ಕೋವಿಡ್ 19 ಬಗ್ಗೆ ಜಗತ್ತೇ ಮಾತಾಡುತ್ತಿದೆ. ಆದರೆ ಕೇಳಲು ಕಿವಿಗಳೇ ರೆಡಿ ಇಲ್ಲ. ಓದಲು ಕಣ್ಣುಗಳು ಹಿಂದೇಟು ಹಾಕುತ್ತಿವೆ. ಇಂಥಾ ಟೈಮ್‌ನಲ್ಲಿ ಕ್ರಿಯೇಟಿವ್ ಕ್ರಿಯೇಟಿವ್ ಮನಸ್ಸುಗಳು ಹಾಡಿನ ಮೂಲಕ ಕೊರೋನಾ ಜಾಗೃತಿ ಮೂಡಿಸಲು ಹೊರಟಿವೆ. ಸೋಷಲ್ ಮೀಡಿಯಾದಲ್ಲಿ ಕೊರೋನಾ ಬಗ್ಗೆ ಮಾಮೂಲಿ ಸಲಹೆಗಳತ್ತ ಕಣ್ಣೆತ್ತಿಯೂ ನೋಡದ ಜನ ಈ ಜನಪ್ರಿಯ ಗಾಯಕಿ ಹಾಗೂ ಅವರ ಮಕ್ಕಳ ಹಾಡನ್ನು ಗಮನವಿಟ್ಟು ಕೇಳಿದ್ದಾರೆ. ಸಾವಿರಾರು ಕಡೆ ಶೇರ್ ಮಾಡಿದ್ದಾರೆ. ಲಕ್ಷಾಂತರ ಜನರನ್ನು ಇದು ತಲುಪಿದೆ.
‘ಕೇಳಿ ಓ ದೇಶ ಬಾಂಧವರೆ, ಕೊರೋನಾ ಕೇಳಿ ಅರಿತವರೆ, ಮನೆಯಲ್ಲೇ ಇದ್ದು ಬಿಡಿ, ಹೊರ ಹೋಗದಿರಿ, ಹಾಗಿರುವುದೊಂದೇ ಸುರಕ್ಷತೆ..’
ಅನ್ನೂ ಈ ಹಾಡೇ ಸಖತ್ ಸದ್ದು ಮಾಡ್ತಿರೋದು. ಈ ಹಾಡನ್ನು ಕಟ್ಟಿದವರು ಕನ್ನಡಪ್ರಭದ ಅಸಿಸ್ಟೆಂಟ್ ಎಡಿಟರ್ ರವಿಶಂಕರ್ ಭಟ್ ಕೆ ಅವರಾದರೆ, ಇದಕ್ಕೆ ದನಿ ನೀಡಿದವರು ಅವರ ಪತ್ನಿ ಗಾಯಕಿ ನಾಗಚಂದ್ರಿಕಾ ಭಟ್, ಮಕ್ಕಳಾದ ಅಚಿಂತ್ಯ ಭಟ್, ಅರ್ಣವ ಭಟ್.
undefined
ಅವನೇ ಶ್ರೀಮನ್ನಾರಾಯಣ ಹಾಡಿನ ಟ್ಯೂನ್‌ಗೆ ರವಿಶಂಕರ ಭಟ್ ಕೊರೋನಾ ಜಾಗೃತಿಯ ಸಾಹಿತ್ಯ ಬರೆದಿದ್ದಾರೆ. ಅವರ ಪತ್ನಿ ಹಿರಿಯ ಗಾಯಕಿ ನಾಗಚಂದ್ರಿಕಾ ಭಟ್ ಹಾಗೂ ಮಕ್ಕಳು ಈ ಹಾಡನ್ನು ಹಾಡಿದ್ದಾರೆ. ಸೋಷಲ್ ಮೀಡಿಯಾಕ್ಕೆ ಪೋಸ್ಟ್ ಆದ ಕೆಲವೇ ಗಂಟೆಗಳಲ್ಲಿ ಈ ಹಾಡು ಸಖತ್ ವೈರಲ್ ಆಗಿದೆ. ಎಲ್ಲರ ಬಾಯಲ್ಲೂ ಕೊರೋನಾ ಹಿನ್ನೆಲೆಯ ‘ಇದು ಚರಿತ್ರೆ ಸೃಷ್ಟಿಸೋ ಅವಕಾಶ’ ಸಾಲುಗಳು ನಲಿದಾಡುತ್ತಿವೆ. ಈ ಮೂಲಕ ಕೊರೋನಾ ಜಾಗೃತಿ ಸಾಮಾನ್ಯ ಜನರ ಕಿವಿಗಳನ್ನು, ಮನಸ್ಸನ್ನು ತಲುಪುತ್ತಿರುವುದರಿಂದ ಕೊರೋನಾ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಬೇಕು ಅನ್ನುವ ಈ ಹಾಡಿನ ಉದ್ದೇಶವೂ ಈಡೇರಿದಂತಾಗಿದೆ. ಕಾಮನ್ ಜನರಿಗೆ ಜನಪ್ರಿಯ ಭಾಷೆಯಲ್ಲೇ ಸಂದೇಶ ತಲುಪಿಸಿದರೆ ಅವರು ಪರಿಣಾಮಕಾರಿಯಾಗಿ ಸ್ವೀಕರಿಸುತ್ತಾರೆ ಅನ್ನೋದಕ್ಕೂ ಉದಾಹರಣೆಯಂತಿದೆ ಈ ವೀಡಿಯೋ.
ಹಾಡು ಹುಟ್ಟಿದ್ದು ಹೇಗೆ?
‘ಅವತ್ತು ಮಧ್ಯರಾತ್ರಿ ಎರಡೂವರೆ ಸುಮಾರಿಗೆ ಸೋಷಲ್ ಮೀಡಿಯಾದಲ್ಲಿ ಒಂದು ವೀಡಿಯೋ ನೋಡಿದೆ. ಜರ್ಮನ್‌ನ ಟೆಕ್ಕಿಯೊಬ್ಬರು ಭಾರತದಂಥಾ ದೇಶ ಕೊರೋನಾ ಎೆಕ್ಟ್‌ನಿಂದ ಪಾರಾಗಲು ಹೇಗೆ ಎಚ್ಚರಿಕೆಯಿಂದಿರಬೇಕು ಅಂತ ಹೇಳ್ತಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಏನನ್ನಾದರೂ ಬರೀಬೇಕು ಅನಿಸಿತು. ಜನಪ್ರಿಯವಾಗಿರುವ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಟೈಟಲ್ ಟ್ರ್ಯಾಕ್‌ನ ಟ್ಯೂನ್ ಬಳಸಿಕೊಂಡು ಒಂದು ಪ್ಯಾರಾ ಹಾಡು ಬರೆದೆ. ಇದನ್ನು ಸೋಷಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದೆ. ಮರುದಿನ ಚೆಕ್ ಮಾಡಿದರೆ, ನೋಡಿದ್ದು ಕೆಲವೇ ಕೆಲವು ಮಂದಿ. ಆಗ ಇದನ್ನೇ ಚಾಲೆಂಜಿಂಗ್ ಆಗಿ ತೆಗೆದುಕೊಂಡು ಮೂರು ಪ್ಯಾರಾದಷ್ಟು ಸಾಹಿತ್ಯ ಬರೆದು ಪತ್ನಿ ಗಾಯಕಿ ನಾಗಚಂದ್ರಿಕಾ ಭಟ್ ಮತ್ತು ಮಕ್ಕಳಲ್ಲಿ ಹಾಡಲು ಹೇಳಿದೆ.. ಆಮೇಲಿನದು ಇತಿಹಾಸ’ ಅನ್ನುತ್ತಾರೆ ರವಿಶಂಕರ ಭಟ್.
ವಿದಾಯದಲ್ಲೂ ಘರ್ಜಿಸಿದ ಲಿಯಾಂಡರ್ ಪೇಸ್; 30 ವರ್ಷ ಮಿನುಗಿತು ಭಾರತೀಯ ಟೆನಿಸ್
ಮಕ್ಕಳ ಖುಷಿಗೆ ಹಾಡಿದೆ, ಪರಿಣಾಮ ನೋಡಿ ಬೆರಗಾದೆ: ನಾಗಚಂದ್ರಿಕಾ ಭಟ್
‘ಕಳೆದ 25 ವರ್ಷಗಳಿಂದ ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಲಕ್ಷಾಂತರ ಹಾಡು ಹಾಡಿದ್ದೇನೆ. ಆದರೆ ಇದು ವಿಭಿನ್ನ ಅನು‘ವ’ ಅನ್ನುತ್ತಾರೆ ನಾಗಚಂದ್ರಿಕಾ ಭಟ್. ‘ಬೇರೆ ಸಂದರ್ಭ ಆಗಿದ್ದರೆ ನಾನು ಹೀಗೆ ಹಾಡುತ್ತಿರಲಿಲ್ಲ. ಆದರೆ ಇದರ ಉದ್ದೇಶ ಒಳ್ಳೆಯದಿತ್ತು. ರಜೆಯಲ್ಲಿದ್ದ ಮಕ್ಕಳಿಗೂ ಖುಷಿ ಬೇಕಿತ್ತು. ಹಾಗಾಗಿ ಜನಪ್ರಿಯ ಟ್ಯೂನ್‌ಗೆ ರವಿ ಹಾಕಿದ ಸಾಹಿತ್ಯವನ್ನು ಹಾಡಲು ಒಪ್ಪಿದೆ. ಮಕ್ಕಳ ಜೊತೆಗೆ ಹಾಡಿದ್ದು ತುಂಬ ಖುಷಿ ಕೊಟ್ಟಿತು. ಆದರೆ ಇದು ಈ ಮಟ್ಟಕ್ಕೆ ಜನಪ್ರಿಯವಾಗುತ್ತದೆ ಅನ್ನುವ ಕಲ್ಪನೆಯೂ ಇರಲಿಲ್ಲ. ಏಕೆಂದರೆ ಇಷ್ಟೊಂದು ವರ್ಷಗಳಿಂದ ಹಾಡುತ್ತಾ ಬರುತ್ತಿರುವ ನನಗೆ ಜನರ ರೆಸ್ಪಾನ್ಸ್ ನೇರವಾಗಿ ಗೊತ್ತಾಗುತ್ತಿದ್ದದ್ದು ಕಡಿಮೆ. ಆದರೆ ಇದರಲ್ಲಿ ಅದು ಗೊತ್ತಾಗಿದೆ. ಈ ಮೂಲಕ ಕೊರೋನಾ ಬಗ್ಗೆ ಜಾಗೃತಿ ಮೂಡಿಸಬೇಕು ಅನ್ನುವ ನಮ್ಮ ಉದ್ದೇಶ ಈಡೇರಿದೆ. ಮಕ್ಕಳೂ ಹಾಡಿ ಖುಷಿ ಪಟ್ಟಿದ್ದಾರೆ’ ಅನ್ನುತ್ತಾವರು.
ಹಾಡು ಹೀಗಿದೆ
ಕೇಳಿ, ಓ ದೇಶ ಬಾಂಧವರೆ
ಕೊರೋನಾ ಕೇಳಿ ಅರಿತವರೆ
ಮನೆಯಲ್ಲೇ ಇದ್ದು ಬಿಡಿ, ಹೊರಹೋಗಬೇಡಿ
ಹಾಗಿರುವುದೊಂದು ಸುರಕ್ಷತೆ...
ಗಾಳಿ ಮಾತಿನ ಬಜಾರು
ಸುದ್ದಿ ಸಾರಿದೆ ಸುಮಾರು
ಸಮಾಜದ ಜವಾಬ್ದಾರಿ ಇರೋರು
ಜನತಾ ಕರ್ಫ್ಯೂ ಪಾಲಿಸುವರು...
ಹ್ಯಾಂಡ್ಸಪ್ ಇದು ನಮ್ಮ ಭಾರತ
ಹ್ಯಾಂಡ್ಸಪ್ ಮನೇಲಿರು ಭಾರತ
ಹ್ಯಾಂಡ್ಸಪ್ ಅದುವೆ ಸುರಕ್ಷತಾ
ಇದು ಚರಿತ್ರೆ ಸೃಷ್ಟಿಸೋ ಅವಕಾಶ..