ಕೊರೋನಾ ಆತಂಕ: ರೈತನಿಂದ ಉಚಿತ 2 ಲಕ್ಷ ರು. ಮೌಲ್ಯದ ಕಲ್ಲಂಗಡಿ ವಿತರಣೆ

By Kannadaprabha NewsFirst Published Mar 30, 2020, 7:38 AM IST
Highlights

ಕಲ್ಲಂಗಡಿಯನ್ನು ಗ್ರಾಮಸ್ಥರಿಗೆ ಉಚಿತವಾಗಿ ವಿತರಣೆ ಮಾಡಿದ ರೈತ| ಕೊಪ್ಪಳ ತಾಲೂಕಿನ ಹಟ್ಟಿ ಗ್ರಾಮದ ಈರಪ್ಪ ತಳಕಲ್‌ ಎಂಬ ರೈತನಿಂದ ಉಚಿತ ಕಲ್ಲಂಗಡಿ ಹಣ್ಣು ವಿತರಣೆ| ರಸ್ತೆ ಬದಿಯಲ್ಲಿ ಉಪವಾಸ ಬಿದ್ದು ನರಳುತ್ತಿದ್ದ ಭಿಕ್ಷುಕರಿಗೆ ಊಟದ ಪಾಕೇಟ್‌ ಕೊಡುವ ಮೂಲಕ ಮಾದರಿಯಾದ ರೈತ| 

ಕೊಪ್ಪಳ(ಮಾ.30): ತಾಲೂಕಿನ ಹಟ್ಟಿ ಗ್ರಾಮದ ಈರಪ್ಪ ತಳಕಲ್‌ ಅವರು ತಮ್ಮ ಎರಡು ಎಕರೆ ಹೊಲದಲ್ಲಿ ಬೆಳೆದಿದ್ದ ಕಲ್ಲಂಗಡಿಯನ್ನು ಸ್ಥಳೀಯವಾಗಿ ಗ್ರಾಮಸ್ಥರಿಗೆ ಉಚಿತವಾಗಿ ವಿತರಣೆ ಮಾಡಿದ್ದಾರೆ. ಸುಮಾರು 2 ಎಕರೆ ಪ್ರದೇಶದಲ್ಲಿ ಬೆಳೆದಿರುವ 2 ಲಕ್ಷ ರುಪಾಯಿ ಮೌಲ್ಯದ ಕಲ್ಲಂಗಡಿ ವಿತರಣೆ ಮಾಡಿದ್ದಾರೆ. ಅಲ್ಲದೆ ಸಮಾಜಿಕ ಅಂತರ ಕಾಯ್ದುಕೊಂಡೇ ವಿತರಣೆ ಮಾಡಿರುವುದು ವಿಶೇಷ.

ಉಪಹಾರ ಹಂಚಿಕೆ

ಕೊರೋನಾ ವೈರಸ್‌ ಹರಡದಂತೆ ನಿರ್ಬಂಧ ಹೇರಿದ್ದರಿಂದ ಅತಂತ್ರವಾಗಿರುವ ಬೀದಿ ಬದಿಯ ಅನಾಥರು, ಭಿಕ್ಷುಕರಿಗೆ ಕಾರಟಗಿ ಪಟ್ಟಣದ ತಳ್ಳುವ ಬಂಡಿ ಹೋಟೆಲ್‌ ಮಾಲೀಕರೊಬ್ಬರು ಉಪಹಾರ ಮತ್ತು ಊಟದ ಪಾಕೇಟ್‌ ಕೊಟ್ಟು ಮಾನವೀಯತೆ ಮೆರೆದಿದ್ದಾರೆ.

ಭಾರತ್‌ ಲಾಕ್‌ಡೌನ್‌ ಉಲ್ಲಂಘನೆ: 11 ಮಂದಿ ಬಂಧನ

ಪಟ್ಟಣದ ಹಳೆಬಸ್‌ ನಿಲ್ದಾಣ ಬಳಿ ನಿತ್ಯ ತಳ್ಳು ಬಂಡಿಯಲ್ಲಿ ಹೋಟೆಲ್‌ ನಡೆಸುವ ಮೂಲಕ ಜೀವನ ಸಾಗಿಸುವ ಯುವಕ ರಜಾಬ್‌ವಲಿ ಚಾಂದಪಾಶಾ ಇವರು ಪಟ್ಟಣದಲ್ಲಿ ವಿವಿಧಡೆ, ರಸ್ತೆ ಬದಿಯಲ್ಲಿ ಉಪವಾಸ ಬಿದ್ದು ನರಳುತ್ತಿದ್ದ ಭಿಕ್ಷುಕರಿಗೆ ಊಟದ ಪಾಕೇಟ್‌ ಕೊಡುವ ಮೂಲಕ ಮಾದರಿಯಾಗಿದ್ದಾರೆ.

ನವಲಿ ವೃತ್ತ, ದಲಾಲಿ ಬಜಾರ್‌, ಬೂದುಗುಂಪಾ ರಸ್ತೆಯಲ್ಲಿನ ಗಿಡ, ದೇವಸ್ಥಾನದಲ್ಲಿ ಅಶ್ರಯ ಪಡೆದ ಸುಮಾರು 30ಕ್ಕೂ ಹೆಚ್ಚು ಭಿಕ್ಷುಕರು, ಅನಾಥರು, ಬುದ್ಧಿ ಮಾಂದ್ಯರನ್ನು ಹುಡುಕಿಕೊಂಡು ಅವರಿದ್ದ ಸ್ಥಳಕ್ಕೆ ಹೋಗಿ ಭಾನುವಾರ ಉಪಹಾರಕ್ಕೆ ಇಡ್ಲಿ ಚೆಟ್ನಿ ಪಾಕೇಟ್‌ ಮತ್ತು ಮಧ್ಯಾಹ್ನದ ಊಟಕ್ಕೆ ಫಲಾವ್‌ ಪ್ಯಾಕೇಟ್‌ಗಳನ್ನು ಕೊಟ್ಟು ಮಾನವೀಯತೆ ಮೆರೆದಿದ್ದಾರೆ. 
 

click me!