ಮೋದಿಜಿ ಕೈಗೊಂಡ ಕೊರೋನಾ ವಿರುದ್ಧದ ಕ್ರಮ ಸ್ವಾಗತಿಸಿದ ಕನ್ನಡದ ಬಾಲೆ!

Suvarna News   | Asianet News
Published : Mar 26, 2020, 03:24 PM IST
ಮೋದಿಜಿ ಕೈಗೊಂಡ ಕೊರೋನಾ ವಿರುದ್ಧದ ಕ್ರಮ ಸ್ವಾಗತಿಸಿದ ಕನ್ನಡದ ಬಾಲೆ!

ಸಾರಾಂಶ

ದುಬೈನಿಂದಲೇ ಮೋದಿಜಿ ಕ್ರಮಕ್ಕೆ ಕೈಮುಗಿದು ಧನ್ಯವಾದ ಅರ್ಪಿಸಿದ ಕನ್ನಡದ ಬಾಲೆ| ದುಬೈನಲ್ಲಿ ನೆಲೆಸಿರುವ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಬಿಸನಾಳ ಗ್ರಾಮದ ಇಂಜಿನಿಯರ್‌ಗಳಾದ ಸಿದ್ದು ಮತ್ತು ಜ್ಯೋತಿ ದಂಪತಿಗಳ ಪುತ್ರಿ ಶ್ರೇಯಾ| 

ಬಾಗಲಕೋಟೆ(ಮಾ.26): ಕೊರೋನಾ ವೈರಸ್‌ ಅನ್ನು ಭಾರತ ದೇಶದಿಂದ ಹೊಡೆದೋಡಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಭಾರತ ಲಾಕ್‌ಡೌನ್‌ಗೆ ನೀಡಿದ ಆದೇಶಕ್ಕೆ ದುಬೈನಿಂದಲೇ ಕನ್ನಡದ ಬಾಲಕಿಯೊಬ್ಬಳು ಸ್ವಾಗತಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ. 

ಮುಧೋಳ ತಾಲೂಕಿನ ಜಿಲ್ಲೆಯ ಬಿಸನಾಳ ಗ್ರಾಮದ ಇಂಜಿನಿಯರ್‌ಗಳಾದ ಸಿದ್ದು ಮತ್ತು ಜ್ಯೋತಿ ದಂಪತಿ ಸದ್ಯ ದುಬೈನಲ್ಲಿ ನೆಲೆಸಿದ್ದಾರೆ. ಈ ದಂಪತಿಯ ಪುತ್ರಿ ಶ್ರೇಯಾ ಪ್ರಧಾನಿ ಮೋದಿ ಕೊರೋನಾ ವಿರುದ್ಧದ ತೆಗೆದುಕೊಂಡ ಕ್ರಮಗಳನ್ನ ಸ್ವಾಗತಿಸಿದ್ದಾಳೆ. ಶ್ರೇಯಾ ದುಬೈನ ಗ್ಲೋಬಲ್ ಇಂಡಿಯನ್ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ 4ನೇ ತರಗತಿ ಓದುತ್ತಿದ್ದಾಳೆ. 

21 ದಿನ ಸಹಕರಿಸಿ, ಕೊರೋನಾ ವಿರುದ್ಧ ಯುದ್ಧ ಗೆಲ್ಲೋಣ: ಮೋದಿ ಪಣ

ಈ ಬಗ್ಗೆ ಮಾತನಾಡಿದ ಶ್ರೇಯಾ ನಾನು ದುಬೈನಲ್ಲಿ ಸೇಫ್ ಆಗಿದ್ದೇನೆ, ದುಬೈ ಸರ್ಕಾರ ನಮ್ಮನ್ನು ಸೇಫ್‌ ಆಗಿ ನೋಡಿಕೊಂಡಿದೆ. ದುಬೈ ಸರ್ಕಾರಕ್ಕೆ ಧನ್ಯವಾದಗಳನ್ನ ಹೇಳಲು ಬಯಸುತ್ತೇನೆ. ಈಗ ನನ್ನ ದೇಶ(ಭಾರತ)ದ ಜನ ಮತ್ತು ನನ್ನ ದೇಶದ ಕುಟುಂಬಗಳ ಬಗ್ಗೆ ಚಿಂತಿಸಬೇಕಿದೆ. ಈಗ ಭಾರತದಲ್ಲಿ ಪ್ರಧಾನಿ ಮೋದಿಜಿ ಒಳ್ಳೆಯ ಕ್ರಮಗಳನ್ನ  ಕೈಗೊಂಡಿದ್ದಾರೆ ಅವರಿಗೆ ಧನ್ಯವಾದಗಳನ್ನ ಹೇಳುತ್ತೇನೆ ಎಂದು ಹೇಳಿಕೊಂಡಿದ್ದಾರೆ. 

ಮೋದಿ ಅವರು ಹೇಳಿದ ಕ್ರಮಗಳಿಗೆ ನಾವೆಲ್ಲರೂ ಬೆಂಬಲಿಸೋಣ. ಈಗ ದುಬೈನಲ್ಲಿ ಶಾಲೆಗಳು ರಜೆ ಇದ್ದು, ನಾನು ವಿಮಾನ ಮೂಲಕ ಪ್ರಯಾಣ ಮಾಡಲು ಮನಸ್ಸು ಮಾಡಿಲ್ಲ. ಯಾಕಂದ್ರೆ ಅದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚು, ಹೀಗಾಗಿ ನಾನು ಮತ್ತು ನಮ್ಮ ಕುಟುಂಬ ಇಲ್ಲಿಯೇ ಸೇಫ್ ಆಗಿದೆ ಎಂದು ಹೇಳಿದ್ದಾರೆ. 

ವ್ಯಾಪಿಸುತ್ತಲೇ ಇದೆ ಕೊರೋನಾ, ಮತ್ತೆ ನಾಲ್ವರಿಗೆ ಸೋಂಕು: ಒಟ್ಟು 55ಕ್ಕೇರಿಕೆ

ಇನ್ನು ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪಾಜಿ ಸಹ ಉತ್ತಮ ನಿರ್ಣಯಗಳನ್ನ ತೆಗೆದುಕೊಂಡಿದ್ದಾರೆ. ಅವುಗಳೆಲ್ಲವನ್ನೂ ನಾವು ಪಾಲಿಸೋಣ. ನಾನು ಸೂಕ್ತ ಸಮಯದಲ್ಲಿ ಮತ್ತೇ ನನ್ನ ದೇಶಕ್ಕೆ ಮರಳುತ್ತೇನೆ. ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ, ಯಾವುದನ್ನು ಸರಳವಾಗಿ ನೆಗ್ಲೆಟ್ ಮಾಡಬೇಡಿ, ಸೇಫ್ ಆಗಿರಿ ಎಂದ ಶ್ರೇಯಾ ವಿನಂತಿ ಮಾಡಿಕೊಂಡಿದ್ದಾಳೆ. 
 

PREV
click me!

Recommended Stories

ವೈರಸ್‌ ಕಾಟ: ಕೊರೋನಾ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ, ಸಚಿವ ಪಾಟೀಲ್‌
ಮತ್ತೆ ಕೊರೋನಾರ್ಭಟ: ಪೂಲಿಂಗ್ ಟೆಸ್ಟ್ ಮೊರೆಹೋದ ಆರೋಗ್ಯ ಇಲಾಖೆ, ಏನಿದು ಹೊಸ ಪರೀಕ್ಷೆ?