ಹೋಂ ಕ್ವಾರಂಟೈನ್‌ನಲ್ಲೇ ಗಂಟೆ ಬಾರಿಸಿದ ಆನಂದ್‌ ಸಿಂಗ್‌ ಪುತ್ರಿ!

By Kannadaprabha News  |  First Published Mar 24, 2020, 8:24 AM IST

ಹೋಂ ಕ್ವಾರಂಟೈನ್‌ನಲ್ಲೇ ಗಂಟೆ ಬಾರಿಸಿದ ಆನಂದ್‌ ಸಿಂಗ್‌ ಪುತ್ರಿ!|  ಹೋಂ ಕ್ವಾರಂಟೈನ್‌ನಲ್ಲಿದ್ದರೂ ಗಂಟೆ ಬಾರಿಸಿ ಕೊರೋನಾ ವಿರುದ್ಧ ಹೋರಾಡುತ್ತಿರುವವರಿಗೆ ಅಭಿನಂದನೆ ಸಲ್ಲಿಸಿದ ಅರಣ್ಯ ಸಚಿವ ಆನಂದ್‌ ಸಿಂಗ್‌ ಪುತ್ರಿ ವೈಷ್ಣವಿ


ಬಳ್ಳಾರಿ(ಮಾ.24): ಭಾನುವಾರದ ಜನತಾ ಕರ್ಫ್ಯೂವಿನ ಸಂದರ್ಭದಲ್ಲಿ ಸಂಜೆ 5 ಗಂಟೆಗೆ ಚಪ್ಪಾಳೆ ತಟ್ಟಿಕೊರೋನಾ ವಿರುದ್ಧ ಹೋರಾಡುತ್ತಿರುವವರಿಗೆ ಅಭಿನಂದನೆ ಸಲ್ಲಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಕೊಟ್ಟಕರೆಗೆ, ಹೋಂ ಕ್ವಾರಂಟೈನ್‌ನಲ್ಲಿದ್ದರೂ ಅರಣ್ಯ ಸಚಿವ ಆನಂದ್‌ ಸಿಂಗ್‌ ಪುತ್ರಿ ವೈಷ್ಣವಿ ಸ್ಪಂದಿಸಿದ್ದಾರೆ.

ಬೆಂಗಳೂರಿನ ನಿವಾಸದಲ್ಲಿ ಗೃಹ ನಿಗಾದಲ್ಲಿರುವ ವೈಷ್ಣವಿ ಅಲ್ಲಿಂದಲೇ ಗಂಟೆ ಬಾರಿಸಿ, ಅದನ್ನು ತನ್ನ ತಾತ ಪೃಥ್ವಿರಾಜ್‌ ಸಿಂಗ್‌ ಅವರಿಗೆ ವಾಟ್ಸಪ್‌ ಮಾಡಿದ್ದಾಳೆ. ಇದಕ್ಕೆ ಪ್ರತಿಯಾಗಿ ಹೊಸಪೇಟೆಯಲ್ಲಿರುವ ಪೃಥ್ವಿರಾಜ್‌ ಸಿಂಗ್‌ ತಟ್ಟೆಬಾರಿಸಿದ್ದಾರೆ.

Tap to resize

Latest Videos

ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಇಟಲಿಯಲ್ಲಿ ಓದುತ್ತಿದ್ದ ಆನಂದ ಸಿಂಗ್‌ ಪುತ್ರಿ ವೈಷ್ಣವಿ ಇತ್ತೀಚೆಗಷ್ಟೇ ಬೆಂಗಳೂರಿಗೆ ಬಂದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ.

click me!