ಕೊರೋನಾ ಆತಂಕ: ಮಂಗಳೂರಿನಿಂದ ಬಂದ 9 ಜನರ ಆರೋಗ್ಯ ತಪಾಸಣೆ

By Kannadaprabha NewsFirst Published Mar 30, 2020, 2:26 PM IST
Highlights

ಹೊರದೇಶ, ದೇಶದ ಇತರ ರಾಜ್ಯಗಳಿಂದ ಮತ್ತು ಜಿಲ್ಲೆಗಳಿಂದ ಬರುವವರ ಮೇಲೆ ತೀವ್ರ ನಿಗಾ|ಕಾರೇಹಳ್ಳಿ ಚೆಕ್‌ ಪೋಸ್ಟ್‌ನಲ್ಲಿ ಮಂಗಳೂರಿನಿಂದ ಭದ್ರಾವತಿಗೆ ಆಗಮಿಸುತ್ತಿದ್ದ 9 ಜನರ ಆರೋಗ್ಯ ತಪಾಸಣೆ| ಹೆಚ್ಚಿನ ತಪಾಸಣೆಗೆ ಶಿವಮೊಗ್ಗಕ್ಕೆ ರವಾನೆ| 

ಭದ್ರಾವತಿ(ಮಾ.30): ಕೊರೋನಾ ವೈರಸ್‌ ನಿಯಂತ್ರಣಕ್ಕೆ ತಾಲೂಕು ಆಡಳಿತ, ನಗರಸಭೆ, ತಾಲೂಕು ಪಂಚಾಯಿತಿ ಮತ್ತು ಆರೋಗ್ಯ ಇಲಾಖೆ ಹೆಚ್ಚಿನ ಶ್ರಮವಹಿಸುತ್ತಿದ್ದು, ನಗರಕ್ಕೆ ಹೊರದೇಶ ಹಾಗೂ ದೇಶದ ಇತರ ರಾಜ್ಯಗಳಿಂದ ಮತ್ತು ಜಿಲ್ಲೆಗಳಿಂದ ಬರುವವರ ಮೇಲೆ ತೀವ್ರ ನಿಗಾವಹಿಸಿ ಕಾರ್ಯಾಚರಣೆ ಕೈಗೊಂಡಿವೆ.

ಶನಿವಾರ ಬೆಳಗ್ಗೆ ತರೀಕೆರೆ ರಸ್ತೆಯ ಕಾರೇಹಳ್ಳಿ ಚೆಕ್‌ ಪೋಸ್ಟ್‌ನಲ್ಲಿ ಮಂಗಳೂರಿನಿಂದ ನಗರಕ್ಕೆ ಆಗಮಿಸುತ್ತಿದ್ದ 9 ಜನರನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. 7 ಜನರು ಮಂಗಳೂರಿನಲ್ಲಿ ಹೋಟೆಲ್‌ ಕೆಲಸ ಮಾಡುತ್ತಿರುವುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಹೋಂ ಕ್ವಾರಂಟೈನ್‌ಲ್ಲಿದ್ದವರ ಬೇಕಾಬಿಟ್ಟಿ ಓಡಾಟ: ಇಬ್ಬರ ಮೇಲೆ ಕೇಸ್‌!

7 ಜನರು ಮಂಗಳೂರಿನಿಂದ ಹೋಟೆಲ್‌ ಮಾಲೀಕರಿಗೆ ಸೇರಿದ ಎರಡು ಕಾರುಗಳಲ್ಲಿ ಗ್ರಾಮಕ್ಕೆ ಆಗಮಿಸಿದ್ದಾರೆ. ಹಳೇ ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ 9 ಜನರ ಆರೋಗ್ಯ ತಪಾಸಣೆ ನಡೆಸಿದ್ದು, ಹೆಚ್ಚಿನ ತಪಾಸಣೆಗೆ ಶಿವಮೊಗ್ಗಕ್ಕೆ ಕಳಿಸಲಾಗಿದೆ.
 

click me!