ಲಾಕ್‌ಡೌನ್ ಬಿಸಿ ಹಸುಳೆ ಶವ ಸಂಸ್ಕಾರಕ್ಕೂ ತಟ್ಟಿದೆ. ಆಕಸ್ಮಿಕವಾಗಿ ಸಾವನ್ನಪ್ಪಿದ ಮಗುವಿನ ಶವವನ್ನು ಸ್ವಗ್ರಾಮಕ್ಕೆ ಕೊಂಡೊಯ್ಯಲಾಗದೆ ಅಸಹಾಯಕರಾಗಿದ್ದ ರಾಯಚೂರು ಮೂಲದ ದಂಪತಿಗೆ ಮಡಿಕೇರಿಯ ಯೂತ್ ಕಮಿಟಿ ನೆರವಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಡಿಕೇರಿ(ಏ.03): ಲಾಕ್‌ಡೌನ್ ಬಿಸಿ ಹಸುಳೆ ಶವ ಸಂಸ್ಕಾರಕ್ಕೂ ತಟ್ಟಿದೆ. ಆಕಸ್ಮಿಕವಾಗಿ ಸಾವನ್ನಪ್ಪಿದ ಮಗುವಿನ ಶವವನ್ನು ಸ್ವಗ್ರಾಮಕ್ಕೆ ಕೊಂಡೊಯ್ಯಲಾಗದೆ ಅಸಹಾಯಕರಾಗಿದ್ದ ರಾಯಚೂರು ಮೂಲದ ದಂಪತಿಗೆ ಮಡಿಕೇರಿಯ ಯೂತ್ ಕಮಿಟಿ ನೆರವಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಾಲ್ಕು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ರಾಯಚೂರು ಜಿಲ್ಲೆ ಜಾಕಿನ್ಗೊಡು ಗ್ರಾಮದ ದಂಪತಿ ದೇವರಾಜ್ ಹಾಗೂ ಸರೋಜಾ ಕೂಲಿ ಕೆಲಸಕ್ಕೆಂದು ಕೊಡಗು ಜಿಲ್ಲೆಯ ಕೂಡಿಗೆಗೆ ಬಂದಿದ್ದರು.
ಭಾರತ ಲಾಕ್‌ಡೌನ್: ಮನೆಗಳಿಗೆ ಔಷಧಿಗಳನ್ನು ವಿತರಿಸಲು ಮುಂದಾದ ಬಿ ವೈ ವಿಜಯೇಂದ್ರ
ಗರ್ಭಿಣಿಯಾಗಿದ್ದ ಸರೋಜಾ ಹೆರಿಗೆ ವೇಳೆ ಮಗು ಆಕಸ್ಮಿಕವಾಗಿ ಸಾವನ್ನಪ್ಪಿತ್ತು. ಆದರೆ ಲಾಕ್‌ಡೌನ್ ಹಿನ್ನೆಲೆ ಮಗುವಿನ ಶವವನ್ನು ಸ್ವಗ್ರಾಮಕ್ಕೆ ಕೊಂಡೊಯ್ಯಲಾಗದೆ ದಂಪತಿ ಅಸಹಾಯಕ ಸ್ಥಿತಿಯಲ್ಲಿದ್ದರು. ಈ ವೇಳೆ ಮಡಿಕೇರಿ ಯೂತ್ ಕಮಿಟಿ ಸಹಾಯಕ್ಕೆ ನಿಂತು ಅವರ ನೇತೃತ್ವದಲ್ಲಿ ಮಡಿಕೇರಿಯಲ್ಲಿಯೇ ಅಂತ್ಯಸಂಸ್ಕಾರ ಮಾಡಲಾಯಿತು. ಬಳಿಕ ವಾಹನದ ಮೂಲಕ ದಂಪತಿಯನ್ನು ಬೆಂಗಳೂರಿಗೆ ಕಳುಹಿಸಿ ಯುತ್ ಕಮಿಟಿ ಸದಸ್ಯರು ಮಾನೀಯತೆ ಮೆರೆದರು.