ಕೊರೋನಾ ಭೀತಿ: ವಿದೇಶದಿಂದ ಬಂದವರಿಗೆ ಲಾಸ್ಟ್‌ ಚಾನ್ಸ್‌

Kannadaprabha News   | Asianet News
Published : Mar 30, 2020, 07:14 AM IST
ಕೊರೋನಾ ಭೀತಿ: ವಿದೇಶದಿಂದ ಬಂದವರಿಗೆ ಲಾಸ್ಟ್‌ ಚಾನ್ಸ್‌

ಸಾರಾಂಶ

ವಿದೇಶದಿಂದ ಬಂದವರು ಜಿಲ್ಲೆಯಲ್ಲಿ ಅಧಿಕ ಸಂಖ್ಯೆಯಲ್ಲಿದ್ದು, ಇದುವರೆಗೂ ತಪಾಸಣೆಗೆ ಒಳಗಾಗಿಲ್ಲ|ಮಾ. 30 ಮಧ್ಯಾಹ್ನ 1 ಗಂಟೆಯೊಳಗೆ ಘೋಷಿಸಿಕೊಳ್ಳಿ, ಇಲ್ಲದಿದ್ದರೆ ಕಾನೂನು ಕ್ರಮ|ವಿದೇಶದಿಂದ ಬಂದು ಬಚ್ಚಿಟ್ಟುಕೊಂಡಿದ್ದರೇ ಕೂಡಲೇ ಮಾಹಿತಿ ನೀಡಿ|

ಕೊಪ್ಪಳ(ಮಾ.30): ಮಾರ್ಚ್‌ 31 ರಿಂದ ಇಲ್ಲಿಯವರೆಗೂ ವಿದೇಶದಿಂದ ಬಂದವರು ಜಿಲ್ಲೆಯಲ್ಲಿ ಅಧಿಕ ಸಂಖ್ಯೆಯಲ್ಲಿದ್ದು, ಇದುವರೆಗೂ ತಪಾಸಣೆಗೆ ಒಳಗಾಗಿಲ್ಲ. ಇಂಥವರು ಮಾ. 30ರಂದು ಮಧ್ಯಾಹ್ನ 1 ಗಂಟೆಯೊಳಗಾಗಿ ಘೋಷಣೆ ಮಾಡಿಕೊಳ್ಳಲು ಲಾಸ್ಟ್‌ ಚಾನ್ಸ್‌ ನೀಡಲಾಗಿದೆ. ಇಲ್ಲದಿದ್ದರೇ ಕಾನೂನು ಕ್ರಮ ಅನಿವಾರ್ಯ.

ಈ ಕುರಿತು ವಿಪತ್ತು ನಿರ್ವಹಣಾ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಪಿ. ಸುನೀಲ್‌ ಕುಮಾರ ಪ್ರಕಟಣೆ ನೀಡಿದ್ದು, ವಿದೇಶದಿಂದ ಬಂದು ಬಚ್ಚಿಟ್ಟುಕೊಂಡಿದ್ದರೇ ಕೂಡಲೇ ಮಾಹಿತಿ ನೀಡಿ ಎಂದು ಸೂಚಿಸಿದ್ದಾರೆ. ಜಿಲ್ಲಾ ಸರ್ವೇಕ್ಷಣಾಧಿಕಾರಿ ವಿ. ಪ್ರಕಾಶ ಅವರ ಮೊ. 9731414564 ಸಂಖ್ಯೆಗೆ ಕರೆ ಮಾಡಿ, ನೋಂದಾಯಿಸಿಕೊಳ್ಳಬೇಕು ಮತ್ತು ತಪಾಸಣೆಗೆ ಒಳಗೊಳ್ಳಬೇಕು.

ಕೊರೋನಾ ವಿರುದ್ಧ ಸಮರದಲ್ಲಿ ಕೈಜೋಡಿಸಿ: ಖಾಸಗಿ ವೈದ್ಯರಿಗೆ ಸರ್ಕಾರ ಕರೆ

ಮಾಹಿತಿ ನೀಡಿ

ಸಾರ್ವಜನಿಕರು ಸಹ ತಮ್ಮ ಮನೆಯ ಪಕ್ಕದಲ್ಲಿ ವಿದೇಶದಿಂದ ಬಂದವರು ಇದ್ದರೆ ಕೂಡಲೇ ಮಾಹಿತಿ ನೀಡಬೇಕು. ಇದು ನಿಮ್ಮ ಒಳಿತಿಗಾಗಿಯೂ ಇರುವಂತಹದ್ದು. ಆದ್ದರಿಂದ ಮಾಹಿತಿ ನೀಡುವಂತೆ ಕೋರಲಾಗಿದೆ.

ಹೋಂ ಕ್ವಾರಂಟೈನ್‌:

ಕೇವಲ ವಿದೇಶದಿಂದ ಬಂದವರು ಅಷ್ಟೇ ಅಲ್ಲಾ, ನೆರೆಯ ಜಿಲ್ಲೆ ಮತ್ತು ರಾಜ್ಯಗಳಿಂದಲೂ ವಾಪಸ್ಸು ಬಂದವರ ಮನೆಯ ಬಾಗಿಲಿಗೂ ಹೋಂ ಸ್ಟೀಕರ್‌ ಅಂಟಿಸಲಾಗುವುದು. ಇವರು ಸಹ 28 ದಿನಗಳ ಕಾಲ ಮನೆಯಲ್ಲಿಯೇ ಇರಬೇಕು. ಅಲ್ಲದೆ ಇವರಿಗೆ ಆಹಾರ ಸಾಮಗ್ರಿಯನ್ನು ಗ್ರಾಮೀಣ ಟಾಸ್ಕ್‌ಪೋರ್ಸ್‌ ಸಮಿತಿಯಿಂದ ಪೂರೈಕೆ ಮಾಡಲಾಗುವುದು.

ಹದ್ದಿನ ಕಣ್ಣಿಡಲಿ:

ಕೇವಲ ಅಧಿಕಾರಿಗಳು, ಸಿಬ್ಬಂದಿಯೇ ಎಲ್ಲವನ್ನು ಮಾಡಬೇಕು ಎಂದರೆ ಸಾಧ್ಯವಿಲ್ಲ. ಇದಕ್ಕೆ ಸ್ಥಳೀಯರ ಸಹಾಕರ ತೀರಾ ಅಗತ್ಯ. ನಿಮ್ಮೂರು, ನಿಮ್ಮ ಬಡಾವಣೆಯಲ್ಲಿ ನೀವೇ ಹದ್ದಿನ ಕಣ್ಣಿಡಬೇಕು. ಈ ರೀತಿ ಬಂದು ಮನೆಯಿಂದ ಆಚೆ ಬರದಂತೆ ತಡೆಯಬೇಕು. ಇದಕ್ಕಾಗಿ ಸಹಾಯವಾಣಿಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿಕೊಳ್ಳಲಾಗಿದೆ.
 

PREV
click me!

Recommended Stories

ವೈರಸ್‌ ಕಾಟ: ಕೊರೋನಾ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ, ಸಚಿವ ಪಾಟೀಲ್‌
ಮತ್ತೆ ಕೊರೋನಾರ್ಭಟ: ಪೂಲಿಂಗ್ ಟೆಸ್ಟ್ ಮೊರೆಹೋದ ಆರೋಗ್ಯ ಇಲಾಖೆ, ಏನಿದು ಹೊಸ ಪರೀಕ್ಷೆ?