ಕೊರೋನಾ ವಿರುದ್ಧದ ಹೋರಾಟ/ ಸಿಎಂ ಮನವಿಗೆ ಸ್ಪಂದಿಸಿದ ಸಹಕಾರ ಇಲಾಖೆ/ 31 ಕೋಟಿ ರೂ. ಸಂಗ್ರಹ ಮಾಡಿದ ಇಲಾಖೆ/ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರಿಂದ ಮಾಹಿತಿ
ಬೆಂಗಳೂರು(ಏ. 03) ಕೊರೋನಾ ವಿರುದ್ಧ ಹೋರಾಟ ಮಾಡಲು ಲಾಕ್ ಡೌನ್ ಮಾಡಿ ಇಡೀ ದೇಶವನ್ನೆ ಸ್ತಬ್ಧ ಮಾಡಿದ್ದು ಅನಿವಾರ್ಯ. ಮಹಾಮಾರಿ ವಿರುದ್ಧದ ಹೋರಾಟಕ್ಕೆ ನೆರವು ನೀಡಲು ಸ್ವತಃ ಸಿಎಂ ಬಿಎಸ್ ಯಡಿಯೂರಪ್ಪ ಮನವಿ ಮಾಡಿಕೊಂಡಿದ್ದರು.
ವಿವಿಧ ಸಂಘ ಸಂಸ್ಥೆಗಳು, ನಾಗರಿಕರು, ರೈತರು, ಎನ್ ಜಿಒಗಳು, ರಾಜಕೀಯ ನಾಯಕರು ಹೀಗೆ ಎಲ್ಲರೂ ತಮ್ಮ ಕೈಲಾದ ನೆರವನ್ನು ನೀಡುತ್ತಲೇ ಇದ್ದಾರೆ. ಹೋರಾಟ ಸದ್ಯಕ್ಕೆಂತೂ ನಿಂತಿಲ್ಲ. ವೈರಸ್ ಎಂಬ ಪೀಡೆ ತೊಲಗಲೇಬೇಕಾಗಿದೆ.
ಇನ್ಫೋಸಿಸ್ ಸುಧಾ ಮೂರ್ತಿ, ನಟ ಪುನೀತ್ ರಾಜ್ ಕುಮಾರ್, ಧಾರವಾಢದ ರೈತ ಕೊಡುಗೆ ನೀಡಿದ್ದಾರೆ. ಪ್ರಧಾನಿ ಮೋದಿ ಅವರ ತಾಯಿಯೂ ದೇಣಿಗೆ ನೀಡಿ ಹೋರಾಟಕ್ಕೆ ಕೈಜೋಡಿಸಿದ್ದಾರೆ.
ಕೊರೋನಾ ವಿರುದ್ಧ ಹೋರಾಟ: ನಾಲ್ಕೇ ಗಂಟೆಯಲ್ಲಿ 8 ಕೋಟಿ ಜಮಾಯಿಸಿ ಕೊಟ್ಟ ಅಧಿಕಾರಿ...
ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 62 ಕೋಟಿ ಸಂಗ್ರಹವಾಗಿದ್ದು ಸಹಕಾರ ಇಲಾಖೆ ಕಡೆಯಿಂದ 31.85 ಕೋಟಿ ಸಂಗ್ರಹ ಮಾಡಿ ಕೊಡಲಾಗಿದೆ. ಸದ್ಯದ ಮಟ್ಟಿಗೆ ಇದೊಂದು ದಾಖಲೆ ಸಂಗ್ರಹ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ಕೃಷಿ ಮಾರಾಟ ಮಳಿಗೆಗಳಿಂದ 23 ಕೋಟಿ ರೂ. , ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿಂದ 5 ಕೋಟಿ ರೂ., ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದಿಂದ 2 ಕೋಟಿ ರೂ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಂದ 1.22 ಕೋಟಿ ರೂ, , ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದಿಂದ 0.53 ಕೋಟಿ ರೂ., ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್ ವೈಯಕ್ತಿಕವಾಗಿ, 0.10 ಕೋಟಿ ರೂ. ದೇಣಿಗೆ ನೀಡಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.