ಹೋಂ ಕ್ವಾರಂಟೈನ್‌ಲ್ಲಿದ್ದವರ ಬೇಕಾಬಿಟ್ಟಿ ಓಡಾಟ: ಇಬ್ಬರ ಮೇಲೆ ಕೇಸ್‌!

By Kannadaprabha News  |  First Published Mar 30, 2020, 1:38 PM IST

ಹೋಂ ಕ್ವಾರಂಟೈನ್‌ ಆದೇಶ ಉಲ್ಲಂಘನೆ| ಇಬ್ಬರ ಮೇಲೆ ಪ್ರಕರಣ ದಾಖಲು| ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಘಟನೆ| ಇಬ್ಬರಿಗು ಪುನಃ 14 ದಿನಗಳ ಹೋಂ ಕ್ವಾರಂಟೈನ್‌| 


ಶಿವಮೊಗ್ಗ(ಮಾ.30): 14 ದಿನಗಳ ಗೃಹ ಬಂಧನದ ಆದೇಶ ಉಲ್ಲಂಘಿಸಿ ಹೊರಗಡೆ ತಿರುಗಾಡಿದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. 

ಮಾ. 23ರಂದು ಕೊರೋನಾ ವೈರಾಣು ಪ್ರದೇಶವಾದ ಬೆಂಗಳೂರಿನಿಂದ ಶಿವಮೊಗ್ಗ ಜಿಲ್ಲೆಗೆ ಹಿಂದಿರುಗಿ ಬಂದಿದ್ದು ತಮ್ಮ ಮನೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯ ಆದೇಶದನ್ವಯ 14 ದಿನಗಳ ಗೃಹ ಬಂಧನದಲ್ಲಿ ಇದ್ದರು. 

Tap to resize

Latest Videos

ಹೋಂ ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿಯ ಬೇಕಾಬಿಟ್ಟಿ ತಿರುಗಾಟ : ಬಿಸಿಲಲ್ಲಿ ನಿಲ್ಲುವ ಶಿಕ್ಷೆ

ಆದರೆ ಇವರು ಈ ನಿಯಮ ಉಲ್ಲಂಘಿಸಿ ಗ್ರಾಮದಲ್ಲಿ ಸುತ್ತಾಡುತ್ತಾ ಜನರೊಂದಿಗೆ ಬೆರೆಯುತ್ತಾ ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿದ ಕಾರಣ ಮಾಳೂರು ಪೊಲೀಸರು ಪ್ರಕರಣ ದಾಖಲಿಸಿದ್ದು, ಇಬ್ಬರನ್ನೂ ಪುನಃ 14 ದಿನಗಳ ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

"

click me!