ಕೊರೋನಾ ಭೀತಿ: ಮುಸ್ಲಿಂ ಬಾಂಧವರಿಗೆ ದಾವಣಗೆರೆ ಡಿಸಿ ಮಹಾಂತೇಶ್ ಬೀಳಗಿ ಧನ್ಯವಾದ

By Suvarna NewsFirst Published Mar 30, 2020, 11:29 AM IST
Highlights

ಮಸೀದಿಗಳಲ್ಲಿ ಸಾಮೂಹಿಕ ನಮಾಜ್‌ ಮಾಡದಂತೆ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮನವಿ| ಡಿಸಿ ಮನವಿಗೆ ಸ್ಪಂದಿಸಿದ ಮುಸ್ಲಿಂ ಬಾಂಧವರು| ನನ್ನ ಮನವಿಗೆ ಸ್ಪಂದಿಸಿದ್ದ ಎಲ್ಲ ನನ್ನ ಮುಸ್ಲಿಂ ಸಮಾಜದ ಸ್ನೇಹಿತರಿಗೆ ಧನ್ಯವಾದ|

ದಾವಣಗೆರೆ(ಮಾ.30): ಕೊರೋನಾ ವೈರಸ್‌ಅನ್ನು ತಡೆಗಟ್ಟಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಏಪ್ರಿಲ್‌ 14 ರವೆಗೆ ದೇಶಾದ್ಯಂತ ಲಾಕ್‌ಡೌನ್‌ಗೆ ಆದೇಶ ನೀಡಿದ್ದಾರೆ. ಹೀಗಾಗಿ ಮಹಾಮಾರಿ ಕೊರೋನಾ ವೈರಸ್‌ ಹಬ್ಬದಿರಲು ಮುಸ್ಲಿಂ ಬಾಂಧವರು ಮಸೀದಿಗಳಲ್ಲಿ ಸಾಮೂಹಿಕ ನಮಾಜ್‌ ಮಾಡದಂತೆ ಮಾಡಿದ್ದು, ಅದಕ್ಕೆ ಸ್ಪಂದಿಸಿದ ಮುಸ್ಲಿಂ ಬಾಂಧವರಿಗೆ ಧನ್ಯವಾದಗಳು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಹೇಳಿದ್ದಾರೆ. 

ಈ ಬಗ್ಗೆ ಮಾತನಾಡಿದ ಅವರು, ಕೊರೋನಾ ಹರಡುವುದನ್ನ ತಡೆಯಲು ದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಹೀಗಾಗಿ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುವುದರಿಂದ ಕೊರೋನಾ ಸೋಂಕು ಹರಡುವ ಸಾಧ್ಯತೆ ಇರುವುದರಿಂದ, ನೀವು ಇದ್ದ ಸ್ಥಳದಲ್ಲೇ ನಮಾಜ್‌ ಮಾಡುವ ಮೂಲಕ ಕೊರೋನಾ ವೈರಸ್‌ ತಡೆಗಟ್ಟಲು ನೆರವಾಗಿ ಎಮದು ಮುಸ್ಲಿಂ ಬಾಂಧವರಲ್ಲಿ ವಿನಂತಿ ಮಾಡಿಕೊಂಡಿದ್ದೆ. ಇದಕ್ಕೆ ಮುಸ್ಲಿಂ ಬಾಂಧವರು ಒಪ್ಪಿಕೊಂಡಿದ್ದಾರೆ. ಹೀಗಾಗಿ ಅವರಿಗೆ ನಾನು ಧನ್ಯವಾದ ತಿಳಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ. 

ಕೊರೋನಾ ಇದ್ದರೂ ಬಿಂದಾಸ್ ತಿರುಗುತ್ತಿದ್ದ ರೇಣುಕಾಗೆ ಡಿಸಿ ಬಿಸಿ!

ನನ್ನ ಮನವಿಗೆ ಸ್ಪಂದಿಸಿದ್ದ ಎಲ್ಲ ನನ್ನ ಮುಸ್ಲಿಂ ಸಮಾಜದ ಸ್ನೇಹಿತರಿಗೆ ಧನ್ಯವಾದಗಳು. ಮಹಾಮಾರಿ ಕೊರೋನಾ ಸೋಂಕು ತಡೆಗಟ್ಟುವಲ್ಲಿ ನಾವು ಯಶಸ್ವಿಯಾಗುತ್ತೇವೆ ಎಂದು ಹೇಳಿದ್ದಾರೆ.
 

click me!