ಕ್ವಾರಂಟೈನ್‌ ತಪ್ಪಿಸಿಕೊಂಡು ಬಂದ ವ್ಯಕ್ತಿಗೆ ಜ್ವರ, ಆಸ್ಪತ್ರೆಗೆ ದಾಖಲು

By Kannadaprabha News  |  First Published Apr 2, 2020, 12:40 PM IST

ಮಂಗ​ಳೂ​ರಿ​ನಲ್ಲಿ ಕ್ವಾರಂಟೈನ್‌ ಸೀಲ್‌ ಹಾಕಿದ್ದ ವ್ಯಕ್ತಿಯೊಬ್ಬ ಮಾ. 24ರಂದು ಅಲ್ಲಿಂದ ತಪ್ಪಿಸಿಕೊಂಡು ಪಟ್ಟ​ಣಕ್ಕೆ ಬಂದಿದ್ದು, ಮಂಗ​ಳ​ವಾರ ತೀವ್ರ ಜ್ವರ ಕಾಣಿಸಿಕೊಡಿದ್ದ​ರಿಂದ ತಾನೇ ಬುಧ​ವಾ​ರ ಕೊರೋನಾ (ತಾಲೂಕು ಆಸ್ಪತ್ರೆ) ಆಸ್ಪ​ತ್ರೆಗೆ ಬಂದು ದಾಖ​ಲಾ​ಗಿ​ದ್ದಾ​ನೆ.


ಯಲ್ಲಾಪುರ(ಏ.02.): ಮಂಗ​ಳೂ​ರಿ​ನಲ್ಲಿ ಕ್ವಾರಂಟೈನ್‌ ಸೀಲ್‌ ಹಾಕಿದ್ದ ವ್ಯಕ್ತಿಯೊಬ್ಬ ಮಾ. 24ರಂದು ಅಲ್ಲಿಂದ ತಪ್ಪಿಸಿಕೊಂಡು ಪಟ್ಟ​ಣಕ್ಕೆ ಬಂದಿದ್ದು, ಮಂಗ​ಳ​ವಾರ ತೀವ್ರ ಜ್ವರ ಕಾಣಿಸಿಕೊಡಿದ್ದ​ರಿಂದ ತಾನೇ ಬುಧ​ವಾ​ರ ಕೊರೋನಾ (ತಾಲೂಕು ಆಸ್ಪತ್ರೆ) ಆಸ್ಪ​ತ್ರೆಗೆ ಬಂದು ದಾಖ​ಲಾ​ಗಿ​ದ್ದಾ​ನೆ.

ವೈದ್ಯರು ಆತನ ಗಂಟಲು ದ್ರವ​ವ​ನ್ನು ಶಿವಮೊಗ್ಗದ ಪರೀಕ್ಷಾ ಕೇಂದ್ರಕ್ಕೆ ಕಳಿಸಿದ್ದು, ಸದ್ಯ ಸೂಕ್ತ ಚಿಕಿತ್ಸೆ ನೀಡಿದ್ದಾರೆ. ಆದರೆ, ಆತ ಮಂಗ​ಳೂ​ರಿ​ನಿಂದ ತಪ್ಪಿ​ಸಿ​ಕೊಂಡು ಯಲ್ಲಾ​ಪು​ರದ ವರೆಗೆ ಹೇಗೆ ಬಂದ ಎನ್ನು​ವುದು ಅಧಿ​ಕಾ​ರಿ​ಗ​ಳಿಗೆ ತಲೆ​ನೋ​ವಾಗಿ ಪರಿಣಮಿ​ಸಿ​ದೆ.

Latest Videos

undefined

ಉತ್ತರ ಕನ್ನಡ ಜಿಲ್ಲೆಯಲ್ಲಿ 26 ಜನಕ್ಕೆ ಮಂಗನ ಕಾಯಿ​ಲೆ

ಇದೇ ವೇಳೆ, ಕೊರೋನಾ ವೈರಸ್‌ ಸೋಂಕಿತನ ಸಂಪರ್ಕಕ್ಕೆ ಬಂದ ಮತ್ತೊಬ್ಬ ವ್ಯಕ್ತಿಯನ್ನು ಯಲ್ಲಾಪುರ ತಾಲೂಕು ಆಸ್ಪತ್ರೆಯಲ್ಲಿ ನಿಗಾ ಘಟಕದಲ್ಲಿ ಇಡಲಾಗಿದೆ. ಬೆಂಗಳೂರಿನಲ್ಲಿ ಸೋಂಕು ತಗುಲಿದ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ ಈತ​ನ​ನ್ನು ಮಂಗಳವಾರ ರಾತ್ರಿ ಕಿರವತ್ತಿಯಿಂದ ವಿಶೇಷ ಆ್ಯಂಬುಲೆನ್ಸ್‌ನಲ್ಲಿ ತಂದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಯಲ್ಲಾಪುರ ತಾಲೂಕು ಆಸ್ಪತ್ರೆಯಲ್ಲಿರುವ ವಿಶೇಷ ಕೊರೋನಾ ವಾರ್ಡಿನಲ್ಲಿ ದಾಖಲಿಸಲಾಗಿದೆ.

ವೈದ್ಯರ ಚೀಟಿ ಇದ್ರೆ ಮದ್ಯ ವಿತರಿಸುವ ನಿರ್ಧಾರ: ಕೇರಳ ಸರ್ಕಾರಕ್ಕೆ ಛೀಮಾರಿ!

ಈತನಿ​ಗೆ ಕೊರೋನಾ ಲಕ್ಷಣಗಳಿಲ್ಲ. ಆದ​ರೂ ಮುಂಜಾಗ್ರತಾ ಕ್ರಮವಾಗಿ ನಿಗಾ ವಹಿಸಲು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರಿನಲ್ಲಿ ಈತ ವಾಸಿಸುತ್ತಿದ್ದ ಅಪಾರ್ಟ್‌ಮೆಂಟ್‌ನ ವ್ಯಕ್ತಿಯೊಬ್ಬನಿಗೆ ಸೋಂಕು ತಗುಲಿದ್ದರಿಂದ ಈ ನಿಗಾ ಘಟಕಕ್ಕೆ ಸೇರಿಸಲಾಗಿದೆ ಎಂದು ಮೂಲಗಳು ಹೇಳಿವೆ.

click me!