ರಾಜ್ಯ ಸರ್ಕಾರದ ಸಪ್ತಪದಿ ಯೋಜನೆಗೆ ಬ್ರೇಕ್ ಹಾಕಿದ ಕೊರೋನಾ, ಮುಂದೇನು?

Published : Apr 07, 2020, 02:50 PM ISTUpdated : Apr 07, 2020, 02:57 PM IST
ರಾಜ್ಯ ಸರ್ಕಾರದ ಸಪ್ತಪದಿ ಯೋಜನೆಗೆ ಬ್ರೇಕ್ ಹಾಕಿದ ಕೊರೋನಾ,  ಮುಂದೇನು?

ಸಾರಾಂಶ

ರಾಜ್ಯ ಸರ್ಕಾರದ ಮಹತ್ವದ ಯೋಜನೆಗೆ ಬ್ರೇಕ್/ ಸಪ್ತಪದಿ ಯೋಜನೆ ಮುಂದಕ್ಕೆ ಹಾಕಿದ ರಾಜ್ಯ ಸರ್ಕಾರ/ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿಕೆ

ಬೆಂಗಳೂರು(ಏ. 07) ರಾಜ್ಯ ಸರ್ಕಾರದ ಮಹತ್ವದ ಸಪ್ತಪದಿ ಯೋಜನೆ ಮೇಲೆಯೂ ಕೊರೋನಾ ಪರಿಣಾಮ ಬೀರಿದೆ.  ಕೊರೋನಾ ಹಾವಳಿ ಹಿನ್ನೆಲೆಯಲ್ಲಿ ಸಪ್ತಪದಿ ಯೋಜನೆ ಮುಂದೂಡಿಕೆ ಮಾಡಲಾಗಿದೆ.  ಈ ಬಗ್ಗೆ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದ್ದಾರೆ.

ಏಪ್ರಿಲ್ 26 ರಂದು ಪ್ರಥಮ ಹಂತದಲ್ಲಿ ನಡೆಯಬೇಕಿದ್ದ ಸಪ್ತಪದಿ ಯೋಜನೆಗೂ ಬ್ರೇಕ್ ಬಿದ್ದಿದೆ.  ಏಪ್ರಿಲ್ 26 ರಂದು ಸಪ್ತಪದಿ ಯೋಜನೆಯಡಿ‌ 1.5 ಸಾವಿರ ವಧು ವರರು ವಿವಾಹಕ್ಕೆ ನೋಂದಣಿ ಮಾಡಿಕೊಂಡಿದ್ದರು.

ಮತ್ತೆ 28 ದಿನ ಲಾಕ್ ಡೌನ್? ಏನು ಸತ್ಯ

ಯೋಜನೆಯಡಿ ಬಡ ವಧು ವರರಿಗೆ ಸರ್ಕಾರದಿಂದ ಉಚಿತ ವಿವಾಹ ಭಾಗ್ಯ ಕಲ್ಪಿಸಿಕೊಡಲಾಗಿತ್ತು. ಮೇ 24 ರಂದು ಎರಡನೇ ಹಂತದ ಸಪ್ತಪದಿ ಯೋಜನೆಯಡಿ ಸಾಮೂಹಿಕ ವಿವಾಹ ಕಾರ್ಯಕ್ರಮ ಇದೆ.  ಮೊದಲ ಮತ್ತು ಎರಡನೇ ಹಂತಗಳನ್ನು ಕೂಡಿಸಿ ಒಂದೇ ಹಂತದಲ್ಲಿ ಸಾಮೂಹಿಕ ವಿವಾಹ‌ ಕಾರ್ಯಕ್ರಮ ಮಾಡಲು ಚಿಂತನೆ ನಡೆಯುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ. 

ವಿವಾಹವಾಗಲು ಈ ಮೂರು ಗ್ರಹಗಳು ಚೆನ್ನಾಗಿರಬೇಕು

ರಾಜ್ಯ ಸರ್ಕಾರ ವಿವಾಹ ಭಾಗ್ಯ ಕಲ್ಪಿಸಿಕೊಡು ಸಪ್ತಪದಿ ಯೋಜನೆಯನ್ನು ಜಾರಿಮಾಡಿತ್ತು. ಆದರೆ ಕೊರೋನಾ ಆತಂಕ ಬ್ರೇಕ್ ಹಾಕಿದ್ದು ಮುಂದಿನ ದಿನಗಳಲ್ಲಿ ಬೇರೆ ಆದೇಶ ಬರುವವರೆಗೂ ಕಾಯಲೇಬೇಕಿದೆ. ಇಂದು ಸಹ ಹೊಸ ಹೊಸ ಸೋಂಕಿತ ಪ್ರಕರಣಗಳು ಕಂಡುಬಂದಿವೆ. ಮಂಡ್ಯ ಮತ್ತು ಗದಗ ಜಿಲ್ಲೆಗಳಲ್ಲಿಯೂ ಕೊರೋನಾ ಸೋಂಕಿತರ ಪತ್ತೆಯಾಗಿದೆ.

PREV
click me!

Recommended Stories

ವೈರಸ್‌ ಕಾಟ: ಕೊರೋನಾ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ, ಸಚಿವ ಪಾಟೀಲ್‌
ಮತ್ತೆ ಕೊರೋನಾರ್ಭಟ: ಪೂಲಿಂಗ್ ಟೆಸ್ಟ್ ಮೊರೆಹೋದ ಆರೋಗ್ಯ ಇಲಾಖೆ, ಏನಿದು ಹೊಸ ಪರೀಕ್ಷೆ?