ಯುಗಾದಿ ನೆಪ ಮಾಡಿ ಬೆಂಗ್ಳೂರ್ ಬಿಟ್ಟವ್ರಿಗೆ ಹಳ್ಳೀಲಿ ತಪಾಸಣೆ

By Kannadaprabha NewsFirst Published Mar 27, 2020, 3:45 PM IST
Highlights

ಯುಗಾದಿ ನೆಪವೊಡ್ಡಿ ಪಟ್ಟಣಗಳಿಂದ ಸಿರಿಗೆರೆ ದೌಡಾಯಿಸಿದ್ದ 150 ಜನರನ್ನು ಸಿರಿಗೆರೆ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಲಾಗಿದೆ. 43 ಯುವಕ ಮತ್ತು ಯುವತಿಯರು ಹಬ್ಬಕ್ಕೆಂದು ನಗರಗಳಿಂದ ಆಗಮಿಸಿ ಹಳ್ಳಿಗರಿಗೆ ಆತಂಕ ತಂದಿದ್ದರು.

ಚಿತ್ರದುರ್ಗ(ಮಾ.27): ಯುಗಾದಿ ನೆಪವೊಡ್ಡಿ ಪಟ್ಟಣಗಳಿಂದ ಸಿರಿಗೆರೆ ದೌಡಾಯಿಸಿದ್ದ 150 ಜನರನ್ನು ಸಿರಿಗೆರೆ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಲಾಗಿದೆ. 43 ಯುವಕ ಮತ್ತು ಯುವತಿಯರು ಹಬ್ಬಕ್ಕೆಂದು ನಗರಗಳಿಂದ ಆಗಮಿಸಿ ಹಳ್ಳಿಗರಿಗೆ ಆತಂಕ ತಂದಿದ್ದರು.

ಈ ಹಿನ್ನೆಲೆಯಲ್ಲಿ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀ ಅವರೆಲ್ಲರನ್ನೂ ತಪಾಸಣೆಗೆ ಒಳಪಡಿಸಲು ಸೂಚಿಸಿದ್ದರು. ಆರೋಗ್ಯ ಇಲಾಖೆ ಸಿಬ್ಬಂದಿ ಎಲ್ಲರನ್ನೂ ತಪಾಸಣೆಗೆ ಒಳಪಡಿಸಿ ಸೋಂಕು ಇಲ್ಲದ್ದನ್ನು ಖಾತ್ರಿಪಡಿಸಿದ್ದಾರೆ. ಅಲ್ಲದೆ, ಪ್ರತ್ಯೇಕ ವಾಸಕ್ಕೆ ಸೂಚಿಸಿದ್ದಾರೆ.

ಆಸ್ಪತ್ರೆ ಸಾರ್ವಜನಿಕರ ಬೆಂಬಲ:

ಸಿರಿಗೆರೆ ಆಸ್ಪತ್ರೆಯಲ್ಲಿ ರೋಗಿಗಳ ತಪಾಸಣೆಗೆ ಮುಖ್ಯದ್ವಾರ ಸಂಪೂರ್ಣ ಮುಚ್ಚಿ, ಮತ್ತೊಂದು ಕಡೆ ಪ್ರವೇಶಕ್ಕೆ ವ್ಯವಸ್ಥೆ ಮಾಡಲಾಗಿದೆ. ರೋಗಿಗಳು ಅಂತರ ಕಾಯ್ದುಕೊಳ್ಳಲು ಒಂದೊಂದು ಮೀಟರ್‌ಗೆ ಗುರುತು ಮಾಡಲಾಗಿದೆ.

ಮೈಸೂರಿನ 3ನೇ ಕೊರೋನಾ ಪ್ರಕರಣ: ಕೆಲಸ ಮಾಡಿದ್ದು 2 ಗಂಟೆ, 1000 ಸಹೋದ್ಯೋಗಿಗಳಿಗೆ ಟೆನ್ಶನ್!

ರೋಗಿಗಳು ಅಲ್ಲೇ ನಿಂತು ಒಬ್ಬೊಬ್ಬರೇ ಆಸ್ಪತ್ರೆ ಪ್ರವೇಶಿಸಬೇಕು. ಒಳಗೆ ಹೋಗುತ್ತಿದ್ದಂತೆ ಸ್ಯಾನಿಟೈಸರ್‌ ಹಾಕಿ ಅವರ ಕೈಗಳನ್ನು ಸ್ವಚ್ಛ ಮಾಡಿಕೊಳ್ಳಬೇಕು. ವೈದ್ಯರಿಗೂ ಇದು ಅನ್ವಯ. ಇಂತಹ ವ್ಯವಸ್ಥೆ ಜಾರಿಗೆ ತಂದಿರುವ ಆಸ್ಪತ್ರೆಯ ಸಿಬ್ಬಂದಿಯ ಕ್ರಮ ಮೆಚ್ಚುಗೆಗೆ ಪಾತ್ರವಾಗಿದೆ.

ಮಾಸ್ಕ್‌ಗಳ ಲಭ್ಯತೆ ಇಲ್ಲ:

ಆಸ್ಪತ್ರೆಯಲ್ಲಿ ಮಾಸ್ಕ್‌ಗಳ ಕೊರತೆ ಇರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ, ಆರೋಗ್ಯ ಇಲಾಖೆ ಇಲ್ಲಿನ ಬೇಡಿಕೆಗಳನ್ನು ಕೂಡಲೇ ಪೂರೈಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಔಷಧ ಅಂಗಡಿಗಳಲ್ಲೂ ಮಾಸ್ಕ್‌, ಸ್ಯಾನಿಟೈಸರ್‌ ಸಿಗುತ್ತಿಲ್ಲ

ಪೆಟ್ರೋಲ್‌ ಬಂಕ್‌ ರಶ್‌:

ಪೆಟ್ರೋಲ್‌ ಬಂಕ್‌ ಬಂದ್‌ ಆಗುತ್ತವೆಂಬ ಸುದ್ದಿ ಜಾಲತಾಣಗಳಲ್ಲಿ ಹರಿದಾಡಿದ್ದರಿಂದ ಸಿರಿಗೆರೆಯಲ್ಲಿ ಪೆಟ್ರೋಲ್‌ಗಾಗಿ ಗ್ರಾಹಕರು ಮುಗಿಬಿದ್ದರು. ದಿನಸಿ, ಔಷಧ ಅಂಗಡಿ, ಎಟಿಎಂ ಹೊರತುಪಡಿಸಿ ಇನ್ನೆಲ್ಲ ಅಂಗಡಿಗಳು ಬಂದ್‌ ಆಗಿದ್ದವು.

click me!