ಕೊರೋನಾ ಕಾಟ: ನೈರುತ್ಯ ರೈಲ್ವೆಯಿಂದ ಮಾಸ್ಕ್‌, ಸ್ಯಾನಿಟೈಸರ್‌ ಉತ್ಪಾದನೆ

By Kannadaprabha News  |  First Published Apr 4, 2020, 11:03 AM IST

ಮಾಸ್ಕ್‌, ಸ್ಯಾನಿಟೈಸರ್‌ ಸಿದ್ಧಪಡಿಸುತ್ತಿದೆ ನೈರುತ್ಯ ರೈಲ್ವೆ| ನೈರುತ್ಯ ರೈಲ್ವೆಯ ಎಲ್ಲ ನಾಲ್ಕು ವಿಭಾಗದಲ್ಲಿಯೂ ಮಾಸ್ಕ್‌, ಸ್ಯಾನಿಟೈಸರ್‌ ಉತ್ಪಾದನೆ| ಹುಬ್ಬಳ್ಳಿ ವರ್ಕ್‌ಶಾಪ್‌ನಲ್ಲಿ 1225 ಮಾಸ್ಕ್‌ ಹಾಗೂ 400 ಲೀ. ಸ್ಯಾನಿಟೈಸರ್‌ ಉತ್ಪಾದನೆ| 


ಹುಬ್ಬಳ್ಳಿ(ಏ.04): ಮಾರಕ ಕೊರೋನಾ ವೈರಸ್‌ ಹರಡದಿರಲು ಜನತೆಗೆ ಅತೀ ಅಗತ್ಯವಾಗಿರುವ ಮಾಸ್ಕ್‌ ಹಾಗೂ ಸ್ಯಾನಿಟೈಸ್‌ರನ್ನು ನೈರುತ್ಯ ರೈಲ್ವೆ ಯುದ್ಧೋಪಾದಿಯಲ್ಲಿ ಸಿದ್ಧಪಡಿಸುತ್ತಿದ್ದು, ನೂರಾರು ನೌಕರರು ಇದರಲ್ಲಿ ಪಾಲ್ಗೊಂಡಿದ್ದಾರೆ. 

ನೈರುತ್ಯ ರೈಲ್ವೆಯ ಎಲ್ಲ ನಾಲ್ಕು ವಿಭಾಗದಲ್ಲಿ ಈ ಕಾರ್ಯ ನಡೆಸಲಾಗುತ್ತಿದೆ. ಹುಬ್ಬಳ್ಳಿ ವಿಭಾಗದಲ್ಲಿ ಶುಕ್ರವಾರ 450 ಮಾಸ್ಕ್‌ ಹಾಗೂ 220 ಲೀಟರ್‌ ಸ್ಯಾನಿಟೈಸರ್‌ ಉತ್ಪಾದಿಸಲಾಗಿದೆ. ಇನ್ನು ಹುಬ್ಬಳ್ಳಿ ವರ್ಕ್‌ಶಾಪ್‌ನಲ್ಲಿ 1225 ಮಾಸ್ಕ್‌ ಹಾಗೂ 400 ಲೀ. ಸ್ಯಾನಿಟೈಸರ್‌ ಉತ್ಪಾದಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Tap to resize

Latest Videos

ಕೊರೋನಾ ಭೀತಿ: ನೈರುತ್ಯ ರೈಲ್ವೆಯಿಂದ 300 ಐಸೋಲೇಶನ್‌ ವಾರ್ಡ್‌

ಕೊರೋನಾ ವೈರಸ್‌ ಅನ್ನು ದೇಶದಿಂದ ಹೊಡೆದೋಡಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಏ.14 ರ ವರೆಗೆ ಇಡೀ ದೇಶವನ್ನೇ ಲಾಕ್‌ಡೌನ್‌ ಮಾಡಲು ಆದೇಶಿಸಿದ್ದಾರೆ. ಹೀಗಾಗಿ ಯಾವುದೇ ರೀತಿಯಿಂದಲೂ ಸಾರಿಗೆ ಸಂಚಾರ ಸ್ಥಗಿತವಾಗಿದೆ.  
 

click me!