'ಕೊರೋನಾ ಬಿಟ್ಟೋದ್ರೂ ನೀವೇಕೆ ಇಟ್ಕೊಂಡಿದ್ದೀರಿ' ಹುಬ್ಬಳ್ಳಿ ಹೈದನ ಪ್ರಶ್ನೆ

By Suvarna NewsFirst Published Mar 29, 2020, 10:54 PM IST
Highlights

ಕೊರೋನಾ ಸೋಂಕಿಗೆ ಒಳಗಾಗಿ ಹುಬ್ಬಳ್ಳಿ ಕಿಮ್ಸ್ ಗೆ ದಾಖಲಾಗಿದ್ದ ವ್ಯಕ್ತಿ/ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲು ಒತ್ತಡ/ ಗುಣಮುಖನಾಗಿದ್ದರೂ ಇನ್ನು ಏಕೆ ಇಟ್ಟುಕೊಂಡಿದ್ದೀರಿ ಎಂದು ಪ್ರಶ್ನೆ

ಹುಬ್ಬಳ್ಳಿ(ಮಾ.29)   ಇಲ್ಲಿನ ಕಿಮ್ಸನಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಕೊರೋನಾ ದೃಢಪಟ್ಟ ವ್ಯಕ್ತಿ ಗುಣಮುಖನಾಗಿದ್ದಾನೆ. ಗುಣಮುಖನಾಗಿರುವ ವ್ಯಕ್ತಿ ‌ತಮಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವಂತೆ ಒತ್ತಾಯಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಧಾರವಾಡದ ಹೊಸಯಲ್ಲಾಪುರದ ವ್ಯಕ್ತಿಗೆ ಕೊರೋನಾ ದೃಢಪಟ್ಟಿತ್ತು. ಈ ಕಾರಣಕ್ಕಾಗಿ ಆತನನ್ನು ಕಿಮ್ಸನಲ್ಲಿ ದಾಖಲಿಸಲಾಗಿತ್ತು. ಇದೀಗ ಆತ ಪೂರ್ಣ ಗುಣಮುಖನಾಗಿದ್ದಾನೆ ಎಂದು ಹೇಳಲಾಗಿದೆ.

ಕರ್ನಾಟಕದಲ್ಲಿ ಒಟ್ಟು ಪಾಸಿಟಿವ್ ಕೇಸ್ ಎಷ್ಟಾಯ್ತು? ಆತಂಕದ ದಿನಗಳು ಮುಂದಿವೆ

ತಾನು ಗುಣಮುಖನಾಗಿದ್ದು, ತನ್ನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವಂತೆ ಕಿಮ್ಸ್ ವೈದ್ಯರಿಗೆ ಆಗ್ರಹಿಸಿದ್ದಾನೆ. ಗುಣಮುಖನಾದ ಮೇಲೂ‌ ಏಕೆ ಆಸ್ಪತ್ರೆಯಲ್ಲಿ ಇಟ್ಟುಕೊಂಡಿದ್ದೀರಿ ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ಕಿಮ್ಸ್ ವೈದ್ಯರು ಸರ್ಕಾರದ ‌ನಿಯಮದಂತೆ ಬಿಡುಗಡೆ ಮಾಡಲು ಬರಲ್ಲ. ಶಿಷ್ಟಾಚಾರದಂತೆ ಇಂತಿಷ್ಟು ದಿನ ಇರಬೇಕೆಂಬ ನಿಯಮವಿದೆ. ಅದಾದ ಬಳಿಕವೇ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ತಿಳಿ ಹೇಳಿದ್ದಾರೆ ಎಂದು ಕಿಮ್ಸ್ ಮೂಲಗಳು ತಿಳಿಸಿವೆ.

ಕೊರೋನಾ ಶಂಕಿತರು ಮತ್ತು ಸೋಂಕಿತರ ಸಂಖ್ಯೆ ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದ್ದು ಎಲ್ಲ ಕಡೆ ಎಚ್ಚರಿಕೆ ತೆಗೆದುಕೊಳ್ಳಲಾಗಿದೆ. ಇಡೀ ದೇಶವನ್ನೇ ಲಾಕ್ ಡೌನ್ ಮಾಡಿದ್ದರೂ ಕೆಲವರು ಹೊರಗೆ ತಿರುಗಾಡುತ್ತಿದ್ದು ಆತಂಕಕ್ಕೆ ಕೊನೆ ಇಲ್ಲದಂತಾಗಿದೆ.

click me!