ಬಿಜೆಪಿ ಕಾರ್ಯಕರ್ತರು ದೇಶಕ್ಕಾಗಿ ಒಂದು ಹೊತ್ತಿನ ಊಟ ಬಿಡಬೇಕು/ ಕರೆ ನೀಡಿದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ/ ಒಂದು ಹೊತ್ತಿನ ಊಟ ಬಿಡಲು ನಿರ್ಧರಿಸಿದ ಸಿಎಂ ಬಿಎಸ್ ಯಡಿಯೂರಪ್ಪ
ನವದೆಹಲಿ(ಏ. 06) ಬಿಜೆಪಿ 40 ವರ್ಷದ ಸಂಸ್ಥಾಪನಾ ದಿನಾಚರಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಬಿಜೆಪಿ ಕಾರ್ಯಕರ್ತರಿಗೆ ಕರೆಯೊಂದನ್ನು ನೀಡಿದ್ದಾರೆ. ಒಂದು ಹೊತ್ತಿನ ಊಟ ಬಿಡುವಂತೆ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವವರಿಗೆ ಆಹಾರ ನೀಡಬೇಕು ಎಂದು ಕೋರಿಕೊಂಡಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರ ಕರೆಗೆ ಬೆಂಬಲ ನೀಡಲು ನಿರ್ಧರಿಸಿರುವ ಸಿಎಂ ಬಿಎಸ್‌ವೈ
ಒಂದು ಹೊತ್ತಿನ ಊಟ ಬಿಡಲು ನಿರ್ಧಾರ ಮಾಡಿದ್ದಾರೆ.
undefined
ಬಿಎಸ್ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಪೋನ್ ಸಂಭಾಷಣೆ
ಕೊರೋನಾ ವಿರುದ್ಧ ದೇಶವೇ ಸಮರ ಸಾರಿರುವ ಹೊತ್ತಿನಲ್ಲಿ ಕಾರ್ಯಕರ್ತರು 100 ರೂ . ದೇಣಿಗೆ ನೀಡಬೇಕು ಎಂದು ನಡ್ಡಾ ಹಿಂದೆ ಕೇಳಿಕೊಂಡಿದ್ದರು. ಪ್ರಪಂಚಕ್ಕೆ ಹೋಲಿಕೆ ಮಾಡಿದರೆ ಭಾರತದಲ್ಲಿ ಕೊರೋನಾ ಪರಿಸ್ಥಿತಿ ಒಂದು ನಿಯಂತ್ರಣದಲ್ಲಿಯೇ ಇದೆ.
ಅಭಿವೃದ್ಧಿ ಹೊಂದಿದ ದೇಶಗಳು ಎಂದು ಕರೆಸಿಕೊಂಡಿರುವ ಅಮೆರಿಕ, ಸ್ಪೇನ್, ಇಟಲಿಯಲ್ಲೇ ಪರಿಸ್ಥಿತಿ ಕೈ ಮೀರಿ ಹೋಗಿದೆ. ಅಲ್ಲಿಯ ನಾಗರಿಕರಿಗೆ ವೈದ್ಯಕೀಯ ನೆರವನ್ನು ನೀಡಲಾಗದ ಸ್ಥಿತಿಗೆ ಬಂದು ತಲುಪಿವೆ.
ದೇಶ ಒಗ್ಗಟ್ಟಾಗಿದೆ, ಕೊರೋನಾ ವಿರುದ್ಧ ಹೋರಾಟ ಮಾಡುತ್ತಿದ್ಧೇವೆ ಎಂದು ಜಗತ್ತಿಗೆ ಸಾರಿ ಹೇಳಲು ಪ್ರಧಾನಿ ನರೇಂದ್ರ ಮೋದಿ ದೀಪ ಬೆಳಗುವ ಕರೆ ನೀಡಿದ್ದರು. ಇಡೀ ದೇಶ ಏಪ್ರಿಲ್ 5 ರ ರಾತ್ರಿ ದೀಪ ಬೆಳಗಿಸಿ ಪ್ರಧಾನಿ ಕರೆಗೆ ಅಭೂತಪೂರ್ವ ಬೆಂಬಲ ನೀಡಿತ್ತು.