ಪಿಪಿಇ ಕಿಟ್‌ ಪೂರೈಕೆಗೆ ಶ್ರಮಿಸುತ್ತಿವೆ ಕರಾವಳಿ ಜಿಲ್ಲೆಗಳ 2 ಕಾರ್ಖಾನೆಗಳು!

By Kannadaprabha News  |  First Published Apr 2, 2020, 10:06 AM IST

ಬೈಂದೂರು, ಭಟ್ಕಳದಲ್ಲಿ ಹಗಲು ರಾತ್ರಿ ನಡೆಯುತ್ತಿದೆ ಉತ್ಪಾದನಾ ಕಾರ್ಯ| ಪಿಪಿಇ ಕಿಟ್‌ ಪೂರೈಕೆಗೆ ಶ್ರಮಿಸುತ್ತಿವೆ ಕರಾವಳಿ ಜಿಲ್ಲೆಗಳ 2 ಕಾರ್ಖಾನೆಗಳು| 


ಸುಭಾಶ್ಚಂದ್ರ ಎಸ್‌.ವಾಗ್ಳೆ/ರಾಘವೇಂದ್ರ ಹೆಬ್ಬಾರ್‌

ಉಡುಪಿ/ಭಟ್ಕಳ(ಏ.02): ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಿದಂತೆಲ್ಲ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು, ಶುಶ್ರೂಷಕಿಯರು ಧರಿಸುವ ‘ಪರ್ಸನಲ್‌ ಪ್ರೊಟೆಕ್ಷನ್‌ ಇಕ್ಯುಪ್ಮೆಂಟ್‌ (ಪಿಪಿಇ) ಬೇಡಿಕೆ ಹೆಚ್ಚುತ್ತಿದ್ದು ಕರಾವಳಿ ಜಿಲ್ಲೆಯ ಎರಡು ಸರ್ಜಿಕಲ್‌ ಫ್ಯಾಕ್ಟರಿಗಳು ಹಗಲು ರಾತ್ರಿ ಕಾರ್ಯ ನಿರ್ವಹಿಸುವ ಮೂಲಕ ಬೇಡಿಕೆ ಪೂರೈಸಲು ಶ್ರಮಿಸುತ್ತಿವೆ.

Latest Videos

undefined

ಉಡುಪಿ ಜಿಲ್ಲೆಯ ಬೈಂದೂರಿನ ಸುಮುಖ ಸರ್ಜಿಕಲ್‌ ಇಂಡಿಯಾ ಪ್ರೈ.ಲಿ. ಮತ್ತು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಧ್ರುತಿ ಸರ್ಜಿಕಲ್‌ ಸೊಲ್ಯೂಶನ್‌ ಪ್ರೈ ಲಿಮಿಟೆಡ್‌ ಸಮರೋಪಾದಿಯಲ್ಲಿ ಲಕ್ಷಾಂತರ ಪಿಪಿಇ ಉತ್ಪಾದನೆಯಲ್ಲಿ ತೊಡಗಿರುವ ಕಾರ್ಖಾನೆಗಳು. ಇಲ್ಲಿ ತಯಾರಾದ ಕಿಟ್‌ಗಳು ರಾಜ್ಯ ಮಾತ್ರವಲ್ಲದೆ ನೆರೆಯ ಕೇರಳಕ್ಕೂ ಪೂರೈಕೆಯಾಗುತ್ತಿದೆ. ಈ ಕಿಟ್‌ ಇಲ್ಲದೆ ಚಿಕಿತ್ಸೆ ನೀಡುವವರು ರೋಗಿಯ ಹತ್ತಿರವೂ ಸುಳಿಯುವಂತಿಲ್ಲ. ಮೊದಲು ಕಾಲು ಹಾಕಿ, ನಂತರ ಕೈ ತೂರಿಸಿ ಕುತ್ತಿಗೆವರೆಗೆ ಜಿಪ್‌ ಎಳೆದುಕೊಳ್ಳುವ ಕವರ್‌ ಆಲ್‌ ಗೌನ್‌, ಕುತ್ತಿಗೆಗೆ ಏಫ್ರನ್‌, ಕೈ ಗ್ಲೌಸು, ಕಾಲಿಗೆ ಶೂ ಕವರ್‌, ಮುಖಕ್ಕೆ ಮಾÓ್ಕ…, ಕನ್ನಡಿ ಇರುವ ಶೀಲ್ಡ… ಮತ್ತು ತಲೆ ಪೂರ್ತಿ ಮುಚ್ಚುವ ಕವರ್‌ಗಳನ್ನು ಈ ಪಿಪಿಇ ಕಿಟ್‌ ಹೊಂದಿದೆ. ಇದು ಹೊರಗಿನಿಂದ ಯಾವುದೇ ವೈರಸ್‌ ಕೂಡ ದೇಹ ಸ್ಪರ್ಶಿಸದಂತೆ ರಕ್ಷಿಸುತ್ತದೆ. ಆದರೆ ಒಂದು ಬಾರಿ ಧರಿಸಿದ ಬಳಿಕ ಮತ್ತೊಮ್ಮೆ ಉಪಯೋಗಿಸಲಾಗದ ಯ್ಯೂಸ್‌ ಆ್ಯಂಡ್‌ ಡಿಸ್ಪೋಸ್‌ ಕಿಟ್‌ಗಳಿವು. ಬೇಡಿಕೆ ಹೆಚ್ಚಾಗಲು ಇದೂ ಒಂದು ಕಾರಣ.

ಕೊರೋನಾ ವಿರುದ್ಧ ಹೋರಾಟಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಿದ ಮೋದಿ

ಬೈಂದೂರು ಕಾರ್ಖಾನೆಯಲ್ಲಿ 150 ಕಾರ್ಮಿಕರಿದ್ದು, ಕಳೆದೊಂದು ತಿಂಗಳಿಂದ 1.5 ಲಕ್ಷಕ್ಕೂ ಅಧಿಕ ಕಿಟ್‌ಗಳನ್ನು ತಯಾರಿಸಿ ಪೂರೈಕೆ ಮಾಡಲಾಗಿದೆ. ಅದೇ ರೀತಿ ಭಟ್ಕಳದಲ್ಲಿ ಪ್ರತಿ ದಿನ 3 ಸಾವಿರ ಕಿಟ್‌ ಉತ್ಪಾದನೆ ಮಾಡಲಾಗುತ್ತಿದ್ದು, ಈವರೆಗೆ 25 ಸಾವಿರ ಕಿಟ್‌ ರವಾನೆ ಮಾಡಲಾಗಿದೆ.

click me!