ಕೊರೋನಾ ವಿರುದ್ಧ ಹೋರಾಡಲು ರಾಜ್ಯ ಸರ್ಕಾರ ಕ್ರಾಂತಿಕಾರಿ ನಡೆ

By Suvarna NewsFirst Published Mar 24, 2020, 4:07 PM IST
Highlights

ಕೊರೋನಾ ವೈರಸ್ ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಮತ್ತೊಂದೆಡೆ ವಿದೇಶಿದಿಂದ ಬಂದು ಕ್ವಾರಂಟೈನ್ ಒಳಪಟ್ಟಿರುವ ವ್ಯಕ್ತಿಗಳು ಸಾರ್ವಜನಿಕ ಪ್ರದೇಶಗಳಲ್ಲಿ ಸಂಚರಿಸುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಅದೇ ರೀತಿ ಸ್ಟ್ಯಾಂಪಿಂಗ್ ಎಲ್ಲರಿಗೂ ಆಗಿಲ್ಲ ಎಂಬ ದೂರುಗಳಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕ್ರಾಂತಿಕಾರಿ ಹೆಜ್ಜೆ ಇಟ್ಟಿದೆ.

ಬೆಂಗಳೂರು, (ಮಾ.24): ಕೊರೋನಾ ವೈರಸ್ ಇಡೀ ದೇಶಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತಿದ್ದು, ಲಾಕ್ ಡೌನ್ ನಡುವಲ್ಲೂ ಹೊರಗೆ ಬರುತ್ತಿರುವ ಜನರನ್ನು ನಿಯಂತ್ರಿಸಲು  ರಾಜ್ಯ ಸರ್ಕಾರಗಳು ಹರಸಾಹಸ ಪಡುತ್ತಿದೆ. 

ಅದರಲ್ಲೂ ವಿದೇಶಗಳಿಂದ ಕರ್ನಾಟಕಕ್ಕೆ ಆಗಮಿಸಿದವರನ್ನು ಏರ್ಪೋರ್ಟ್‌ನಲ್ಲಿ ಹೋಮ್ ಕ್ವಾರಂಟೈನ್ ಸೀಲ್ ಹಾಕಲಾಗುತ್ತಿದೆ. ಆದರೂ ಕೆಲವರು ರಾಜಾರೋಷವಾಗಿ ಸಾರ್ವಜನಿಕವಾಗಿ ಬಿಂದಾಸ್‌ ಆಗಿ ಓಡಾಡುತ್ತಿದ್ದಾರೆ.

ಇವರುಗಳನ್ನ ನಿಯಂತ್ರಿಸಲು ರಾಜ್ಯ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಇವರನ್ನು ರಸ್ತೆ ಬರದಂತೆ ಕ್ರಮಕೈಗೊಳ್ಳಲು ಕರ್ನಾಟಕ ಸರ್ಕಾರ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು, ಕ್ವಾರಂಟೈನ್ ಮಾಡೋಕೆ 20 ಸಾವಿರ ಖಾಸಗಿ ಹೋಟೆಲ್ ರೂಮ್ ಪಡೆಯಲು ಮುಂದಾಗಿದೆ. 

ಕೊರೋನಾ ಎಫೆಕ್ಟ್: ಆದಾಯ ತೆರಿಗೆ ಪಾವತಿದಾರರಿಗೆ ಬಿಗ್ ರಿಲೀಫ್

ಈ ಬಗ್ಗೆ ಇಂದು (ಮಂಗಳವಾರ) ವಿಧಾನಪರಿಷತ್ ಕಲಾಪದಲ್ಲಿ ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ ಅವರು ಸ್ಪಷ್ಟಪಡಿಸಿದರು. ಒಂದು ಲಕ್ಷ ಜನಕ್ಕೆ ಸೋಂಕು ತಗುಲಬಹುದು ಎಂದು ಅಂದಾಜಿಸಲಾಗಿದೆ. ಇದರಿಂದ ಕ್ವಾರಂಟೈನ್ ಮಾಡೋಕೆ 20 ಸಾವಿರ ಹೋಟೆಲ್ ರೂಮ್ ಪಡೆಯಲು ಮುಂದಾಗಿದ್ದು, ಎಲ್ಲಾ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ವೆಂಟಿಲೇಟರ್ ಸೌಲಭ್ಯ ಮಾಡಿಕೊಳ್ಳಲಾಗುತ್ತಿದ್ದು, ಸರ್ಕಾರದಿಂದ ಒಂದು ಸಾವಿರ ವೆಂಟಿಲೇಟರ್ ಆರ್ಡರ್ ಮಾಡಿದ್ದೇವೆ. 15 ಲಕ್ಷ ಮಾಸ್ಕ್ ಆರ್ಡರ್ ಮಾಡಿದ್ದೇವೆ. ಇನ್ನು 5 ಲಕ್ಷ N-95 ಮಾಸ್ಕ್ ಆರ್ಡರ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಈಗಾಗಲೇ ಸಿಎಂ ಬಿಎಸ್ ಯಡಿಯೂರಪ್ಪ ಅವರು ತಜ್ಞ ವೈದ್ಯರೊಂದಿಗೆ ಸಭೆ ನಡೆಸಿದ್ದು,  ಕೊರೋನಾ ವೈರಸ್ ಸೋಂಕು ತಡೆಗೆ ಬೇಕಾದ ಸಲಹೆಗಳನ್ನ ಪಡೆದುಕೊಂಡಿದ್ದಾರೆ ಅದರಂತೆ ರಾಜ್ಯ ಸರ್ಕಾರ ಒಂದೊಂದೆ ಹೆಜ್ಜೆ ಮುಂದಿಡುತ್ತಿದೆ.

ಕೊರೋನಾ ವೈರಸ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಖಾಸಗಿ ವಾಹಿನಿಯೊಂದಕ್ಕೆ ಖ್ಯಾತ ವೈದ್ಯ ಡಾ. ದೇವಿಶೆಟ್ಟಿ ಹೇಳಿರುವಂತೆ ಜನರು ಎಚ್ಚರಿಕೆಯಿಂದ ಇರದಿದ್ದರೆ, ರಾಜ್ಯ ಸರ್ಕಾರದ ಆದೇಶಗಳನ್ನ ಪಾಲಿಸದಿದ್ದರೆ, ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 80 ಸಾವಿರಕ್ಕೆ ಏರಿಕೆಯಾಗುವುದು ಖಚಿತ ಎಂದು ಹೇಳಿದ್ದನ್ನ ಇಲ್ಲಿ ಸ್ಮರಿಸಬಹದು.

ವರದಿ ಪ್ರಕಾರ ಕಳೆದ ಒಂದು ದಿನಗಳಲ್ಲಿ ವಿದೇಶದಿಂದ ಸುಮಾರ್ 30 ಸಾವಿರ ಜನರು ಕರ್ನಾಟಕಕ್ಕೆ ಆಗಮಿಸಿದ್ದಾರೆ. ಅವರು ಎಲ್ಲಿದ್ದಾರೆ? ಅವರಿಗೆ ಸೋಂಕು ತಗುಲಿದ್ಯಾ..? ಎನ್ನುವ ಮಾಹಿತಿ ಕಲೆಹಾಕಲು ರಾಜ್ಯ ಸರ್ಕಾರ ಸಹ ಶಕ್ತಿ ಮೀಡಿ ಪ್ರಯತ್ನಿಸುತ್ತಿದೆ.

ಈಗಾಗಲೇ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ. ಒಂದು ವೇಳೆ ಈ ಹಿಂದೆ ವಿದೇಶ ಪ್ರವಾಸ ಮುಗಿಸಿಕೊಂಡು ಬಂದು ಮನೆಯಲ್ಲಿ ಅಡಗಿಕುಳಿತುಕೊಂಡವರಲ್ಲಿ ಏನಾದರೂ ಸೋಂಕು ಕಾಣಿಸಿಕೊಂಡಿದ್ದೇ ಆದಲ್ಲಿ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ಇಲ್ಲದಂತಾಗುತ್ತದೆ.

ಇದರಿಂದ ಸಾರ್ವಜನಿಕರೇ ಅರ್ಥ ಮಾಡಿಕೊಳ್ಳಬೇಕು. ರಾಜ್ಯ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳನ್ನ ಪಾಲಿಸಿ. ದಯವಿಟ್ಟು ಯಾರು ಮನೆಯಿಂದ ಹೊರಗಡೆ ಬರಬೇಡಿ.

click me!