ಕೊರೋನಾ ಭಯಾನೇ ಇಲ್ಲಾ ಇವರಿಗೆ: ನದಿಯಲ್ಲಿ ಸ್ನಾನ ಮಾಡಿ​ದ ಭಕ್ತರು!

By Kannadaprabha NewsFirst Published Mar 25, 2020, 2:50 PM IST
Highlights

ನಿಷೇ​ಧಾಜ್ಞೆ ಇದ್ದರೂ 20-30 ಜನ ಗುಂಪಾಗಿ ಪಲ್ಲಕ್ಕಿ ಹೊತ್ತು ಭೀಮಾ​ನ​ದಿಗೆ ತೆರ​ಳಿ​ದ​ ಜನರು| ಭೀಮಾನದಿಯಲ್ಲಿ ಪುಣ್ಯಸ್ನಾನ ಮಾಡಿ ಶ್ರೀ ಸಂಗಮೇಶ್ವರ ದೇವರ ದರ್ಶನ ಪಡೆದ ಭಕ್ತರು| ಕೆಲವರು ಪಲ್ಲಕ್ಕಿ ಹೊತ್ತುಕೊಂಡು ಪಾದಯಾತ್ರೆಯ ಮೂಲಕ ಆಗಮಿಸಿದರೆ, ಕೆಲವರು ಪಲ್ಲಕ್ಕಿಯನ್ನು ವಾಹನದಲ್ಲಿ ತೆಗೆದುಕೊಂಡು ಬಂದು ಗಂಗಾಸ್ಥಳ ಮಾಡಿದ್ದಾರೆ|
 

ಇಂಡಿ(ಮಾ.25): ಹೆಮ್ಮಾರಿ ಕೊರೋನಾ ವೈರಸ್‌ನಿಂದಾಗಿ ಜಿಲ್ಲೆ​ಯಾ​ದ್ಯಂತ ನಿಷೇ​ಧಾಜ್ಞೆ ಹೊರ​ಡಿ​ಸಿ​ದ್ದರೂ ಯುಗಾದಿ ಅಮಾವಾಸ್ಯೆ ನಿಮಿತ್ತ ಮಂಗಳವಾರ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ ಭಕ್ತರು, ವಿವಿಧ ದೇವರುಗಳ ಪಲ್ಲಕ್ಕಿಗಳು ತಾಲೂಕಿನ ಮಿರಗಿ ಗ್ರಾಮದ ಬಳಿ ಹರಿದಿರುವ ಭೀಮಾನದಿ ಹಾಗೂ ದೊಡ್ಡಹಳ್ಳ ಕೂಡಿರುವ ಕೂಡಲ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. 

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಳಗಾನೂರ, ಚಾಂದಕವಟೆ, ಸಿಂದಗಿ, ಹೂವಿನಹಳ್ಳಿ ಸೇರಿದಂತೆ ಇಂಡಿ ತಾಲೂಕಿನ ಹಲವು ಗ್ರಾಮಗಳ ಪಲ್ಲಕ್ಕಿಗಳ ಭೀಮಾನದಿಯಲ್ಲಿ ಗಂಗಾಸ್ಥಳ ಮಾಡಲಾಯಿತು.ಇಂತಹ ತುರ್ತು ಸಂದರ್ಭದಲ್ಲಿ ದರ್ಶನ, ಗಂಗಾಸ್ನಾನ ಮಂದೂಡುವ ಕೆಲಸವನ್ನು ಸಾರ್ವಜನಿಕರು ಮಾಡಬೇಕಿದೆ. ಯುಗಾದಿ ನಿಮಿತ್ತ ಕೊರೋನಾ ಭಯದ ಮಧ್ಯಯೂ ಭೀಮಾನದಿಯಲ್ಲಿ ಗಂಗಾಸ್ನಾನ ಮಾಡಿದ್ದಾರೆ. ಮಿರಗಿ ಗ್ರಾಮಸ್ಥರು ಪಲ್ಲಕ್ಕಿ ತೆಗೆದುಕೊಂಡು ಬರುವ ವಿವಿಧ ಗ್ರಾಮದ ಜನರಿಗೆ ಸಾಕಷ್ಟು ತಿಳಿವಳಿಕೆ ನೀಡಿದ್ದರೂ ಅದನ್ನು ಲೆಕ್ಕಿಸದೆ, 20ರಿಂದ 30 ಜನ ಗುಂಪಾಗಿ ಪಲ್ಲಕ್ಕಿ ಹೊತ್ತುಕೊಂಡು ಕೂಡಲ ಸಂಗಮದ ಭೀಮಾನದಿಗೆ ತೆರಳಿದರು.

ದಿಲ್ಲಿಯಿಂದ ಹಳ್ಳಿವರೆಗೆ, ಗಲ್ಲಿ ಗಲ್ಲಿಯಲ್ಲೂ ಸೋಶಿಯಲ್ ಡಿಸ್ಟೆನ್ಸಿಂಗ್!

ಭೀಮಾನದಿ ಹಾಗೂ ದೊಡ್ಡಹಳ್ಳ ಕೂಡಿರುವ ಸಂಗಮದ ದಂಡೆಯ ಮೇಲೆ ಶ್ರೀ ಸಂಗಮೇಶ್ವರ ದೇವಾಲಯ ಇದೆ. ಭೀಮಾನದಿಯಲ್ಲಿ ಪುಣ್ಯಸ್ನಾನ ಮಾಡಿ ಶ್ರೀ ಸಂಗಮೇಶ್ವರ ದೇವರ ದರ್ಶನ ಪಡೆದರು. ಕೆಲವರು ಪಲ್ಲಕ್ಕಿ ಹೊತ್ತುಕೊಂಡು ಪಾದಯಾತ್ರೆಯ ಮೂಲಕ ಆಗಮಿಸಿದರೆ, ಕೆಲವರು ಪಲ್ಲಕ್ಕಿಯನ್ನು ವಾಹನದಲ್ಲಿ ತೆಗೆದುಕೊಂಡು ಬಂದು ಗಂಗಾಸ್ಥಳ ಮಾಡಿದರು.

ಕೊರೋನಾ: ಅಪಾ​ಯ​ದ​ಲ್ಲಿ ಇರು​ವ​ವ​ರಿಗೆ ಹೈಡ್ರೋ​ಕ್ಸಿ ಮಾತ್ರೆ ನೀಡಲು ಶಿಫಾರಸು!

ಯುಗಾದಿ ಅಮಾವಾಸ್ಯೆಯಂದು ಭೀಮಾನದಿಯಲ್ಲಿ ಸಾವಿರಾರು ಜನರು ಪುಣ್ಯಸ್ನಾನ ಮಾಡಿ ಪುನೀತರಾಗುತ್ತಾರೆ. ಇದು ಎರಡನೇ ಶ್ರೀಶೈಲ ಎನಿಸಿಕೊಂಡಿದೆ. 101 ಪಲ್ಲಕ್ಕಿಗಳು ಗಂಗಾಸ್ಥಳ ಮಾಡಿಕೊಂಡು ಡೊಳ್ಳು, ಹಲಗೆ, ಗಂಟೆ ಬಾರಿಸುತ್ತ ಪಲ್ಲಕ್ಕಿಗಳ ಮೆರವಣಿಗೆ ಗ್ರಾಮದಲ್ಲಿ ನಡೆಸಿ, ತಮ್ಮೂರಿಗೆ ನಡೆದರು.
 

click me!