3ನೇ ಹಂತಕ್ಕೂ ಮುನ್ನ.. ಆರೋಗ್ಯ ಇಲಾಖೆ ಮಾತು ಒಂಚೂರು ಕೇಳಿಸ್ಕೋಳ್ಳಿ

By Suvarna NewsFirst Published Mar 29, 2020, 6:40 PM IST
Highlights

ಕೊರೋನಾ ವೈರಸ್ ಮೂರನೇ ಹಂತಕ್ಕೆ ಕಾಲಿಡುವ ಆತಂಕ/ ಆರೋಗ್ಯ ಇಲಾಖೆಯಿಂದ ಮುಂಜಾಗ್ರತಾ ಕ್ರಮ/ ಖಾಸಗಿ ಆಂಬುಲೆನ್ಸ್ ಬಳಕೆಗೆ ನಿರ್ಧಾರ/  ರಸ್ತೆಗೆ ಇಳಿಯಲಿವೆ ಕ್ವಾರಂಟೈನ್ ಸ್ಕ್ವಾಡ್ ಗಳು

ಬೆಂಗಳೂರು(ಮಾ.29) ಕೊರೋನಾ ವೈರಸ್ ಮೂರನೇ ಹಂತಕ್ಕೆ ಪ್ರವೇಶ ಮಾಡುತ್ತಿರುವ ಆತಂಕ ಎದುರಾಗಿರುವ ಹೊತ್ತಿನಲ್ಲಿಯೇ ಆರೋಗ್ಯ ಇಲಾಖೆ ಮತ್ತಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ.

ಕೊವಿಡ್  ತಡೆಗೆ ಇಂದಿನಿಂದ ಖಾಸಗಿ ಆಂಬುಲೆನ್ಸ್ ಗಳು ರಸ್ತೆಗೆ ಇಳಿಯಲಿವೆ.   50 ಖಾಸಗಿ ಆಂಬುಲೆನ್ಸ್ ಗಳು 5 ವಲಯಗಳಲ್ಲಿ ಕಾರ್ಯನಿರ್ವಹಿಸಲಿವೆ.  ಇದರ ಜೊತೆಗೆ 40ಕಾರ್ ಗಳನ್ನು  ಬುಕ್ ಮಾಡಿಕೊಂಡು ಸ್ಕ್ವಾಡ್ ರೀತಿ ಬಳಸಿಕೊಳ್ಳಲಾಗುತ್ತದೆ.

ಬೆಂಗಳೂರಿನಲ್ಲಿ ಫೀವರ್ ಕ್ಲಿನಿಕ್ ಆರಂಭ; ಜ್ವರ, ಕಫ, ಸ್ಕ್ರೀನಿಂಗ್ ಟೆಸ್ಟ್‌ಗೆ ವ್ಯವಸ್ಥೆ

ಕನಿಷ್ಠ ಒಂದು ತಿಂಗಳು ಗರಿಷ್ಠ ಮೂರು ತಿಂಗಳ ಮಟ್ಟಿಗೆ ಕಾರುಗಳನ್ನು ಬುಕ್ ಮಾಡಿಕೊಳ್ಳಲಾಗಿದೆ.  ಕ್ವಾರಂಟೈನ್ ಸ್ಕ್ವಾಡ್ ಗಳ ರೀತಿ ಖಾಸಗಿ ಕಾರುಗಳ ಬಳಕೆ ಮಾಡಿಕೊಳ್ಳಲಾಗುತ್ತದೆ.

ಕಾರಿನಲ್ಲಿ  ಒಬ್ಬ ಆಯೂಷ್ ಡಾಕ್ಟರ್, ಒಬ್ಬ ಪೊಲೀಸ್ ಪೇದೆ ಮತ್ತು ಚಾಲಕ ಇರುತ್ತಾರೆ.  ಕ್ವಾರಂಟೈನ್ ಆದವರು ಹೊರಗೆ ಬಂದ್ರೆ ಕೇಸ್ ಬುಕ್ ಮಾಡಲು ಪೊಲೀಸರನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ.  ಸ್ಕ್ವಾಡ್ ಸುರಕ್ಷ ದೃಷ್ಠಿಯಿಂದ ಪ್ರತಿಯೊಬ್ಬರಿಗೂ ಪಿಪಿಕಿಟ್ ವಿತರಿಸಲಾಗುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ

click me!