ಕಲಬುರಗಿಯಲ್ಲಿ ಕೊರೋನಾಗೆ ದೇಶದಲ್ಲಿಯೇ ಮೊದಲ ಬಲಿಯಾಗಿತ್ತು. ಬಳಿಕ ಎರಡು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು. ಬಳಿಕ ನಿರಾಳವಾಗಿದ್ದ ಜಿಲ್ಲೆಯ ಜನತೆಗೆ ಮತ್ತೆ ಕೊರೋನಾ ಮಾರಿ ಆತಂಕ ಸೃಷ್ಟಿಸಿದೆ. ಅಲ್ಲದೇ ದೆಹಲಿಯ ನಿಜಾಮುದ್ದೀನ್ ಜಮಾತ್ ಮಸೀದಿಗೆ ಹೋಗಿಬಂದವರಿಂದ ಭಯಭೀತರಾಗಿದ್ದಾರೆ.
ಕಲಬುರಗಿ, (ಮಾ.31): ದೇಶದಲ್ಲೇ ಮೊದಲ ಕೊರೋನಾ ಸಾವು ಸಂಭವಿಸಿದ್ದ 76 ವರ್ಷದ ವೃದ್ಧನ ಪುತ್ರಿ ಈ ಸೋಂಕಿನಿಂದ ಗುಣಮುಖಳಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡ ದಿನವಾದ ಸೋಮವಾರವೇ ಮತ್ತೊಂದು ಕೊರೋನಾ ಪಾಸೀಟಿವ್ ಪ್ರಕರಣ ಪತ್ತೆಯಾಗಿ ಆತಂಕ ಹೆಚ್ಚಿಸಿದೆ.
ಮೃತ ವೃದ್ಧನಿಗೆ ಚಿಕಿತ್ಸೆ ನೀಡಿದ್ದ ಕುಟುಂಬ ವೈದ್ಯರ ಜೊತೆಗೇ ಇದೀಗ ಅವರ ಪತ್ನಿಗೂ ಕೊರೋನಾ ಸೋಂಕಿರೋದು ಧೃಢವಾಗಿದೆ. ವೈದ್ಯನ 60 ವರ್ಷದ ಪತ್ನಿಯ ಕೋವಿಡ್- 19 ಪರೀಕ್ಷೆ ವರದಿ ಸೋಮವಾರ ಕೈಸೇರಿದ್ದು ಕೊರೋನಾ ಸೋಂಕು ಧೃಢವಾಗಿದೆ ಎಂದು ಜಿಲ್ಲಾಧಿಕಾರಿ ಬಿ. ಶರತ್ ಸ್ಪಷ್ಟಪಡಿಸಿದ್ದಾರೆ.
ಕಲಬುರಗಿಯಲ್ಲಿ ಮತ್ತೆ ಕೊರೋನಾ ಹಾವಳಿ, ರಾಜ್ಯದಲ್ಲಿ 100ರ ಗಡಿ ದಾಟಿದ ಸೊಂಕಿತರ ಸಂಖ್ಯೆ
ಜಿಲ್ಲಾಡಳಿತ ಕೈಗೊಂಡಿರುವ ಹಲವಾರು ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಕಳೆದ 13 ದಿನದಿಂದ ಕೊರೋನಾ ಪಾಸಿಟಿವ್ ಹೊಸದಾದ ಒಂದೂ ಪ್ರಕರಣ ಕಲಬುರಗಿಯಿಂದ ವರದಿಯಾಗಿರಲಿಲ್ಲ.
ಹೀಗಾಗಿ ಕೊರೋನಾ ಮಾರಿ ನಿಧಾನಕ್ಕೆ ಬಿಟ್ಟು ಹೋಗುತ್ತಿದೆ ಎಂದು ಜನತೆ ನಿರಾಳವಾಗುತ್ತಿರುವಾಗಲೇ ಹೊಸ ಕೋವಿಡ್- 19 ಸೋಂಕಿನ ಪ್ರಕರಣ ಪತ್ತೆಯಾಗುವುದುರ ಜೊತೆಗೇ ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಂಡವರ ಪೈಕಿ ಕಲಬುರಗಿಯಿಂದಲೂ 19 ಮಂದಿ ಇದ್ದರು ಎಂಬ ಸಂಗತಿ ಬೆಳಕಿಗೆ ಬಂದಿದ್ದು ಈ ಸಂಗತಿಯೂ ಕೊರೋನಾ ಆತಂಕ ಇಮ್ಮಡಿಸುವಂತೆ ಮಾಡಿದೆ.
ದೆಹಲಿಯ ನಿಜಾಮುದ್ದೀನ್ ಮರ್ಕಜ್ ಮಸೀದಿಯಲ್ಲಿ ನಡೆದಂತಹ ಧಾರ್ಮಿಕ ಸಭೆಯಲ್ಲಿ ಕಲಬುರಗಿ ಮೂಲದ 19 ಜನ ಪಾಲ್ಗೊಂಡ ಬಗ್ಗೆ ನಗರ ಪೊಲೀಸ್ ಉಪ ಆಯುಕ್ತ ಕಿಶೋರ್ ಬಾಬು ಸ್ಪಷ್ಟಪಡಿಸಿದ್ದು ಈ ಬೆಳವಣಿಗೆ ನಗರ ಹಾಗೂ ಜಿಲ್ಲೆಯಲ್ಲಿ ಮತ್ತೆ ಕೊರೋನಾ ಭೀತಿ ಹೆಚ್ಚಿಸಿದೆ. ಏಕೆಂದರೆ ಈ ದೆಹಲಿ ಮಸೀದಿ ಸಭೆಯಲ್ಲಿ ಪಾಲ್ಗೊಂಡವರಲ್ಲಿ ಅನೇಕರಿಗೆ ಕೊರೋನಾ ಸೋಂಕು ಇತ್ತು ಎಂಬುದು ಗೊತ್ತಾಗಿದೆ.
ಕಲಬುರಗಿ: 12ದಿನದಿಂದ ಇಲ್ಲ ಹೊಸ ಕೊರೋನಾ ಕೇಸ್, ಇದರ ಬೆನ್ನಲ್ಲೇ ಮತ್ತೊಂದು ಗುಡ್ ನ್ಯೂಸ್
ಅದಾಗಲೇ ಇದೇ ಸಭೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾದಂತಹ ತೆಲಂಗಾಣದ ಆರು ಜನ ಸೇರಿ ಇಲ್ಲಿಯವರೆಗೂ 10 ಜನರ ಸಾವು ಕೂಡ ಸಂಭವಿಸಿ ಸುದ್ದಿಯಾಗಿರೋದರಿಂದ ಕಲಬುರಗಿಯಲ್ಲಿ ಕೊರೋನಾ ಭೀತಿಗೆ ಇದೇ ಮುಖ್ಯ ಕಾರಣವಾದಂತಾಗಿದೆ.
ದೆಹಲಿಯ ನಿಜಾಮುದ್ದೀನ್ ಮರ್ಕಜ್ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಕಲಬುರಗಿ ಜಿ¯್ಲÉಯ 19 ಜನ ಪಾಲ್ಗೊಂಡಿರುವ ಬಗ್ಗೆ ಪೆÇಲೀಸರು ಮಾಹಿತಿ ಕಲೆ ಹಾಕಿದ್ದು ಇವರೆಲ್ಲರ ಆರೋಗ್ಯದ ಮೇಲೆ ತೀವ್ರ ನಿಗಾ ಇಡಲಾಗಿದೆ.
ಏತನ್ಮಧ್ಯೆ ಆಳಂದ ತಾಲೂಕಿನ ಪಡಸಾವಳಗಿ ಗ್ರಾಮದ ನಿವಾಸಿ, ದೆಹಲಿ ನಿಜಾಮುದ್ದೀನ್ ಮಸೀದಿ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ 35 ವರ್ಷದ ವ್ಯಕ್ತಿಯೊಬ್ಬ ಪತ್ತೆಯಾಗಿದ್ದು ಈತನನ್ನು ತಂದು ಇಎಸ್‍ಐಸಿ ಆಸ್ಪತ್ರೆಯ ಐಸೋಲೇಷನ್ ವಾರ್ಡ್‍ಗೆ ದಾಖಲಿಸಲಾಗಿದೆ.
10 ಸಾವಿರ ಮಂದಿ ಕ್ವಾರಂಟೈನ್ ವ್ಯವಸ್ಥೆ: ಮೋದಿಗೆ ಜಮೀಯತ್ ಉಲೆಮಾ- ಎ- ಹಿಂದ್ ಪತ್ರ!
ದೆಹಲಿ ನಿಜಾಮುದ್ದೀನ್ ಮರ್ಕಜ್ ಮಸೀದಿ ಸಮಾರಂಭಕ್ಕೆ ಹೋದವರು 19 ಜನರಗಿಂತ ಹೆಚ್ಚಿದ್ದಾರೆಯೆ? ಂಬ ಬಗ್ಗೆಯೂ ಶೋಧ ಸಾಗಿದೆ. ಈ ಬಗ್ಗೆ ನಗರ ಮತ್ತು ಜಿಲ್ಲಾ ಪೊಲೀಸ್ ಹೆಚ್ಚಿನ ನಿಗಾ ಇಟ್ಟು ಕೆಲಸ ಮಾಡುತ್ತಿದೆ.
ದೆಹಲಿಯ ನಿಜಾಮುದ್ದೀನ್ ಜಮಾತ್ ಮಸೀದಿಯ ಸಭೆಯಲ್ಲಿ ಭಾಗಿಯಾಗಿದ್ದ ಆಳಂದದ ಪಡಸಾವಳಗಿ ವ್ಯಕ್ತಿಯ ಗಂಟಲು ದ್ರವ ಮಾದರಿಯನ್ನು ಕೋವಿಡ್- 19 ಪರೀಕ್ಷೆಗೆ ರವಾನಿಸಲಾಗಿದೆ.
ಏ.14ರ ವರೆಗೂ ವಿಸ್ತರಣೆಯಾಯ್ತು ನಿಷೇಧಾಜ್ಞೆ
ಕೊರೋನಾ ಆತಂಕ ಹೆಚ್ಚಿರುವ ಕಲಬುರಗಿಯಲ್ಲಿ ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿ ಶರತ್ ಮತ್ತೆ 144 ನೇ ಕಲಂ ಅಡಿಯಲ್ಲಿ ನಿಷೇಧಾಜ್ಞೆಯನ್ನು ಏ. 14 ರ ವರೆಗೂ ವಿಸ್ತರಿಸಿದ್ದಾರೆ.
ಕೊರೋನಾ ಸೋಂಕಿತೆ ಆಸ್ಪತ್ರೆಯಿಂದ ಡಿಸ್ಚಾರ್ಜ್
ಕೊರೋನಾ ಸೋಂಕಿನಿಂದ ಮೃತರಾದ ಕಲಬುರಗಿಯ 76 ವರ್ಷದ ಅಜ್ಜನ ಮಗಳು ಇದೀಗ ಆ ಸೋಂಕಿನಿಂದ ಗುಣಮುಖರಾಗಿ ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಸೌದಿಯಿಂದ ಕಲಬುರಗಿಗೆ ಮರಳಿದ್ದ ಅಜ್ಜ ಮಾ. 10 ರಂದು ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದ. ಆತನ 45 ವರ್ಷದ ಪುತ್ರಿಗೆ ಕೋವಿಡ್- 19 ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವ್ ಬಂದು ಇಎಸ್‍ಐಸಿ ಆಸ್ಪತ್ರೆ ಐಸೋಲೇಷನ್ ವಾರ್ಡ್‍ನಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಚಿಕಿತ್ಸೆಯ 14 ದಿನಗಳ ನಂತರ ಸದರಿ ಮಹಿಳೆಗೆ ಕೋವಿಡ್-19 ಪರೀಕ್ಷೆ ಮಾಡಿದಾಗ ನೆಗೆಟಿವ್ ಕಂಡುಬಂದಿದೆ. 24 ಗಂಟೆ ನಂತರ ಮತ್ತೊಮ್ಮೆ ಪರೀಕ್ಷಿಸಿದಾಗ ನೆಗೆಟಿವ್ ವರದಿ ಬಂದಿದ್ದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಡಿಸಿ ಶರತ್ ತಿಳಿಸಿದ್ದಾರೆ.