ಕೊರೋನಾ ಸೋಂಕು ಹರಡುವುದನ್ನು ತಡೆಯಲು ನ್ಯಾಯಾಲಯಗಳ ಆವರಣದಲ್ಲಿ ಕಕ್ಷಿದಾರರು ಮತ್ತು ವಕೀಲರ ಸಂಖ್ಯೆ ಕಡಿಮೆ ಮಾಡುವ ಉದ್ದೇಶದಿಂದ ಕಲಾಪದ ಅವಧಿಯನ್ನು ಕಡಿಮೆ ಮಾಡಿದ ಪರಿಣಾಮ ಹೈಕೋರ್ಟ್ ಬಣಗುಟ್ಟಿದವು.
ಬೆಂಗಳೂರು(ಮಾ.24): ಕೊರೋನಾ ಸೋಂಕು ಹರಡುವುದನ್ನು ತಡೆಯಲು ನ್ಯಾಯಾಲಯಗಳ ಆವರಣದಲ್ಲಿ ಕಕ್ಷಿದಾರರು ಮತ್ತು ವಕೀಲರ ಸಂಖ್ಯೆ ಕಡಿಮೆ ಮಾಡುವ ಉದ್ದೇಶದಿಂದ ಕಲಾಪದ ಅವಧಿಯನ್ನು ಕಡಿಮೆ ಮಾಡಿದ ಪರಿಣಾಮ ಹೈಕೋರ್ಟ್ ಬಣಗುಟ್ಟಿದವು.
ಸೋಮವಾರದಿಂದ ಹೈಕೋರ್ಟ್‌ನ ಬೆಂಗಳೂರು ಪ್ರಧಾನ ಪೀಠ, ಕಲಬುರಗಿ ಮತ್ತು ಧಾರವಾಡ ಪೀಠಗಳ ಕಲಾಪದ ಅವಧಿಯನ್ನು ಸೋಮವಾರದಿಂದ (ಮಾ. 23) ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ಮಾತ್ರ ನಡೆಸಲು ಅಧಿಸೂಚನೆ ಹೊರಡಿಸಲಾಗಿತ್ತು.
ಕಾರ್ಮಿಕ ವರ್ಗದ ಬದುಕನ್ನೇ ಅಲುಗಾಡಿಸಿದ ಕೊರೋನಾ! ಒಪ್ಪೊತ್ತಿನ ಊಟಕ್ಕೂ ಗತಿ ಇಲ್ಲ
ತುರ್ತು ಪ್ರಕರಣಗಳ ಮಾತ್ರ ವಿಚಾರಣೆ ನಡೆಸಿದ ಹಿನ್ನೆಲೆಯಲ್ಲಿ ಕಡಿಮೆ ಸಂಖ್ಯೆಯಲ್ಲಿ ಪ್ರಕರಣಗಳನ್ನು ವಿಚಾರಣೆಗೆ ನಿಗದಿಯಾಗಿದ್ದವು. ಇದರಿಂದ ಬಹುತೇಕ ನ್ಯಾಯಪೀಠಗಳು ಕಲಾಪಗಳು ಮಧ್ಯಾಹ್ನ 12ಗಂಟೆ ವೇಳೆಗೆ ಪೂರ್ಣಗೊಂಡವು. ಬೆರಳೆಣಿಕೆ ನ್ಯಾಯಪೀಠಗಳು ಮಾತ್ರ ಮಧ್ಯಾಹ್ನ 1.30ರವಗೆ ಕಲಾಪ ನಡೆಸಿದವು.
ಸದಾ ವಕೀಲರು ಹಾಗೂ ಕಕ್ಷಿದಾರರಿಂದ ತುಂಬಿ ತುಳುಕುತ್ತಿದ್ದ ಹೈಕೋರ್ಟ್ ಆವರಣ, ಕೋರ್ಟ್ ಹಾಲ್ ಮತ್ತು ಕಾರಿಡಾರ್‌ಗಳು ಸೋಮವಾರ ಬಣಗುಡುತ್ತಿದ್ದವು. ತುರ್ತು ಪ್ರಕರಣಗಳ ವಿಚಾರಣೆ ಹಾಗೂ ಕಲಾಪ ಅವಧಿ ಕಡಿತ ಮಾಡಲಾಗಿತ್ತು.ಕೋರ್ಟ್‌ಗೆ ಆಗಮಿಸಿದ ವಕೀಲರ ಸಂಖ್ಯೆಯೇ ಕಡಿಮೆ ಇತ್ತು. ಇನ್ನೂ ಹಾಜರಾದ ವಕೀಲರು ತಮ್ಮ ಪ್ರಕರಣ ವಿಚಾರಣೆ ಮುಗಿದ ಕೂಡಲೇ ನ್ಯಾಯಾಲಯದ ಆವರಣ ಬಿಟ್ಟು ತೆರಳಿದರು. ಬೆಳರಣಿಕೆ ಸಂಖ್ಯೆಯಲ್ಲಿ ಕಕ್ಷಿದಾರರರು ಕೋರ್ಟ್‌ಗೆ ಬಂದಿದ್ದರು.
ಆಸನಗಳು ದೂರ ದೂರ
ಕರೋನಾ ಹರಡುವ ಭೀತಿಯಿಂದ ಮುಂಜಾಗ್ರತಾ ಕ್ರಮವಾಗಿ ಕೋರ್ಟ್ ಹಾಲ್‌ಗಳಲ್ಲಿ ಆಸನಗಳನ್ನು ದೂರ ದೂರ ಇಡÜಲಾಗಿತ್ತು. ಖರ್ಚಿಗಳ ನಡುವೆ ಎರಡರಿಂದ ಮೂರು ಅಡಿ ಅಂತರವಿತ್ತು.
ಅಧೀನ ನ್ಯಾಯಾಲಯಗಳ ಅವಧಿಯೂ ಕಡಿತ
ಬೆಂಗಳೂರು ನಗರದಲ್ಲಿರುವ ಸಿಟಿ ಸಿವಿಲ್, ಮ್ಯಾಜಿಸ್ಪ್ರೇಟ್ ಕೋರ್ಟ್‌ಗಳು ಸೋಮವಾರ ಬೆಳಗ್ಗೆ 11ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಲಾಪ ನಡೆದವು. ಮಧ್ಯಾಹ್ನ 3ರ ನಂತರ ನ್ಯಾಯಾಲಯಗಳನ್ನು ಮುಚ್ಚಲಾಗಿತ್ತು.