ಪಡಿತರಕ್ಕಾಗಿ ನೂಕುನುಗ್ಗಲು| ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದ ಘಟನೆ| ಸರ್ಕಾರ ಸೂಚನೆ ಮೇರೆಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ| ಆಹಾರ ಇಲಾಖೆಯ ಅಧಿಕಾರಿಗಳು ಜಾಗೃತಿ ಕೈಗೊಳ್ಳುವಲ್ಲಿ ವಿಫಲ|
ಗಂಗಾವತಿ(ಏ.08): ಬಡವರಿಗಾಗಿ ವಿತರಿಸುವ ಪಡಿತರ ಅಕ್ಕಿ, ಗೋಧಿಗಾಗಿ ನೂರಾರು ಜನರು ನೂಕುನುಗ್ಗಲು ನಡೆದಿದೆ. ಕೊರೋನಾ ವೈರಸ್‌ನಿಂದ 21 ದಿನ ಲಾಕ್‌ಡೌನ್ ನಿಯಮ ಮಾಡಿ 2 ತಿಂಗಳ ಪಡಿತರ ಒಂದೇ ಬಾರಿಗೆ ವಿತರಿಸುವಂತೆ ಸರ್ಕಾರ ಸೂಚಿಸಿದ್ದ ಹಿನ್ನಲೆಯಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರವನ್ನು ವಿತರಿಸಲಾಗುತ್ತಿದ್ದು, ಇದರಿಂದಾಗಿ ನಗರದ ಬಹುತೇಕ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರಕ್ಕಾಗಿ ನೂಕು ನುಗ್ಗಲು ನಡೆದಿದೆ.
ಪ್ರತಿಯೊಂದು ಕುಟುಂಬಕ್ಕೂ ಪಡಿತರ ಮುಟ್ಟುವ ವರೆಗೂ ನ್ಯಾಯಬೆಲೆ ಅಂಗಡಿಗಳು ತೆಗೆದಿರುತ್ತವೆ. ಆದರೆ, ಇದರ ಬಗ್ಗೆ ಆಹಾರ ಇಲಾಖೆಯ ಅಧಿಕಾರಿಗಳು ಜಾಗೃತಿ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆಂದು ನಾಗರಿಕರು ದೂರಿದ್ದಾರೆ.
ಕೊರೋನಾ: ಕೊಪ್ಪಳದಲ್ಲಿ ಮತ್ತೆ ಮೂವರ ಸ್ಯಾಂಪಲ್ ನೆಗೆಟಿವ್
ನ್ಯಾಯಬೆಲೆ ಅಂಗಡಿ ಮಾಲೀಕರು ಎಷ್ಟೇ ತಿಳಿಹೇಳಿದರೂ ಜನರು ತಿಳಿದುಕೊಳ್ಳುತ್ತಿಲ್ಲ, ಜನರನ್ನು ನಿಯಂತ್ರಿಸಲು ಪೊಲೀಸರನ್ನು ಕರೆಸಿಕೊಂಡರೂ ಆಗುತ್ತಿಲ್ಲ, ಹಾಗಾಗಿ ಸಂಬಂಧಪಟ್ಟಅಧಿಕಾರಿಗಳು ನ್ಯಾಯಬೆಲೆ ಅಂಗಡಿಗಳ ಕಡೆಗೆ ಗಮನ ಹರಿಸುವುದರೊಂದಿಗೆ ಜನರಿಗೆ ಈ ಕುರಿತು ಜಾಗೃತಿ ಮೂಡಿಸುವ ಕಾರ್ಯವಾಗಬೇಕಿದೆ ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.