ಎಲ್ಲಾ ಬಂದ್ ಅಂದ್ರೆ ಬಂದ್ ಅಷ್ಟೆ, ಗ್ರಾಮದ ಹೆಬ್ಬಾಗಿಲಲ್ಲೇ ಲಾರಿಯನ್ನ ತಡೆದ ಮಹಿಳೆ

By Suvarna NewsFirst Published Apr 6, 2020, 4:15 PM IST
Highlights

'ನಮ್ಮ ಗ್ರಾಮಕ್ಕೆ ಯಾರಿಗೂ ಪ್ರವೇಶವಿಲ್ಲ'  ಎಂದು ಹೇಳಿ ಮಹಿಳೆಯೊಬ್ಬರು ಬೆಂಗಳೂರಿನಿಂದ ಬಂದ ಲಾರಿ ತಡೆದು ನಿಲ್ಲಿಸಿದ ಪ್ರಸಂಗ ನಡೆದಿದೆ. ಯಾರು? ಎಲ್ಲಿ? ಏನು? ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

ವಿಜಯಪುರ, (ಏ.06): ಕೊರೋನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಲಾರಿಯನ್ನು ತಡೆದು ನಿಲ್ಲಿಸಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. 

ನಮ್ಮ ಗ್ರಾಮಕ್ಕೆ ಯಾರಿಗೂ ಪ್ರವೇಶವಿಲ್ಲ ಎಂದು ಬೆಂಗಳೂರಿನಿಂದ ಲಾರಿಯನ್ನು ವಿಜಯಪುರ ಜಿಲ್ಲೆಯ ನಿಡುಂದಿ ತಾಲೂಕಿನ ಗೊಳಸಂಗಿ ಗ್ರಾಮದಲ್ಲಿ ರಜಿಯಾ ಬಿಜಾಪುರ ಎಂಬ ಮಹಿಳೆ ತಡೆದಿದ್ದಾರೆ. 

ಲಾಕ್‌ಡೌನ್‌ ಎಫೆಕ್ಟ್‌: ತುತ್ತು ಅನ್ನಕ್ಕೆ ಗೋವಾ ಕನ್ನಡಿಗರ ಪರದಾಟ, ಎಂ.ಬಿ ಪಾಟೀಲ್‌ ನೆರವು

ರಸ್ತೆ ‌ಮೇಲೆ ಮುಳ್ಳು, ಕಲ್ಲು ಇಟ್ಟು ಲಾರಿಯನ್ನು ಹೆಬ್ಬಾಗಿಲಲ್ಲೇ ತಡೆದು ನಿಲ್ಲಿಸಿ ಕ್ಲಾಸ್ ಡ್ರೈವರ್‌ಗೆ ಮಹಿಳೆ ಕ್ಲಾಸ್ ತೆಗೆದುಕೊಂಡಿದ್ದಾರೆ. ನೀವು ಎಲ್ಲಿಂದ ಬಂದಿದ್ದೀರಿ?  ಕೊರೋನಾ ಇರೋದು ಮೊದಲೇ ಗೊತ್ತಿಲ್ಲವಾ ನಿಮಗೆ? ಗಾಡಿ ಎಲ್ಲಾ ಬಂದ್ ಅಂದ್ರೆ ಬಂದ್ ಅಷ್ಟೆ, ಎಲ್ಲಾ ಗಾಡಿ ಊರೊಳಗೆ ಬರೋದು ಬಂದ್. ಊರಲ್ಲಿ ಯಾರೂ ಬರುವಂತಿಲ್ಲ ಎಂದು ಊರ ಹೊರಗೆ ಲಾರಿ ನಿಲ್ಲಿಸಿ ಎಂದು ಚಾಲಕನಿಗೆ ತರಾಟೆಗೆ ತೆಗೆದುಕೊಂಡಿದ್ದಾಳೆ.

ಗೊಳಸಂಗಿ ಗ್ರಾಮಸ್ಥರು ಬೇರೆ ಊರಿನಿಂದ ಬಂದರೆ ಅವರನ್ನು ಹೋಂ ಕ್ವಾರಂಟೈನ್‌ನಲ್ಲಿ ಇಡ್ತಾರೆ. ಈ ಲಾರಿ ಚಾಲಕ-ನಿರ್ವಾಹಕರಿಗೆ ವಿನಾಯಿತಿ ಯಾಕೆ ಎಂದು ಪ್ರಶ್ನಿಸಿದ್ದಾಳೆ.

click me!