ಕೊರೋನಾ ವೈರಸ್ ಭೀತಿ: ಕೇವಲ ನಾಲ್ಕೇ ನಿಮಿಷದಲ್ಲಿ ನಡೆದ ಮದುವೆ!

By Suvarna NewsFirst Published Mar 28, 2020, 7:45 AM IST
Highlights

ಕೇವಲ ನಾಲ್ಕೇ ನಿಮಿಷದಲ್ಲೇ ನಡೆದ ಪ್ರೇಮ ವಿವಾಹ| ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದ ಘಟನೆ| ವರ, ವಧುವಿಗೆ ಮಾಂಗಲ್ಯ ಕಟ್ಟೋ ಮೂಲಕ ಸಿಂಪಲ್ ಆಗಿ|

ಬಳ್ಳಾರಿ(ಮಾ.28): ಕೊರೋನಾ ವೈರಸ್ ಭೀತಿ ನಡುವೆ ಕೇವಲ ನಾಲ್ಕೇ ನಿಮಿಷದಲ್ಲೇ ಪ್ರೇಮ ವಿವಾಹವೊಂದು ನಡೆದ ಘಟನೆ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಿನ್ನೆ(ಶುಕ್ರವಾರ) ನಡೆದಿದೆ. 

ರೋಹಿಣಿ(20) ಮಧು( 25) ಹೆಲ್ತ್ ಎಮರ್ಜೆನ್ಸಿಯಲ್ಲಿ ಮದುವೆಯಾದ ಜೋಡಿಯಾಗಿದೆ. ಇವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಹೀಗಾಗಿ ಎರಡೂ ಕುಟುಂಬಗಳು ಒಪ್ಪಿಗೆ ಪಡೆದು ಎರಡೂ ಕುಡುಂಬಗಲು ಒಟ್ಟಿಗೆ ಸೇರಿ ಮದುವೆ ಮಾಡಿದ್ದಾರೆ. ಆದರೆ, ಕೊರೋನಾ ವೈರಸ್‌ ಭಯದಿಂದ ಈ ಮದುವೆ ಜನರೇ ಬಂದಿಲ್ಲ. ವರ, ವಧುವಿಗೆ ಮಾಂಗಲ್ಯ ಕಟ್ಟೋ ಮೂಲಕ ಸಿಂಪಲ್ ಆಗಿ ಮದುವೆಯಾಗಿದೆ. ಸಿದ್ದಾಪುರ ಗ್ರಾಮದ ಮಲಿಯಮ್ಮ ದೇವಿಯ ಗುಡಿಯಲ್ಲಿ ಮದುವೆ ನಡೆದಿದೆ. 

ರಾಜ್ಯದಲ್ಲಿ ಒಂದೇ ದಿನ 14 ಮಂದಿಗೆ ವೈರಸ್‌: 3ನೇ ಬಲಿ!

ಯುವಕ, ಯುವತಿಯ ಮನೆಯಲ್ಲಿ ಮದುವೆ ಮಾಡಲು ತೀರ್ಮಾಣ ಮಾಡಿದಾಗ ಇವರಿಬ್ಬರು ಪ್ರೀತಿಸುತ್ತಿರುವ ವಿಷಯ ಗೊತ್ತಾಗಿದೆ. ಹೀಗಾಗಿ ಅವಸರದಲ್ಲಿ ‌ಮದುವೆ ಮಾಡಲಾಗಿದೆ.

ಮಹಾಮಾರಿ ಕೊರೋನಾ ವೈರಸ್‌ ಭಾರತದಿಂದ ತೊಲಗಲಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಏಪ್ರಿಲ್ 14ರ ವರೆಗೆ ಬಾರತ ಲಾಕ್‌ಡೌನ್‌ ಘೋಷಿಸಿದ್ದಾರೆ. ಹೀಗಾಗಿ ಈ ದಿನಗಳಲ್ಲಿ ಯಾವುದೇ ಸಭೆ, ಸಮಾರಂಭ, ಮದುವೆ ಸೇರಿದಂತೆ ಮತ್ತಿತರ ಯಾವುದೇ ಕಾರ್ಯಕ್ರಮಗಳನ್ನ ನಡೆಸದಂತೆ ಆದೇಶ ಹೊರಡಿಸಿದ್ದಾರೆ. 
 

click me!