ಕೊರೋನಾ ವಿರುದ್ಧ ಹೋರಾಟಕ್ಕೆ ಕೈಜೋಡಿಸಿದ ಯತ್ನಾಳ್

By Suvarna NewsFirst Published Mar 26, 2020, 8:38 PM IST
Highlights

ಕರ್ನಾಟಕದಲ್ಲಿ ನೆರೆ ಹಾವಳಿ ಪರಿಹಾರದ ವಿಚಾರವಾಗಿ ಸ್ವಪಕ್ಷದ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದ ಬಸನಗೌಡ ಪಾಟೀಲ್ ಯತ್ನಾಳ್, ಇದೀಗ ಕೊರೋನಾ ವೈರಸ್ ಪರಿಸ್ಥಿತಿಯಲ್ಲೂ ಮಹತ್ತರ ಕೆಲಸ ಮಾಡಿ ಸುದ್ದಿಯಾಗಿದ್ದಾರೆ.

ಬೆಂಗಳೂರು, (ಮಾ.26): ಮಾಜಿ ಕೇಂದ್ರ ಸಚಿವ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೊರೋನಾ ವಿರುದ್ಧ ಹೋರಾಟಕ್ಕೆ ಸಹಾಯಹಸ್ತ ಚಾಚಿದ್ದು ತಮ್ಮ 3 ತಿಂಗಳ ವೇತನವನ್ನು ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ನೀಡಿದ್ದಾರೆ.

ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ವಿಜಯಪುರ ನಗರ  ಕ್ಷೇತ್ರದ ಬಿಜೆಪಿ ಶಾಸಕ. ಯತ್ನಾಳ್, ಕೊರೋನಾ ಕಾರಣ ಆರ್ಥಿಕ ಸಂಕಷ್ಟ ಎದುರಾಗಿದೆ. ಈ ಸಮಯದಲ್ಲಿ ನಾವು ಸರ್ಕಾರಕ್ಕೆ ನೈತಿಕವಾಗಿಯೂ, ಆರ್ಥಿಕವಾಗಿಯೂ ನೆರವಾಗಬೇಕಿದೆ. ಹೀಗಾಗಿ ಮೂರು ತಿಂಗಳ ವೇತನವನ್ನು ನೀಡುತ್ತಿದ್ದೇನೆ ಎಂದಿದ್ದಾರೆ.

ಕೊರೋನಾ ವಿರುದ್ಧದ ಸಮರಕ್ಕೆ ಆರ್ಥಿಕ ಬಲ ತುಂಬಿದ ಪವನ್ ಕಲ್ಯಾಣ್

ಇನ್ನು ಕೇಂದ್ರ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ  ಸಚಿವರಾದ ಪ್ರಹಾದ್ ಜೊಶಿ ಸಹ ತಮ್ಮ ಒಂದು ತಿಂಗಳ ವೇತನವನ್ನು ಕೊರೋನಾ ವಿರುದ್ಧ ಹೋರಾಟಕ್ಕಾಗಿ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಗೆ ನೀಡಿದ್ದಾರೆ. 

ಮತ್ತೊಂದೆಡೆ ಪವರ್ ಸ್ಟಾರ್ ಪವನ್ ಕಲ್ಯಾಣ್ ಸಹ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಗೆ ತಲಾ 50 ಲಕ್ಷ ರೂ. ಹಾಗೂ ಪ್ರಧಾನಿ ಮಂತ್ರಿ ಪರಿಹಾರ ನಿಧಿಗೆ 1 ಕೋಟಿ. ಒಟ್ಟು ಎರಡು ಕೋಟಿ ರೂ. ನೀಡಲು ಮುಂದಾಗಿರುವುದನ್ನು ಇಲ್ಲಿ ಸ್ಮರಿಸಬಹುದು. 

ದೇಶವ್ಯಾಪಿ ಕೊರೋನಾ ಮಹಾಮಾರಿ ಹಬ್ಬುತ್ತಿದ್ದು ಇದರ ವಿರುದ್ಧ ಹೋರಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಟೊಂಕ ಕಟ್ಟಿ ಸಿದ್ದವಾಗಿದೆ. ಈ ನಡುವೆ ಕೇಂದ್ರ ಸರ್ಕಾರ ದೇಶದ ನಾಗರಿಕರಿಗೆ 1.7 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್ ಗಳ ಘೋಷಣೆ ಮಾಡಿದೆ. 

click me!