ಹೊರಗಡೆ ಅಂಗಡಿಗೆ ಹೋದ್ರೆ ಒದೆ ಬೀಳುತ್ತೆ ಎಂದ ರೇವಣ್ಣ ಇದ್ದಲ್ಲಿಗೇ ಮೊಂಬತ್ತಿ

By Suvarna News  |  First Published Apr 4, 2020, 3:35 PM IST
ಮೇಣದ ಬತ್ತಿ ತರಲು ಅಂಗಡಿಗೆ ಹೋದ್ರೆ ಪೊಲೀಸರಿಂದ ಒದೆ ಬೀಳುತ್ತೆ ಎಂದು ಎಚ್‌.ಡಿ.ರೇವಣ್ಣ ಇದ್ದಲ್ಲಿಗೆಯೇ ಮೇಣದ ಬತ್ತಿ ಕಳುಹಿಸಿ ಕೊಡಲಾಗಿದೆ.

ದಾವಣಗೆರೆ, (ಏ.04): ಜೆಡಿಎಸ್‌ ನಾಯಕ ಎಚ್‌.ಡಿ.ರೇವಣ್ಣಗೆ ಮೇಣದ ಬತ್ತಿಗಳನ್ನು ಸ್ಪೀಡ್ ಪೊಸ್ಟ್ ಮಾಡಲಾಗಿದೆ.

ಏಪ್ರಿಲ್ 5ರಂದು ರಾತ್ರಿ 9 ಗಂಟೆಗೆ ಪ್ರತಿಯೊಬ್ಬ ಭಾರತೀಯ ಕೂಡ ಮನೆಯ ಲೈಟ್​ ಆರಿಸಿ, ಮೊಬೈಲ್​ ಟಾರ್ಚ್​ ಅಥವಾ ಮೇಣದ ಬತ್ತಿ ಹಿಡಿಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಕೊಟ್ಟಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ರೇವಣ್ಣ, ಮೇಣದ ಬತ್ತಿ ತರೋಕೆ ಅಂಗಡಿಗೆ ಹೋದ್ರೆ ಪೊಲೀಸರಿಂದ ಸೂಸಾ ಬೀಳುತ್ತೆ. ಮೊಂಬತ್ತಿ ತಂದು ಕೊಡುವರು ಯಾರು ಎಂದು ವ್ಯಂಗ್ಯವಾಡಿದ್ದರು.

'ಮೋಂಬತ್ತಿ ಬತ್ತಿ ತರೋಕೆ ಅಂಗಡಿಗೆ ಹೋದ್ರೆ ಪೊಲೀಸರಿಂದ ಒದೆ ಬೀಳುತ್ತೆ'

ಈ ಹಿನ್ನೆಲೆಯಲ್ಲಿ ದಾವಣಗೆರೆ ದಕ್ಷಿಣ ಬಿಜೆಪಿ ಯುವಮೊರ್ಚಾ,  ರೇವಣ್ಣನವರ ಮನೆಯ ವಿಳಾಸಕ್ಕೆ ಮೇಣದ ಬತ್ತಿಗಳನ್ನು ಸ್ಪೀಡ್ ಪೋಸ್ಟ್  ಮಾಡಿದ್ದಾರೆ. ಈ ಮೂಲಕ ಮೋದಿ ಮಾತಿಗೆ ವ್ಯಂಗ್ಯವಾಡಿದ್ದ ರೇವಣ್ಣಗೆ ತಿರುಗೇಟು ನೀಡಿದರು.

ಇಂದು (ಶನಿವಾರ) ದಾವಣಗೆರೆಯ ಹೆಡ್‌ ಪೋಸ್ಟ್ ಆಫೀಸ್‌ನಿಂದ ರೇವಣ್ಣ ನಿವಾಸಕ್ಕೆ ಮೇಣದ ಬತ್ತಿ ಪಾಕೇಟ್‌ ಪೋಸ್ಟ್ ಮಾಡಿದರು.

ಇದೇ ಭಾನುವಾರ(ಏ.5) ರಾತ್ರಿ 9 ಗಂಟೆಗೆ ಎಲ್ಲರೂ ತಮ್ಮ ಮನೆಯ ವಿದ್ಯುತ್ ದೀಪಗಳನ್ನು ಆರಿಸಿ 9 ನಿಮಿಷಗಳ ಕಾಲ ಮೇಣದ ಬತ್ತಿಯ ದೀಪ ಉರಿಸುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
click me!