ಲಾಕ್‌ಡೌನ್: ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಸಿಎಂ, ಹೊರಗೆ ಬಂದ್ರೆ ಅಷ್ಟೇ ಕಥೆ..!

By Suvarna NewsFirst Published Mar 26, 2020, 9:02 PM IST
Highlights

ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯಂತೆ 21 ದಿನಗಳ ಲಾಕ್ ಡೌನ್ ಅನ್ನು ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಮಾನ್ಯ ಮುಖ್ಯಮಂತ್ರಿ ಗಳ ವಿಡಿಯೋ ಕಾನ್ಪೆರೆನ್ಸ್ ನ‌ ಮುಖ್ಯಾಂಶಗಳು ಈ ಕೆಳಿಗಿನಂತಿವೆ.

ಬೆಂಗಳೂರು, (ಮಾ.26): ಕೊರೋನಾ ವೈರಸ್ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಕರ್ನಾಟಕ ಸರ್ಕಾರ ಮತ್ತಷ್ಟು ಬಿಗಿ ಕ್ರಮಗಳನ್ನು ಕೈಗೊಂಡಿದೆ.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಇಂದು (ಗುರುವಾರ) ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಮತ್ತು ಆರೋಗ್ಯ ಅಧಿಕಾರಿಗಳ ಜೊತೆ ವೀಡಿಯೋ ಕಾನ್ಪೆರೆನ್ಸ್ ಸಭೆ ನಡೆಸಿದರು.

ಕೊರೋನಾ ತಡೆಗೆ ಸರ್ಕಾರ ಮತ್ತೊಂದು ದಿಟ್ಟ ಕ್ರಮ: ಮಾಹಿತಿ ಕೊಟ್ರು ರಾಮುಲು

ಈ ಸಭೆಯಲ್ಲಿ ಲಾಕ್ ಡೌನ್ ಮೀರಿ ಹೊರ‌ಬರುವವರನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಿ ಅಂತೆಲ್ಲಾ ಪ್ರಮುಖ ಖಡಕ್ ಸೂಚನೆಗಳನ್ನು ನೀಡಿದ್ದಾರೆ.

ಮಾನ್ಯ ಮುಖ್ಯಮಂತ್ರಿ ಗಳ ವಿಡಿಯೋ ಕಾನ್ಪೆರೆನ್ಸ್ ನ‌ ಮುಖ್ಯಂಶಗಳು

*  ಪ್ರಧಾನ ಮಂತ್ರಿ‌ ಅವರ ಸೂಚನೆಯಂತೆ 21 ದಿನಗಳ ಲಾಕ್ ಡೌನ್ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಅಂತ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ‌ ನೀಡಲಾಯಿತು

* ಲಾಕ್ ಡೌನ್ ಮೀರಿ ಹೊರ‌ಬರುವವರನ್ನು ಅರೆಸ್ಟ್ ಮಾಡುವಂತೆ ಖಡಕ್ ಸೂಚನೆ ನೀಡಲಾಗಿದೆ

* ಎಲ್ಲಾ ಜಿಲ್ಲೆಯ ಬಾರ್ಡರ್ ಗಳನ್ನು ಸೀಲ್ ಮಾಡುವಂತೆ ಸೂಚಿಸಿಲಾಗಿದೆ.

* ವಿಶೇಷವಾಗಿ ಕಾಸರಗೋಡು ಮೂಲಕ ಬರುವವರ ಮೇಲೆ ತೀವ್ರ ನಿಗಾ ಇಡುವಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ.

* ಈಗಾಗಲೇ ಡಿಸ್ಟಲರಿ‌ ಕಂಪನಿಗಳ ಜೊತೆ  ಸ್ಯಾನಿಟೈಸರ್ ಉತ್ಪಾದನೆ‌ ಮಾಡಲು ಸೂಚನೆ ನೀಡಲಾಗಿದ್ದು ಕೆಲವು ಕಂಪನಿಗಳ ಉಚಿತವಾಗಿ ನೀಡಲು‌ ಮುಂದೆ ಬಂದಿವೆ ಅದರ ಸದಾವಕಾಶ ಬಳಸಿಕೊಳ್ಳಲು ಸೂಚನೆ ನೀಡಲಾಯಿತು

* ನಿಮ್ಮ ಏನೇ ಸಮಸ್ಯೆ ಇದ್ದರು ಕೂಡಲೇ ‌ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರಬೇಕು ಅಂತ ಸೂಚನೆ ನೀಡಲಾಯಿತು

* ಇಡೀ ರಾಜ್ಯದಲ್ಲಿ ಖಾಸಗಿ ಕ್ಲಿನಿಕ್ ಗಳು ಬಂದ್ ಮಾಡುವ ಹಾಗಿಲ್ಲ. ಕ್ಲಿನಿಕ್ ಬಂದ್ ಮಾಡುವವರ ವಿರುದ್ದ ಕ್ರಮ‌ಕೈಗೊಳ್ಳಲು ತಿಳಿಸಲಾಗಿದೆ

* ದಿನನಿತ್ಯ ಬಳಸುವ ವಸ್ತುಗಳನ್ನು ಹೆಚ್ಚಿನ‌ ಬೆಲೆಗೆ ಮಾರಾಟ ಮಾಡುವುದು ಕಂಡುಬಂದರೆ ಅಂತವರ ವಿರುದ್ದ ಕ್ರಮ ಕೈಗೊಳ್ಳಲು ಸೂಚನೆ.

* ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 50 ಬೆಡ್ ಕೋವಿಡ್ ಗಾಗಿ‌ ಮೀಸಲಿಡುವಂತೆ ಸೂಚನೆ ನೀಡಲಾಯಿತು

* ವೈದ್ಯರು ಮತ್ತು ನರ್ಸ್ ಗಳಿಗೆ ತೊಂದರೆ ಕೊಡುವ ಮನೆ ಮಾಲೀಕರಿಗೆ ಎಚ್ಚರಿಕೆ ಕೊಡಬೇಕು.

ಸೋಂಕು ಹರಡುವಿಕೆಗೆ ತಡೆ ಕುರಿತಂತೆ ಮುಖ್ಯಮಂತ್ರಿ ಶ್ರೀ ಅವರು ಜಿಲ್ಲಾಧಿಕಾರಿಗಳೊಂದಿಗೆ ನಡೆಸಿದ ತುರ್ತು ವಿಡಿಯೋ ಕಾನ್ಫರೆನ್ಸ್ ನ ಮುಖ್ಯಾಂಶಗಳು. pic.twitter.com/i5EItrOkvH

— CM of Karnataka (@CMofKarnataka)
click me!