ಬೊಗಳುತ್ತವೆ ಎಂದು ನಾಯಿಗಳಿಗೆ ಏರ್‌ಗನ್‌ನಿಂದ ಶೂಟ್ ಮಾಡಿದ ಮಹಿಳೆ..!

Kannadaprabha News   | Asianet News
Published : Mar 31, 2020, 10:05 AM ISTUpdated : Mar 31, 2020, 10:18 AM IST
ಬೊಗಳುತ್ತವೆ ಎಂದು ನಾಯಿಗಳಿಗೆ ಏರ್‌ಗನ್‌ನಿಂದ ಶೂಟ್ ಮಾಡಿದ ಮಹಿಳೆ..!

ಸಾರಾಂಶ

ಬೀದಿ ನಾಯಿಗಳು ಬೊಗಳುತ್ತವೆ ಎಂಬ ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಬ್ಬರು ನಾಯಿಗಳ ಮೇಲೆ ಏರ್‌ಗನ್‌ನಿಂದ ಶೂಟ್‌ ಮಾಡಿರುವ ಪ್ರಕರಣ ಸಹಕಾರನಗರದಲ್ಲಿ ನಡೆದಿದೆ.  

ಬೆಂಗಳೂರು(ಮಾ.31): ಬೀದಿ ನಾಯಿಗಳು ಬೊಗಳುತ್ತವೆ ಎಂಬ ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಬ್ಬರು ನಾಯಿಗಳ ಮೇಲೆ ಏರ್‌ಗನ್‌ನಿಂದ ಶೂಟ್‌ ಮಾಡಿರುವ ಪ್ರಕರಣ ಸಹಕಾರನಗರದಲ್ಲಿ ನಡೆದಿದೆ.

ಈ ಸಂಬಂಧ ಸಹಕಾರ ನಗರದ ಪ್ರಶಾಂತ ಅಪಾರ್ಟ್‌ಮೆಂಟ್‌ನ ಫಸನಾ ಆಲೀಶ್‌ ಎಂಬುವರು ಕೊಟ್ಟದೂರಿನ ಮೇರೆಗೆ ಶಾಂತಿವನ ಬಡಾವಣೆಯ ವೈಷ್ಣವಿ ಎಂಬ ಮಹಿಳೆ ವಿರುದ್ಧ ಕೋಡಿಗೆಹಳ್ಳಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫ್ರಾನ್ಸ್‌ ಜಲಾಂತರ್ಗಾಮಿಗಳಿಗೆ 2600 ಜನ ಸತ್ತಿದ್ದು ಗೊತ್ತಿಲ್ಲ!

ಫಸನಾ ಅಲಿ ಅವರು ಮಾ.24ರಂದು ಮಧ್ಯಾಹ್ನ 1 ಗಂಟೆಯಲ್ಲಿ ಶಾಂತಿವನ ಬಡಾವಣೆಯಲ್ಲಿ ಬೀದಿ ನಾಯಿಗಳಿಗೆ ಆಹಾರ ಹಾಕಿದ್ದರು. ಇದೇ ವೇಳೆ ಅಲ್ಲಿನ ನಿವಾಸಿಗಳು ಆಕೆ ಜತೆ ಗಲಾಟೆ ಮಾಡಿದ್ದಾರೆ. ಬೀದಿ ನಾಯಿಗಳಿಗೆ ಆಹಾರ ಹಾಕುವುದರಿಂದ ಸ್ಥಳೀಯರ ಮೇಲೆ ದಾಳಿ ಮಾಡುತ್ತಿವೆ. ಸುಖ-ಸುಮ್ಮನೆ ಬೊಗಳುವ ಜತೆಗೆ ಮಕ್ಕಳು ಮನೆಯಿಂದ ಹೊರಬರಲು ಹೆದರುತ್ತಾರೆ ಎಂದು ಜಗಳವಾಡಿದ್ದರು. ಇದಕ್ಕೆ ಫಸನಾ ಅವರು ಬಿಬಿಎಂಪಿಗೆ ದೂರು ಕೊಡುವಂತೆ ಸೂಚಿಸಿದ್ದರು.

ಮಕ್ಕಳ ಇಷ್ಟದ ಪ್ರಸಿದ್ಧ ಶಕ್ತಿಮಾನ್‌ ಧಾರಾವಾಹಿ ಮತ್ತೆ ಪ್ರಸಾರ!

ಇಷ್ಟಕ್ಕೆ ಆಕ್ರೋಶಗೊಂಡ ವೈಷ್ಣವಿ ಅವರು ಮನೆಯಿಂದ ಏರ್‌ಗನ್‌ ತಂದು ನಾಯಿ ಮೇಲೆ ದಾಳಿ ನಡೆಸಿದ್ದಾರೆ. ಕೃತ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಲು ಮುಂದಾಗಿದ್ದಕ್ಕೆ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಫಸನಾ ಅಲಿ ದೂರು ನೀಡಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

PREV
click me!

Recommended Stories

ವೈರಸ್‌ ಕಾಟ: ಕೊರೋನಾ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ, ಸಚಿವ ಪಾಟೀಲ್‌
ಮತ್ತೆ ಕೊರೋನಾರ್ಭಟ: ಪೂಲಿಂಗ್ ಟೆಸ್ಟ್ ಮೊರೆಹೋದ ಆರೋಗ್ಯ ಇಲಾಖೆ, ಏನಿದು ಹೊಸ ಪರೀಕ್ಷೆ?