ಕೊರೋನಾ ಭೀತಿ: ಮೈಸೂರಿನಲ್ಲಿ 2534 ಜನರ ಮೇಲೆ ನಿಗಾ

By Kannadaprabha NewsFirst Published Apr 1, 2020, 1:09 PM IST
Highlights

ಕೊರೋನಾ ವೈರಸ್‌ ಕಾಯಿಲೆ (ಕೋವಿಡ್‌-19) ಸಂಬಂಧ ಮೈಸೂರು ಜಿಲ್ಲೆಯಲ್ಲಿ ಸೋಮವಾರದವರೆಗೆ ಒಟ್ಟು 2534 ಜನರ ಮೇಲೆ ನಿಗಾ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್‌ ಜಿ. ಶಂಕರ್‌ ತಿಳಿಸಿದ್ದಾರೆ.

ಮೈಸೂರು(ಎ.01): ಕೊರೋನಾ ವೈರಸ್‌ ಕಾಯಿಲೆ (ಕೋವಿಡ್‌-19) ಸಂಬಂಧ ಮೈಸೂರು ಜಿಲ್ಲೆಯಲ್ಲಿ ಸೋಮವಾರದವರೆಗೆ ಒಟ್ಟು 2534 ಜನರ ಮೇಲೆ ನಿಗಾ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್‌ ಜಿ. ಶಂಕರ್‌ ತಿಳಿಸಿದ್ದಾರೆ.

1701 ಮಂದಿಯನ್ನು ಹದಿನಾಲ್ಕು ದಿನ ಹೋಮ್‌ ಐಸೋಲೇಶನ್‌ ಇರಿಸಲಾಗಿದೆ. 821 ಮಂದಿ ಹದಿನಾಲ್ಕು ದಿನಗಳ ಹೋಮ್‌ ಐಸೋಲೇಶನ್‌ ಮುಗಿಸಿದ್ದಾರೆ. ಒಟ್ಟು 95 ಜನರನ್ನು ಸ್ಯಾಂಪಲ್‌ ಪರೀಕ್ಷೆಗೆ ಒಳಪಡಿಸಿದ್ದು, ಅದರಲ್ಲಿ 83 ವ್ಯಕ್ತಿಗೆ ನೆಗಿಟಿವ್‌ ಬಂದಿದೆ.

ರೋಗಿಗಳ ಮನೆ ಬಾಗಿಲಿಗೆ ಮದ್ಯ ಪೂರೈಕೆಗೆ ಸರ್ಕಾರ ನಿರ್ಧಾರ!

12 ಮಂದಿ ಸೋಂಕು ಇರುವುದು ಧೃಡಪಟ್ಟಿದ್ದು, ಅವರನ್ನು ಕೋವಿಡ್‌ ಆಸ್ಪತ್ರೆ ಹಾಗೂ ಇತರೆ ಆಸ್ಪತ್ರೆಗಳ ಐಸೋಲೇಶನ್‌ ವಾರ್ಡ್‌ನಲ್ಲಿ ಇರಿಸಿ ಚಿಕಿತ್ಸೆ ಮುಂದುವರೆಸಲಾಗಿದೆ. ಮತ್ತೊಬ್ಬ ವ್ಯಕ್ತಿಯ ಪರೀಕ್ಷೆಯು ತಿರಸ್ಕೃತವಾಗಿದೆ ಎಂದು ಅವರು ವಿವರಿಸಿದ್ದಾರೆ.

ಕೊರೋನಾ ಸಂಬಂಧಿಸಿದಂತೆ ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಡಳಿತ ಸಹಾಯವಾಣಿ ಸಂಖ್ಯೆ 1077 ಹಾಗೂ ಆರೋಗ್ಯ ಸಹಾಯವಾಣಿ ಸಂಖ್ಯೆ 104 ಸಂಪರ್ಕಿಸಬಹುದು.

click me!