ಕೇರಳದಿಂದ ನಡೆದುಕೊಂಡು ಕೊಡಗಿಗೆ ಬಂದ 133 ಕಾರ್ಮಿಕರಿಗೆ ಗೃಹಬಂಧನ

By Suvarna NewsFirst Published Mar 28, 2020, 8:08 AM IST
Highlights

ಕೇರಳದಿಂದ ನಡೆದುಕೊಂಡು ಕೊಡಗಿಗೆ ಬಂದು 133 ಜನರನ್ನು ಹೋಂ ಕ್ವಾರೆಂಟೈನ್‌ನಲ್ಲಿರಿಸಲಾಗಿದೆ. ಎಲ್ಲರನ್ನೂ ಥರ್ಮಲ್‌ ಸ್ಕ್ರೀನಿಂಗ್‌ ಹಾಗೂ ವಿವಿಧ ತಪಾಸಣೆಗೊಳಪಡಿಸಿದರು. ಬಳಿಕ ಅವರೆಲ್ಲರನ್ನೂ ಎರಡು ಗುಂಪುಗಳಾಗಿ ಮಾಡಿ ಬಾಳುಗೋಡಿನ ಏಕಲವ್ಯ ಶಾಲೆ ಹಾಗೂ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಗೃಹಬಂಧನದಲ್ಲಿಡಲಾಗಿದೆ.

ವಿರಾಜಪೇಟೆ(ಮಾ.28): ರಾಜ್ಯದ ರಾಯಚೂರು, ಗದಗ, ಯಾದಗಿರಿ, ಬಿಜಾಪುರದಿಂದ ಉದ್ಯೋಗ ಅರಸಿ ಕೇರಳದ ಕಣ್ಣೂರು, ತಲಚೇರಿ, ಕೂತುಪರಂಬು ಸೇರಿದಂತೆ ವಿವಿಧ ಸ್ಥಳಗಳಿಗೆ ವಲಸೆ ತೆರಳಿದ್ದ ಸುಮಾರು 21 ಮಹಿಳೆಯರು ಸೇರಿದಂತೆ 133 ಮಂದಿ ಕಾರ್ಮಿಕರು ಕಾಲ್ನಡಿಗೆಯಲ್ಲಿ ಮಾಕುಟ್ಟಮೂಲಕ ಶುಕ್ರವಾರ ಬೆಳಗ್ಗೆ ಪೆರುಂಬಾಡಿಗೆ ಬಂದಾಗ ತಾಲೂಕು ಆಡಳಿತ ಅವರೆಲ್ಲರನ್ನೂ ಥರ್ಮಲ್‌ ಸ್ಕ್ರೀನಿಂಗ್‌ ಹಾಗೂ ವಿವಿಧ ತಪಾಸಣೆಗೊಳಪಡಿಸಿದರು. ಬಳಿಕ ಅವರೆಲ್ಲರನ್ನೂ ಎರಡು ಗುಂಪುಗಳಾಗಿ ಮಾಡಿ ಬಾಳುಗೋಡಿನ ಏಕಲವ್ಯ ಶಾಲೆ ಹಾಗೂ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಗೃಹಬಂಧನದಲ್ಲಿಡಲಾಗಿದೆ.

ಕೇರಳದ ರಾಜ್ಯದಲ್ಲಿಯೂ ನಿರಂತರವಾಗಿ ಲಾಕ್‌ಡೌನ್‌ ಇರುವುದರಿಂದ ಅಲ್ಲಿನ ಕಾಫಿತೋಟಗಳಲ್ಲಿ ಕರ್ನಾಟಕದಿಂದ ವಲಸೆ ಹೋದ ಕಾರ್ಮಿಕರಿಗೆ ಕೆಲಸವಿಲ್ಲದ್ದರಿಂದ ಕೊರೋನಾ ವೈರಸ್‌ನ ಮುಂಜಾಗ್ರತಾ ಕ್ರಮವಾಗಿ ಎಲ್ಲ ಕಾರ್ಮಿಕರು ಕೇರಳದಿಂದ ನಡೆದುಕೊಂಡು ಬಂದು ಕರ್ನಾಟಕವನ್ನು ತಲುಪಿದ್ದಾರೆ.

ಮನೆಯಲ್ಲಿರುವುದೇ ಕೊರೋನಾಗೆ ಮದ್ದು: ಕೊಪ್ಪಳದ ಗವಿಸಿದ್ಧೇಶ್ವರ ಶ್ರಿಗಳ ಸಂದೇಶ

ಕೊಂಡಗೇರಿ ಬಫರ್‌ ಜೋನ್‌ನಲ್ಲಿರುವ 700 ಮಂದಿ ಹಾಗೂ ಹೋಂ ಕ್ವಾರಂಟೇನ್‌ನಲ್ಲಿರುವ 75 ಕುಟುಂಬಗಳಿಗೆ ಗುರುವಾರ ಎರಡನೇ ಬಾರಿಗೆ ಅಗತ್ಯ ಪಡಿತರ ಸಾಮಗ್ರಿಗಳನ್ನು ವಿತರಿಸಲಾಗಿದೆ. ಕಂದಾಯ ಅಧಿಕಾರಿಗಳು, ಗ್ರಾಮ ಸೇವಕರು, ಆಯ್ದ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು ಕೊಂಡಗೇರಿ ಬಳಿಯ ಕೆಲವು ಅಂತರದಲ್ಲಿ ಶಿಬಿರ ಹೂಡಿ ಗ್ರಾಮದಲ್ಲಿರುವರ ಮೇಲೆ ತೀವ್ರ ನಿಗಾ ಇಟ್ಟಿದ್ದಾರೆ ಎಂದು ತಹಸಿಲ್ದಾರ್‌ ನಂದೀಶ್‌ ತಿಳಿಸಿದ್ದಾರೆ.

ಕೊರೋನಾ ವೈರಸ್ ಭೀತಿ: ಕೇವಲ ನಾಲ್ಕೇ ನಿಮಿಷದಲ್ಲಿ ನಡೆದ ಮದುವೆ!

ಹೋಂ ಕ್ವಾರಂಟೈನ್‌ನಲ್ಲಿರುವ 133 ಮಂದಿಗೂ ಅಡುಗೆಯವರಿಂದ ಆಹಾರದ ವ್ಯವಸ್ಥೆ ಮಾಡಲಾಗಿದೆ. ಇವರೆಲ್ಲರ ಸೂಕ್ತ ಪರೀಕ್ಷೆಯ ನಂತರ ಎಲ್ಲರನ್ನೂ ಅವರವರ ಊರಿಗೆ ಕಳುಹಿಸಲಾಗುವುದು ಎಂದು ತಾಲೂಕು ತಹಸೀಲ್ದಾರ್‌ ನಂದೀಶ್‌ ತಿಳಿಸಿದರು.

click me!