ಗರದಲ್ಲಿ ಡಿ.ಸಿ. ಜಗದೀಶ್ ಮತ್ತು ಎಸ್ಪಿ ವಿಷ್ಣುವರ್ಧನ್ ಮಧ್ಯಾಹ್ನದ ಹೊತ್ತಿಗೆ ಹಠಾತ್ ರೌಂಡ್ಸ್ ನಡೆಸಿದರು. ಈ ಸಂದರ್ಭದಲ್ಲಿ ಬಿಗ್ ಬಜಾರ್‌ನಲ್ಲಿ ತರಕಾರಿ ಬೆಲೆ ಏರಿಸಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಡಿಸಿ -ಎಸ್ಪಿ ಅಲ್ಲಿಗೆ ರೈಡ್ ಮಾಡಿದ್ದಾರೆ.
ಉಡುಪಿ(ಮಾ.25): ನಗರದಲ್ಲಿ ಡಿ.ಸಿ. ಜಗದೀಶ್ ಮತ್ತು ಎಸ್ಪಿ ವಿಷ್ಣುವರ್ಧನ್ ಮಧ್ಯಾಹ್ನದ ಹೊತ್ತಿಗೆ ಹಠಾತ್ ರೌಂಡ್ಸ್ ನಡೆಸಿದರು. ಈ ಸಂದರ್ಭದಲ್ಲಿ ಬಿಗ್ ಬಜಾರ್‌ನಲ್ಲಿ ತರಕಾರಿ ಬೆಲೆ ಏರಿಸಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಡಿಸಿ -ಎಸ್ಪಿ ಅಲ್ಲಿಗೆ ರೈಡ್ ಮಾಡಿದರು. ಆಹಾರ ಪದಾರ್ಥ, ತರಕಾರಿಗಳನ್ನು ಅಗತ್ಯದ ವಸ್ತುಗಳಾದ್ದರಿಂದ ಅವುಗಳನ್ನು ಮಾರಾಟ ಮಾಡುವುದಕ್ಕೆ ಬಿಗ್ ಬಜಾರ್‌ಗೆ ಜಿಲ್ಲಾಧಿಕಾರಿ ಪರವಾನಗಿ ನೀಡಿದ್ದರು.
ಆದರೆ ಜಿಲ್ಲಾಧಿಕಾರಿ ಅಲ್ಲಿಗೆ ಹೋದಾಗ ಕೊರೋನಾ ವೈರಸ್ ಹರಡುವುದಕ್ಕೆ ಎಲ್ಲಾ ರೀತಿಯ ಅವಕಾಶಗಳಿರುವುದನ್ನು ಕಂಡರು. ಎ.ಸಿ. ಚಾಲೂ ಇತ್ತು, ಒಳಗೆ ಬರುವ ಗ್ರಾಹಕರ ಕೈಗೆ ಸ್ಯಾನಿಟೈಜರ್ ಹಾಕುತ್ತಿರಲಿಲ್ಲ, ಜನರನ್ನು ಗುಂಪಾಗಿ ಒಳಗೆ ಬಿಡಲಾಗಿತ್ತು. ಇದನ್ನು ಕಂಡು ರೇಗಿದ ಜಿಲ್ಲಾಧಿಕಾರಿ ಅಲ್ಲಿನ ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡರು.
Fact Check: ಕೊರೋನಾ ವೈರಸ್ ಜೀವಿತಾವಧಿ 12 ಗಂಟೆ ನಿಜವೇ?
ಸ್ವಲ್ಪನೂ ಕಾಮನ್ ಸೆನ್ಸ್ ಇಲ್ವೇನ್ರಿ ಇಲ್ವೆನ್ರಿ ನಿಮಗೆ, ಮೊದಲಿನಿಂದಲೂ ನೀವು ಬಹಳ ನಾಟಕ ಆಡ್ತಾ ಇದ್ದೀರಿ ಎಂದರಲ್ಲದೆ, ನಾನೇ ಕಂಪ್ಲೆಂಟ್ ಕೊಡ್ತಿದ್ದೀನಿ, ಅವರ ಮೇಲೆ ಕೇಸು ದಾಖಲಿಸಿ ಎಂದು ಎಸ್ಪಿಗೆ ಸೂಚಿಸಿದರು.