ಮಡಿಕೇರಿಯಲ್ಲಿ ಜೋಳಿಗೆ ಹಿಡಿದು ತಿರುಗ್ತಿದ್ದಾರೆ 9 ಮಂದಿ ತಬ್ಲಿಘಿಗಳು

By Suvarna News  |  First Published Apr 4, 2020, 3:13 PM IST

ದೆಹಲಿಯಲ್ಲಿ ಸುಮಾರು 250ಕ್ಕೂ ಹೆಚ್ಚು ಕೊರೋನಾ ಸೋಂಕಿತ ತಬ್ಲಿಘಿಗಳಿರುವಾಗಲೇ ಇದೀಗ ಮಡಿಕೇರಿಯ ವಿರಾಜಪೇಟೆಯಲ್ಲಿ 9 ಜನ ತಬ್ಲಿಘಿಗಳು ಕಂಡು ಬಂದಿದ್ದಾರೆ.


ಮಡಿಕೇರಿ(ಏ.04): ದೆಹಲಿಯಲ್ಲಿ ಸುಮಾರು 250ಕ್ಕೂ ಹೆಚ್ಚು ಕೊರೋನಾ ಸೋಂಕಿತ ತಬ್ಲಿಘಿಗಳಿರುವಾಗಲೇ ಇದೀಗ ಮಡಿಕೇರಿಯ ವಿರಾಜಪೇಟೆಯಲ್ಲಿ 9 ಜನ ತಬ್ಲಿಘಿಗಳು ಕಂಡು ಬಂದಿದ್ದಾರೆ.

ವೀರಾಜಪೇಟೆಯಲ್ಲಿ 9 ಮಂದಿ ತಬ್ಲಿಘಿಗಳು ಪತ್ತೆಯಾಗಿದ್ದು, ಶೂರ ತಬ್ಲಿಘಿ ಪಂಗಡದ ಮೌಲ್ವಿಗಳು ಪತ್ತೆಯಾಗಿದ್ದಾರೆ. ಮೂಲತ: ಗುಜರಾತ್ ಮೂಲದವರಾಗಿರುವ ಮೌಲ್ವಿಗಳು ವೀರಾಜಪೇಟೆ ಮಸೀದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Latest Videos

undefined

ಹೊರಗೆ ಕೊರೋನಾ ಅಟ್ಟಹಾಸ, ಮನೆಯಿಂದ ಕೆಲ್ಸ ಮಾಡೋರಿಗೆ ಹ್ಯಾಕರ್ಸ್ ಕಾಟ!

ಫೆಬ್ರವರಿ 2ರಂದು ವೀರಾಜಪೇಟೆಗೆ ಆಗಮಿಸಿದ ಅವರು 40 ದಿನಗಳ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಲಾಕ್‌ಡೌನ್ ಹಿನ್ನೆಲೆ ಮನೆಯೊಂದಲ್ಲಿ ನೆಲೆಸಿರುವ ಇವರು ಬೇರೆಲ್ಲೂ ಹೋಗಲು ಸಾಧ್ಯವಾಗಿರಲಿಲ್ಲ.

ಇದೀಗ ಮೌಲ್ವಿಗಳು, ಮನೆ ಮಾಲೀಕನನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಜಿಲ್ಲಾ ಪೊಲೀಸರಿಂದ ಸಮಗ್ರ ಪರಿಶೀಲನೆ ನಡೆಸಲಾಗುತ್ತಿದ್ದು, ಎಲ್ಲರ ಗಂಟಲ ದ್ರವ ಮಾದರಿ ಪರೀಕ್ಷೆಗೆ ರವಾನೆ ಮಾಡಲಾಗಿದೆ ಎಂದು ಜಿಲ್ಲಾ ಎಸ್ಪಿ ಡಾ. ಸುಮನ್ ಪನ್ನೇಕರ್ ಮಾಹಿತಿ ನೀಡಿದ್ದಾರೆ. ಇವರು ಕೈಯಲ್ಲೊಂದು ಜೋಳಿಗೆ ಹಿಡಿದುಕೊಂಡು ತಿರುಗುತ್ತಲೇ ಇದ್ದರು ಎನ್ನಲಾಗಿದೆ.

click me!