ಈ ಇಲಾಖೆಗಳು ಹೊರತುಪಡಿಸಿ ಇತರೆ ನೌಕರರಿಗೆ ರಜೆ ಘೋಷಿಸಿದ ಸರ್ಕಾರ

By Suvarna News  |  First Published Mar 23, 2020, 11:02 PM IST

ಕರ್ನಾಟಕ ಲಾಕ್ ಡೌನ್ ಬೆನ್ನಲ್ಲೇ ರಾಜ್ಯ ಸರ್ಕಾರ ಕೆಲ ಇಲಾಖೆಗಳನ್ನ ಹೊರತುಪಡಿಸಿ ಇನ್ನುಳಿದ ಇಲಾಖೆಗಳ ನೌಕರರಿಗೆ ರಜೆ ಘೋಷಿಸಿದೆ. 


ಬೆಂಗಳೂರು, (ಮಾ.23): ಕೊರೋನಾ ವೈರಸ್ ಇಂದು (ಸೋಮವಾರ) ಒಂದೇ ದಿನ ಬರೊಬ್ಬರಿ 7 ಕೇಸ್‌ಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 33ಕ್ಕೆ ಏರಿಕೆಯಾಗಿದೆ.

ಕರ್ನಾಟಕ ಸಂಪೂರ್ಣ ಲಾಕ್ ಡೌನ್, ಹೊರಗಡೆ ಬಂದ್ರೆ ಹುಷಾರ್..!

Tap to resize

Latest Videos

undefined

ಇದರಿಂದ ಕೊನೆಗೂ ಎಚ್ಚೆತ್ತ ರಾಜ್ಯ ಸರ್ಕಾರ ಮಾ.31ರ ವರೆಗೆ ಇಡೀ ಕರ್ನಾಟಕವನ್ನ ಲಾಕ್ ಡೌನ್ ಮಾಡಿ ಆದೇಶ ಹೊಡಿಸಿದೆ. ಮಾ.24ರಿಂದ ಇಡೀ ಕರ್ನಾಟಕ ಕರ್ನಾಟಕವೇ ಲಾಕ್‌ ಡೌನ್ ಆಗಲಿದ್ದು, ಕೆಲ ಇಲಾಖೆಗಳನ್ನ ಹೊರತುಪಡಿಸಿ ಇನ್ನುಳಿದ ಇಲಾಖೆಯ ನೌಕರರಿಗೆ ರಜೆ ನೀಡಿದೆ.

ಕರ್ನಾಟಕ ಸಂಪೂರ್ಣ ಲಾಕ್: ಏನು ಇರುತ್ತೆ? ಏನು ಇರಲ್ಲ?

ಕರ್ನಾಟಕ ಲಾಕ್ ಡೌನ್ ಘೋಷಿಸಿದ ಬೆನ್ನಲ್ಲೇ ನೌಕರರ ರಜೆ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಕೆಲವು ಇಲಾಖೆಗಳ ಬಿ, ಸಿ ಮತ್ತು ಡಿ ವರ್ಗದ ನೌಕರರಿಗೆ ದಿನಾಂಕ 24/03/2020 ರಿಂದ 31/03/2020 ರವರೆಗೆ ಕಚೇರಿಗೆ ಬರುವುದರಿಂದ ವಿನಾಯಿತಿ ನೀಡಲಾಗಿದೆ. ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಈ ಕ್ರಮ ಕೈಗೊಂಡಿದ್ದು, ಅಗತ್ಯ ಸೇವೆ ಒದಗಿಸುವ 10 ಇಲಾಖೆಗಳಿಗೆ ಈ ವಿನಾಯಿತಿ ಅನ್ವಯಿಸುವುದಿಲ್ಲ. pic.twitter.com/1Qb28znueb

— CM of Karnataka (@CMofKarnataka)

1.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
2. ವೈದ್ಯಕೀಯ ಶಿಕ್ಷಣ ಇಲಾಖೆ
3. ಒಳಾಡಳಿತ ಇಲಾಖೆ
4. ಕಂದಾಯ ಇಲಾಖೆ
5. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
6. ನಗರಾಭಿವೃದ್ಧಿ
7. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ
8.ವಾರ್ತಾ ಮತ್ತು ಸಾರ್ವಜನಕಿಕ ಸಂಪರ್ಕ ಇಲಾಖೆ
9. ಸಾರಿಗೆ
10. ಇಂಧನ
ಈ ಮೇಲಿನ ಎಲ್ಲಾ ಇಲಾಖೆಗಳನ್ನ ಹೊರತುಪಡಿಸಿ ಇನ್ನುಳಿದು ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರೂಪ್-ಬಿ,ಸಿ ಮತ್ತು ಡಿ ಅಧಿಕಾರಿ ಮತ್ತು ನೌಕರರಿಗೆ ದಿನಾಂಕ 24-3-2020ರಿಂದ ಮಾ. 31ರ ವರೆಗೆ ಕಚೇರಿಗೆ ರಜೆ ಘೋಷಿಸಲಾಗಿದೆ. 

ಸರ್ಕಾರಿ ನೌಕರರಿಗೆ ರಜೆ ನೀಡಿದ ರಾಜ್ಯ ಸರ್ಕಾರ: ಕಂಡಿಷನ್ ಅಪ್ಲೈ

click me!