ರಾಜ್ಯದಲ್ಲಿ ಮದ್ಯ ಸಿಗದೆ 6 ದಿನದಲ್ಲಿ 15 ಮಂದಿ ಆತ್ಮಹತ್ಯೆ!

Published : Mar 31, 2020, 10:38 AM ISTUpdated : Mar 31, 2020, 10:58 AM IST
ರಾಜ್ಯದಲ್ಲಿ ಮದ್ಯ ಸಿಗದೆ 6 ದಿನದಲ್ಲಿ 15 ಮಂದಿ ಆತ್ಮಹತ್ಯೆ!

ಸಾರಾಂಶ

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮದ್ಯ ಸಿಗದೆ ಹತಾಶೆ| ರಾಜ್ಯದಲ್ಲಿ 6 ದಿನದಲ್ಲಿ 15 ಮಂದಿ ಆತ್ಮಹತ್ಯೆ!

ಬೆಂಗಳೂರು(ಮಾ.31): ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮದ್ಯ ಸಿಗದೆ ಹತಾಶೆಗೊಳಗಾಗಿ ಸೋಮವಾರ ಮತ್ತಿಬ್ಬರು ಆತ್ಮಹತ್ಯೆಗೆ ಶರಣಾಗಿದ್ದು, ಒಟ್ಟಾರೆ ಮಾ.24ರಿಂದೀಚೆಗೆ ಮದ್ಯ ಸಿಗದೆ ರಾಜ್ಯದಲ್ಲಿ 15 ಮಂದಿ ಆತ್ಮಹತ್ಯೆ ಮಾಡಿಕೊಂಡಂತಾಗಿದೆ.

Fact check: ಕುಡುಕರಿಗೆ ಶುಭ ಸುದ್ದಿ, ಬಾರ್, ವೈನ್ ಶಾಪ್ ಓಪನ್, ಕಂಡಿಶನ್ ಅಪ್ಲೈ!

ಕೋಲಾರ ಜಿಲ್ಲೆಯ ಬಂಗಾರಪೇಟೆಯ ದೊಡ್ಡೂರು ಗ್ರಾಮದ ಗಾರೆ ಕೆಲಸಗಾರ ಆನಂದ್‌(30), ಶಿವಮೊಗ್ಗದ ಸಾಗರದ ಹಮಾಲಿ ಕೆಲಸಗಾರ ರಾಮಚಂದ್ರ (45) ಆತ್ಮಹತ್ಯೆ ಮಾಡಿಕೊಂಡವರು. ಇನ್ನು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮಲ್ಲೆಕುಪ್ಪ ಗ್ರಾಮದಲ್ಲಿ ಎಂ.ಶಂಕರ(36) ಮನೆಯಲ್ಲೇ ಕುತ್ತಿಗೆ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ತೀವ್ರ ರಕ್ತಸ್ರಾವದೊಂದಿಗೆ ಒದ್ದಾಡುತ್ತಿದ್ದ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಕೇರಳ ಜನರ ಮದ್ಯ ಖರೀದಿ ಶಿಸ್ತಿಗೆ ಮನಸೋತ ಲಂಕಾ ಕ್ರಿಕೆಟಿಗ ಜಯವರ್ದನೆ!

ಅವರ ಆರೋಗ್ಯ ಸ್ಥಿರವಾಗಿದೆ. ಉಡುಪಿ ಜಿಲ್ಲೆಯಲ್ಲಿ ಕಾಪು ತಾಲೂಕೊಂದರಲ್ಲೇ ಮೂರು ಮಂದಿ ಸೇರಿ ಮಾ.24ರಿಂದ ಈವರೆಗೆ 6 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳೂರಲ್ಲಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು.

PREV
click me!

Recommended Stories

ವೈರಸ್‌ ಕಾಟ: ಕೊರೋನಾ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ, ಸಚಿವ ಪಾಟೀಲ್‌
ಮತ್ತೆ ಕೊರೋನಾರ್ಭಟ: ಪೂಲಿಂಗ್ ಟೆಸ್ಟ್ ಮೊರೆಹೋದ ಆರೋಗ್ಯ ಇಲಾಖೆ, ಏನಿದು ಹೊಸ ಪರೀಕ್ಷೆ?