ಲಾಕ್‌ಡೌನ್: ಪೊಲೀಸರಿಗೆ 14 ಮಹತ್ವದ ಸೂಚನೆಗಳನ್ನು ನೀಡಿದ ಕಮಿಷನರ್

By Suvarna News  |  First Published Mar 30, 2020, 2:28 PM IST

ಕೊರೋನಾ ಲಾಕ್‌ಡೌನ್ ಸಂಬಂಧ ಬೆಂಗಳೂರು ಪೊಲೀಸರಿಗೆ ನಗರ ಕಮಿಷನರ್ ಕೆಲವು ನಿಯಮಗಳನ್ನು ಅನುಸರಿಸಬೇಕೆಂದು 14 ಸೂಚನೆಳನ್ನು ನೀಡಿದ್ದಾರೆ. ಅವು ಈ ಕೆಳಗಿನಂತಿವೆ ನೋಡಿ.


ಬೆಂಗಳೂರು, (ಮಾ.30): ಕೊರೋನಾ ವೈರಸ್ ನಿಯಂತ್ರಣಕ್ಕೆ ಇಡೀ ದೇಶವೇ ಲಾಕ್‌ಡೌನ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಇಡೀ ಕರ್ನಾಟಕವೇ ಸ್ತಬ್ಧವಾಗಿದೆ

. ಅಷ್ಟೇ ಅಲ್ಲದೇ ಪೊಲೀಸರು ಸಹ ಜನರಿಗೆ ಮನೆಬಿಟ್ಟು ಹೊರಗಡೆ ಬರಬೇಡಿ. ಮನೆಯಲ್ಲಿಯೇ ಸೇಫ್ ಆಗಿರಿ ಅಂತೆಲ್ಲಾ ಕೊರೋನಾ ಲಾಕ್‌ಡೌನ್‌ಗೆ ಜಾಗೃತಿ ಮೂಡಿಸುತ್ತಿದ್ದಾರೆ. 

Tap to resize

Latest Videos

ಕಲಬುರಗಿಯಲ್ಲಿ 11 ದಿನದಿಂದ ಇಲ್ಲ ಹೊಸ ಕೊರೋನಾ ಕೇಸ್‌

ಇನ್ನು ಕೆಲವು ಕಡೆ ಪೊಲೀಸರು ಸಿಕ್ಕದ್ದೇ ಚಾನ್ಸ್‌ ಅಂತ ಬಾಸುಂಡೆ ಬರುವಂತೆ ಲಾಠಿ ಏಟು ಕೊಡುತ್ತಿದ್ದಾರೆ. ಇದರಿಂದ ಸಿಲಿಕಾನ್ ಸಿಟಿ ಪೊಲೀಸರಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಾಸ್ಕರ್ ರಾವ್, ಕೆಲವು ನಿಯಮಗಳನ್ನು ಪಾಲಿಸುವಂತೆ 14 ಮಹತ್ವದ ಸೂಚನೆಗಳನ್ನು ನೀಡಿದ್ದಾರೆ. ಅವು ಈ ಕೆಳಗಿನಂತಿವೆ. 

1. ಹಾಲು, ಪೇಪರ್ ಮತ್ತು ತರಕಾರಿ ತೆಗೆದುಕೊಳ್ಳುವವರಿಗೆ ತೊಂದರೆ ಕೊಡಬಾರದು. ATM ಕ್ಯಾಶ್ ತುಂಬುವವರಿಗೆ ಪಾಸ್ ಇಲ್ಲದಿದ್ದರೂ ಅವಕಾಶ ಕೊಡಬೇಕು. 

2. ದಿನಸಿ ಅಂಗಡಿಗಳು, ಮಾರ್ಟ್‌ಗಳಲ್ಲಿ ಸೋಷಿಯಲ್ ಡಿಸ್ಟೆನ್ಸ್ ಮೆಂಟೈನ್ ಮಾಡಿಸಬೇಕು. ಅದಕ್ಕೆ ಬಣ್ಣದಿಂದ ಬಾಕ್ಸ್ ಹಾಕಿಸಬೇಕು.

3.ಪ್ರತಿ ಪೊಲೀಸ್ ಠಾಣೆಗಳಲ್ಲಿ PRO ಆಫೀಸ್ ತೆಗೆದು ಜನರಿಗೆ ಸರಿಯಾಗಿ ಸ್ಪಂದಿಸಬೇಕು. ಸಮಸ್ಯೆ  ಪರಿಹಾರ ಆಗದಿದ್ದಲ್ಲಿ ಡಿಸಿ, ಎಸಿಪಿಗಳ ಹತ್ತಿರ ಕಳುಹಿಸಬೇಕು.

4. ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ವಾಹನ ನಿಲ್ಲಿಸಬೇಕು. ಎಮರ್ಜನ್ಸಿ ಇದ್ದರೆ ಮಾತ್ರ ಬಿಡಬೇಕು.

5. ಈಗಾಗಲೇ ಸೀಜ್ ಮಾಡಿರುವ ವಾಹನಗಳನ್ನು ಬಿಡಿ. ಮಾಲೀಕರಿಗೆ ಮನೆ ಬಿಟ್ಟು ಹೊರಬರಬೇಡಿ ಒಮದು ಸಲ ಎಚ್ಚರಿಕೆ ಕೊಟ್ಟ ಕಳುಹಿಸಿ.

6. ಎಲ್ಲಾ ಕಡೆ ಪಾಸ್‌ ಸಮಸ್ಯೆಯಾಗುತ್ತಿದ್ದು, ಇದನ್ನು ಎಸಿಪಿಗಳು ಚೆಕ್ ಮಾಡ್ಬೇಕು. ಊಟಕ ಪೂರೈಕೆ ಹಾಗೂ ಅಗತ್ಯ ಇರುವವರಿಗೆ ಮಾತ್ರ ಪಾಸ್ ನೀಡಬೇಕು. 

7. ಪೊಲೀಸರು ಎಲ್ಲಾ ಬಾಗದ ವಿಡಿಯೋ ಚಿತ್ರೀಕರಣ ಮಾಡಬೇಕು.

8.ಬಂದೋಬಸ್ತ್‌ಗೆ ಲಾಠಿ ಪ್ರಯೋಗಿಸಬೇಡಿ. ವಾಹನ ಸೀಜ್ ಮಾಡಿದ್ರೆ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳಬೇಕು.

9.PG ಮಾಲೀಕರು ತೊಂದೆ ಕೊಡುತ್ತಿದ್ದರೆ, ಅವರಿಗೆ ಎಚ್ಚರಿಕೆ ಕೊಡಿ. ಪಿಜಿನಲ್ಲೇ ಊಟ ವ್ಯವಸ್ಥೆ ಮಾಡಬೇಕೆಂದು ಬುದ್ಧಿ ಹೇಳಿ.

10. ಪೊಲೀಸ್ ಸಿಬ್ಬಂದಿಗಳು 3 ಪಾಳಿ ಕೆಲಸ ಮಾಡಬೇಕು. ಅವರಿಗೂ ರೆಸ್ಟ್ ಅಗತ್ಯವರುವ ಕಾರಣ ಮೂರು ಪಾಲಿ ಕೆಲ ಮಾಡಬೇಕು. ಹಾಗೆ ಸಿಬ್ಬಂದಿ ಸ್ಯಾನಿಟೈಸರ್ ಮತ್ತು ಮಾಸ್ಕ್ ಉಪಯೋಗಿಸಬೇಕು.

11.ಡಯಾಲಿಸಿಸ್ ಹಾಗೆ ಕೆಲ ಮೆಡಿಕಲ್ ಸಹಾಯ ಬೇಕು ಅಂದವರಿಗೆ ಹೊಯ್ಸಳ ವಾಹನ ಪಿಕಪ್ ಮತ್ತು ಡ್ರಾಪ್ ಮಾಡಿ, ಜನರು ಆರೋಗ್ಯಕ್ಕೆ ಸ್ಪಂದಿಸಬೇಕು.

12. ಬೆಳಗ್ಗೆ ವಾಯು ವಿಹಾರಕ್ಕೆ ಬರುವವರಿಗೆ ಕಡಿವಾಣ ಹಾಕಲಾಗಿದ್ದು, ಗುಂಪಲ್ಲಿ ವಾಕ್ ಹೋಗುವವರಿಗೆ ಮೈಕ್‌ನಲ್ಲಿ ಅನೌನ್ಸ್ ಮಾಡಿ ವಾಪಸ್ ಮನೆಗೆ ಕಳುಹಿಸಿ.

13.ಬೇರೆ ರಾಜ್ಯಗಳಿಂದ ಬಂದವರಿಗೆ ಸಮಸ್ಯೆಯಾದ್ರೆ ಆಯಾ ಠಾಣೆ ವ್ಯಾಪ್ತಿಗಳ ಪೊಲೀಸರು ಸ್ಪಂದಿಸಬೇಕು. ಇಲ್ಲ ಅಂದ್ರೆ DCPಗಳ ಗಮನಕ್ಕೆ ತರಬೇಕು.

14. ಯಾರು ಆಹಾರ ಪೂರೈಕೆ, ಸಹಾಯ ಮಾಡುತ್ತಾರೋ ಅವರೆಲ್ಲಾ ಬೇಗ ವಾಪಸ್ ಹೋಗಬೇಕು. ಅವರ ಸಹಾಯಕ್ಕೆ ಪಬ್ಲಿಸಿಟಿ ಕೊಡಬಾರದು ಮತ್ತು ಫೋಟೋಸ್‌ ತೆಗೆದುಕೊಳ್ಳಬಾರದು.

click me!