ಲಾಕ್‌ಡೌನ್ ಕಟ್ಟುನಿಟ್ಟಾಗಿ ಪಾಲಿಸಲು ಜಿಲ್ಲಾಡಳಿತಕ್ಕೆ ಸೂಚನೆ| ಮನೆ ಬಿಟ್ಟು ಯಾರೂ ಹೊರ ಬರದಂತೆ ಮನವಿ| ಪೆಟ್ರೋಲ್ ಬಂಕ್ ಬಂದ್| ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ್ ಹೇಳಿಕೆ|
ಗದಗ(ಏ.08): ಗದಗನಲ್ಲಿ ಕೊರೋನಾ ಪಾಸಿಟಿವ್ ಪ್ರಕರಣ ದೃಢಪಟ್ಟ ಬೆನ್ನಲ್ಲೇ ಜಿಲ್ಲಾಡಳಿತ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಜನಜಂಗುಳಿ ನಿಯಂತ್ರಣಕ್ಕೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ತರಕಾರಿ, ಕಿರಾಣಿ ವಾರದಲ್ಲಿ ಎರಡು ಬಾರಿ ಮಾತ್ರ ಸಿಗುತ್ತೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನಿಂದ ಲಾಕ್‌ಡೌನ್ ಕಟ್ಟುನಿಟ್ಟಾಗಿ ಪಾಲಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇನೆ. ಮನೆ ಬಿಟ್ಟು ಯಾರೂ ಹೊರ ಬರದಂತೆ ಮತ್ತೊಮ್ಮೆ ಮನವಿ ಮಾಡುತ್ತೇನೆ. ಪೆಟ್ರೋಲ್ ಬಂಕ್‌ಗಳನ್ನು ಇಂದಿನಿಂದ ಬಂದ್ ಮಾಡಲಾಗಿದೆ. ಅಗತ್ಯ ಸೇವೆಗಳು ವಾಹನಗಳು ಹೊರತು ಪಡಿಸಿ ಬೇರೆ ವಾಹನಗಳು, ಬೈಕ್ ಗಳಿಗೆ ಪೆಟ್ರೋಲ್ ಹಾಕದಂತೆ ಸೂಚನೆ ನೀಡಲಾಗಿದೆ. ಕಟ್ಟುನಿಟ್ಟಾಗಿ ಕ್ರಮ ಪಾಲಿಸುವಂತೆ ಬಂಕ್ ಮಾಲಿಕರಿಗೆ ಸೂಚಿಸುವಂತೆ ಡಿಸಿ ಅವರಿಗೆ ಆದೇಶ ಮಾಡಿದ್ದೇನೆ.
ಯಾವುದೇ ಲಿಂಕ್ ಇಲ್ಲದ ಗದಗದ 80ರ ಅಜ್ಜಿಗೆ ಕೊರೋನಾ! 3ನೇ ಹಂತಕ್ಕೆ ಕರ್ನಾಟಕ?
ಗದಗ ನಗರದ ರಂಗನವಾಡ, ಎಸ್.ಎಂ. ಕೃಷ್ಣಾ ನಗರ ಕಂಟೋನಮೆಂಟ್ ಪ್ರದೇಶ ಅಂತ ಘೋಷಣೆ ಮಾಡಿದ್ದು, ಈ ಎರಡು ಪ್ರದೇಶದ ಜನರಿಗೆ ಜಿಲ್ಲಾಡಳಿತದಿಂದಲೇ ದಿನಸಿ ಸೇರಿ ಅಗತ್ಯ ವಸ್ತುಗಳ ಪೂರೈಕೆ ಮಾಡಲಾಗುವುದು. ಔಷಧಿ, ಆಸ್ಪತ್ರೆಗೆ ಹೋಗುವವರಿಗೆ ಯಾವುದೇ ಸಮಸ್ಯೆ ಇರೋದಿಲ್ಲ ಅಂತ ತಿಳಿಸಿದ ಅವರು, ಮನೆಯಲ್ಲಿ ಇರದೇ ಅನಗತ್ಯವಾಗಿ ಓಡಾಡುವವರು ಬಗ್ಗೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುಂತೆ ಎಸ್ಪಿ ಯತೀಶ್ ಅವರಿಗೆ ಸೂಚಿಸಿದ್ದೇನೆ. ಈ ವಿಷಯದಲ್ಲಿ ಯಾವುದೇ ಮುಲಾಜಿಗೆ ಬೀಳದೇ ಕ್ರಮ ಕೈಗೊಳ್ಳಿ ಎಂದು ತಿಳಿದಿದ್ದೇನೆ ಎಂದರು.