕ್ರೀನಿಂಗ್‌ ತಪಾಸಣೆಗೆ ಒಳಪಡಿಸಲಾಗಿತ್ತು. ಇಎಸ್‌ಐ ಆಸ್ಪತ್ರೆಯಲ್ಲಿ ಒಟ್ಟು 28 ಮಂದಿ ಕ್ವಾರಂಟೈನ್‌ನಲ್ಲಿದ್ದರೆ, ಜಿಲ್ಲೆಯಲ್ಲಿ 169 ಮಂದಿ 28 ದಿನಗಳ ದಿನಗಳ ಹೋಮ್‌ ಕ್ವಾರಂಟೈನ್‌ ಅವಧಿಯನ್ನು ಯಶಸ್ವಿಯಾಗಿ ಸಂಪೂರ್ಣಗೊಳಿಸಿದ್ದಾರೆ. 4 ಮಂದಿಯನ್ನು ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಿ ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ.

click me!