ಸಾರಾಯಿ ಆಗ್ರ​ಹಿಸಿ ಆತ್ಮಹತ್ಯೆ ಬೆದರಿಕೆ ಒಡ್ಡಿದ ಕಾರ್ಮಿಕ

By Kannadaprabha NewsFirst Published Mar 31, 2020, 8:01 AM IST
Highlights

ಲಾಕ್‌ಡೌನ್‌ನಿಂದ ಕುಡಿಯುವುದಕ್ಕೆ ಸಾರಾಯಿ ಸಿಗದೆ, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾ ತಿರುಗುತ್ತಿದ್ದ ಕಾರ್ಮಿಕನೊಬ್ಬನನ್ನು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ನಗರದ ಬೋರ್ಡ್‌ ಶಾಲೆಯ ವಲಸೆ ಕಾರ್ಮಿಕರ ಪುರ್ವಸತಿ ಕೇಂದ್ರಕ್ಕೆ ಸೇರಿಸಿದ್ದಾರೆ.

ಉಡುಪಿ(ಮಾ31): ಲಾಕ್‌ಡೌನ್‌ನಿಂದ ಕುಡಿಯುವುದಕ್ಕೆ ಸಾರಾಯಿ ಸಿಗದೆ, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾ ತಿರುಗುತ್ತಿದ್ದ ಕಾರ್ಮಿಕನೊಬ್ಬನನ್ನು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ನಗರದ ಬೋರ್ಡ್‌ ಶಾಲೆಯ ವಲಸೆ ಕಾರ್ಮಿಕರ ಪುರ್ವಸತಿ ಕೇಂದ್ರಕ್ಕೆ ಸೇರಿಸಿದ್ದಾರೆ.

ಈತ ತಮಿಳುನಾಡಿನ ಧರ್ಮಪುರಿಯ ವಲಸೆ ಕಾರ್ಮಿಕ ಧನಪಾಲ್‌ (35). ತೆಂಗಿನಮರ ಹತ್ತಿ ಕಾಯಿ ಕೀಳುವ ಕೆಲಸ ಮಾಡುತ್ತಿದ್ದಾನೆ. ನಾಲ್ಕೈದು ದಿನಗಳಿಂದ ಕುಡಿಯುವುದಕ್ಕೆ ಸಾರಾಯಿ ಸಿಗದೆ ಮಾನಸಿಕ ಅಸ್ವಸ್ಥನಂತಾಗಿದ್ದಾನೆ ಎಂದು ನಿತ್ಯಾನಂದ ಒಳಕಾಡು ತಿಳಿಸಿದ್ದಾರೆ.

ಲಾಕ್‌ಡೌನ್‌ನಿಂದ ಎಲ್ಲಾ ಅಂಗಡಿಗಳು ಬಂದ್; ಮದ್ಯ ಸಿಗದೇ ವ್ಯಕ್ತಿ ಆತ್ಮಹತ್ಯೆ!

ಲಾಕ್‌​ಡೌನ್‌ ಆದೇ​ಶ​ದಿಂದ ಉಡುಪಿ ಜಿಲ್ಲೆಯಲ್ಲಿ ಮದ್ಯ ಸಿಗದೆ ನಿರಾಶೆಯಿಂದ ಮಾ.24 ರಿಂದ 27 ರ ನಡುವೆ ಪ್ರತ್ಯೇಕ ಪ್ರಕ​ರ​ಣ​ಗ​ಳ​ಲ್ಲಿ 6 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಾರ್ಕಳ ತಾಲೂಕಿನ ಬೆದ್ರಪಲ್ಕೆಯ ನಿವಾಸಿ ನಾಗೇಶ್‌ ಆಚಾರ್ಯ (37), ಕಾಪು ತಾಲೂಕಿನ ರಾಮನಗರದ ಶಶಿಧರ ಸುವರ್ಣ (37), ಕಾಪು ತಾಲೂಕಿನ ಬೆಳ್ಳಂಪಳ್ಳಿಯ ವಾಲ್ಟರ್‌ ಡಿಸೋಜ (57), ಕುಂದಾಪುರ ತಾಲೂಕಿನ ಹೆಮ್ಮಾಡಿಯ ರಾಘವೇಂದ್ರ (37), ಕಾಪು ತಾಲೂಕಿನ ಬೋಳಾರ್‌ ಗುಡ್ಡೆಯ ಗಣೇಶ (42) ಮತ್ತು ಹೆಬ್ರಿ ತಾಲೂಕಿನ ಮುನಿಯಾಲು ಗ್ರಾಮದ ಅರವಿಂದ (37) ಅವರು ಆತ್ಮಹತ್ಯೆ ಮಾಡಿಕೊಂಡವರು.

COVID-19 ಅಂತರ ಕಾಯ್ದುಕೊಳ್ಳಲು ದಿನಸಿ ಮಾಲೀಕ ವಿನೂತನ ಐಡಿಯಾಗೆ ಶಶಿ ತರೂರ್ ಫಿದಾ !

ನಿತ್ಯ ಮದ್ಯಪಾನ ಮಾಡುತಿದ್ದವರು ವ್ಯಸನ ತಡೆಯಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅಂತಹವರಿಗೆ ಧೈರ್ಯ ತುಂಬುವುದಕ್ಕೆ ಮಾನಸಿಕ ತಜ್ಞರ ಸಹಾಯ ಪಡೆಯಲಾಗುವುದು. ಅಂತಹ ಮದ್ಯಪಾನಿಗಳ ಮಾಹಿತಿ ಇದ್ದರೆ ಜಿಲ್ಲಾಡಳಿತಕ್ಕೆ ನೀಡುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ

click me!