ಕೊರೋನಾ ಭೀತಿ: ನಿಖಿಲ್-ರೇವತಿ ಮದ್ವೆ ಪ್ಲಾನ್ ದಿಢೀರ್ ಚೇಂಜ್..!

By Suvarna NewsFirst Published Apr 6, 2020, 2:35 PM IST
Highlights

ಮಾಜಿ ಸಿಎಂ ಕುಮಾರಸ್ವಾಮಿ ಅವರು ತಮ್ಮ ಏಕೈಕ ಪುತ್ರನ ಮದುವೆಯನ್ನು ಬಹಳ ಅದ್ದೂರಿಯಾಗಿ ಮಾಡ್ಬೇಕು ಅನ್ಕೊಂಡಿದ್ರು. ಆದ್ರೆ, ಕೊರೋನಾ ಭೀತಿ ಎದುರಾಗಿರುವುದರಿಂದ ನಿಖಿಲ್-ರೇವತಿ ಮದ್ವೆ ಪ್ಲಾನ್ ಚೇಂಜ್ ಮಾಡಿದ್ದಾರೆ. 

ರಾಮನಗರ, (ಏ.06): ಪೂರ್ವ ನಿಗದಿಯಂತೆ ಇದೇ ಏಪ್ರಿಲ್ 17ರಂದು ನಿಖಿಲ್-ರೇವತಿ ವಿವಾಹ ನಡೆಯಲಿದೆ. ಆದ್ರೆ, ಸ್ಥಳ ಮಾತ್ರ ಬದಲಾವಣೆ ಮಾಡಲಾಗಿದೆ.

ಈ ಬಗ್ಗೆ ಸ್ವತಃ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ. ರಾಮನಗರದಲ್ಲಿ ಇಂದು (ಸೋಮವಾರ) ಸುದ್ದಿಗಾರರೊಂದಿಗೆ ಮಾತನಾಡಿರುವ ಕುಮಾಸ್ವಾಮಿ ಅವರು ಪುತ್ರನ ಮದುವೆಯಲ್ಲಿ ಕೆಲ ಬದಲಾವಣೆ ಬಗ್ಗೆ ಬಹಿರಂಗಪಡಿಸಿದರು.

ಪ್ರಪಂಚ ಬಿಡದ ಕೊರೋನಾ ಕೇಡಿ, ನಿಖಿಲ್-ರೇವತಿ ಸರಳ ಮದುವೆಗೆ ರೆಡಿ.

ಏಪ್ರಿಲ್ 17 ಒಳ್ಳೆ ಮುಹೂರ್ತ ಇರುವುದರಿಂದ ಅಂದೇ ನಿಖಿಲ್-ರೇವತಿ ವಿವಾಹ ನರವೇರಲಿದೆ. ಆದ್ರೆ, ಅದು ಮನೆಯ ಆವರಣದಲ್ಲೇ ನಡೆಯಲಿದ್ದು, ಎರಡು ಕುಟುಂಬಸ್ಥರ ಸಮ್ಮುಖದಲ್ಲಿ ಸಿಂಪಲ್ ಆಗಿ ನಡೆಯಲಿದೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಹೆಣ್ಣಿನ ಮನೆಯಲ್ಲಿ ಮದುವೆ ಶಾಸ್ತ್ರ ನಡೆಯುವ ಸಾಧ್ಯತೆಗಳಿವೆ. ಪೂರ್ವ ನಿಗದಿಯಂತೆಯೇ ಏ.17ಕ್ಕೆ ರೇವತಿ-ನಿಖಿಲ್ ಕಲ್ಯಾಣೋತ್ಸವ ನಡೆಯಲಿದೆ.

ಅದ್ದೂರಿ ಆರತಕ್ಷತೆಗೆ ಚಿಂತನೆ
ಹೌದು... ಕೊರೋನಾ ಅಡ್ಡಿಯಾಗಿದ್ದರಿಂದ ಜನರ ನಡುವೆ ಮದುವೆ ಮಾಡಲು ಆಗದು. ಮುಂದೆ ಎಲ್ಲಾ ಸರಿ ಹೋದ ನಂತರ ದೊಡ್ಡಮಟ್ಟದಲ್ಲಿ ಆರತಕ್ಷತೆ ನಡೆಸಲು ಚಿಂತನೆ ನಡೆದಿದೆ ಎಂದು ಕುಮಾರಸ್ವಾಮಿ ಹೇಳಿದರು.

ಈ ಮೊದಲು ನಿಖಿಲ್ ಮದುವೆಯನ್ನು ರಾಮನಗರ ಹಾಗೂ ಚನ್ನಪಟ್ಟಣ ಮಧ್ಯೆ ವಿಜೃಂಬಣೆಯಿಂದ ಮಾಡಲು ನಿರ್ಧರಿಸಲಾಗಿತ್ತು. ಇದಕ್ಕೆ ಬೇಕಾದ ಎಲ್ಲಾ ಪೂರ್ವ ಸಿದ್ದತೆಗಳು ಸಹ ಭರದಿಂದ ಸಾಗಿದ್ದವು. ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರದ ಎಲ್ಲಾ ಮನೆಗಳಿಗೆ ಲಗ್ನ ಪತ್ರಿಕೆ ಹಂಚು ಕಾರ್ಯ ನಡೆದಿತ್ತು. ಆದ್ರೆ, ಕೊರೋನಾ ವಕ್ಕರಿಸಿಕೊಂಡಿದ್ದರಿಂದ ವಿವಾಹ ಸಿದ್ಧತೆಗಳು ಅಲ್ಲಿಯೇ ಸ್ಟಾಪ್ ಆಗಿವೆ.

ಕೊರೋನಾ ಭೀತಿ : ನಿಖಿಲ್ ಕುಮಾರಸ್ವಾಮಿ ವಿವಾಹ ಸ್ಥಳ ಬದಲಾವಣೆ

ರಾಮನಗರ ಕ್ಯಾನ್ಸಲ್‌ ಮಾಡಿದ ಬಳಿಕ ಮದ್ವೆಯನ್ನು ಬೆಂಗಳೂರಿನ ಅರಮನೆ ಮೈದನದಲ್ಲಿ ಮಾಡಲು ಪ್ಲಾನ್ ಮಾಡಲಾಗಿತ್ತು. ಆದ್ರೆ, ಇದೀಗ ಮತ್ತೆ ಮದುವೆ ಸ್ಥಳ ಬದಲಾಗಿದ್ದು, ಮನೆಯಲ್ಲಿಯೇ ಸರಳವಾಗಿ ಮಾಡಲು ಎರಡು ಕುಟುಂಬಗಳು ನಿರ್ಧರಿಸಿವೆ. 

ಒಟ್ಟಿನಲ್ಲಿ ಏಕೈಕ ಪುತ್ರನ ಮದುವೆಯನ್ನು ಕುಮಾರಸ್ವಾಮಿ ಅವರು ಧಾಮ್-ಧೂಮ್ ಆಗಿ ಮಾಡಬೇಕೆಂದು ಕನಸು ಇಟ್ಟುಕೊಂಡಿದ್ದರು.ಆದ್ರೆ, ಕೊರೋನಾ ಬಂದ ಎಲ್ಲಾ ಆಸೆಗಳನ್ನು ನುಚ್ಚು ನೂರು ಮಾಡಿದಂತೂ ಸತ್ಯ.

click me!