ಕೊರೋನಾ ಭೀತಿ: ನೈರುತ್ಯ ರೈಲ್ವೆಯಿಂದ 300 ಐಸೋಲೇಶನ್‌ ವಾರ್ಡ್‌

By Kannadaprabha News  |  First Published Apr 1, 2020, 7:12 AM IST

ಹುಬ್ಬಳ್ಳಿ ಮತ್ತು ಮೈಸೂರು ವರ್ಕ್‌ಶಾಪ್‌ನಲ್ಲಿ ರೈಲ್ವೆ ಬೋಗಿಗಳಲ್ಲಿ 300ಕ್ಕೂ ಅಧಿಕ ಐಸೋಲೇಶನ್‌ ವಾರ್ಡ್‌ ನಿರ್ಮಾಣಕ್ಕೆ ಸಿದ್ಧತೆ| ಹುಬ್ಬಳ್ಳಿ ವರ್ಕ್‌ಶಾಪ್‌ನಲ್ಲಿ 120ಕ್ಕೂ ಹೆಚ್ಚು ವಾರ್ಡ್‌ಗಳ ನಿರ್ಮಾಣ ಕಾರ್ಯ|ಒಂದು ವಾರ್ಡ್‌ ಗರಿಷ್ಠ 2 ದಿನಗಳಲ್ಲಿ ತಯಾರು|


ಹುಬ್ಬಳ್ಳಿ(ಏ.01): ಕೊರೋನಾ ಸೋಂಕು ಪೀಡಿತರಿಗೆ ಚಿಕಿತ್ಸೆ ನೀಡಲು ನೈರುತ್ಯ ರೈಲ್ವೆ ವಲಯವೂ ಸಜ್ಜಾಗಿದ್ದು, ಹುಬ್ಬಳ್ಳಿ ಮತ್ತು ಮೈಸೂರು ವರ್ಕ್‌ಶಾಪ್‌ನಲ್ಲಿ ರೈಲ್ವೆ ಬೋಗಿಗಳಲ್ಲಿ 300ಕ್ಕೂ ಅಧಿಕ ಐಸೋಲೇಶನ್‌ ವಾರ್ಡ್‌ಗಳನ್ನು ನಿರ್ಮಿಸಲು ಸಿದ್ಧತೆ ಮಾಡಿಕೊಂಡಿದೆ. ಈ ವಾರ್ಡ್‌ಗಳು ಏ.15ರ ವೇಳೆಗೆ ಪೂರ್ಣವಾಗಲಿವೆ.

ಹುಬ್ಬಳ್ಳಿ ವರ್ಕ್‌ಶಾಪ್‌ನಲ್ಲಿ 120ಕ್ಕೂ ಹೆಚ್ಚು ವಾರ್ಡ್‌ಗಳ ನಿರ್ಮಾಣ ಕಾರ್ಯ ನಡೆದಿದೆ. ಉತ್ತರ ಭಾರತದ ರೈಲ್ವೆ ವಲಯಗಳ ಬೋಗಿಗಳಲ್ಲಿ ಮಾದರಿ ಐಸೋಲೇಶನ್‌ ವಾರ್ಡ್‌ಗಳನ್ನು ರೂಪಿಸಲಾಗಿದೆ. ಅದೇ ಮಾದರಿಯನ್ನು ಅನುಸರಿಸಿ ನೈರುತ್ಯ ರೈಲ್ವೆ ವಲಯವು ವಾರ್ಡ್‌ಗಳನ್ನು ಸಿದ್ಧಪಡಿಸುತ್ತಿದೆ. 

Tap to resize

Latest Videos

ಹೂ ಬೆಳೆದವರ ಬಾಳು ಬಾಡಿಸಿದ ಕೊರೋನಾ, ಹಣ್ಣು ಬೆಳೆದವರ ಹಿಂಡಿದ ಮಾರಿ

ಹುಬ್ಬಳ್ಳಿ ವರ್ಕ್‌ಶಾಪ್‌ನಲ್ಲಿ ಒಂದು ಮಾದರಿ ವಾರ್ಡ್‌ ಅನ್ನು ನಿರ್ಮಿಸಿದೆ. ಇದನ್ನೇ ಮಾದರಿಯಾಗಿಟ್ಟುಕೊಂಡು ಇತರ ಐಸೋಲೇಶನ್‌ ವಾರ್ಡ್‌ಗಳನ್ನು ನಿರ್ಮಿಸಲಾಗುತ್ತಿದ್ದು, ಒಂದು ವಾರ್ಡ್‌ ಗರಿಷ್ಠ 2 ದಿನಗಳಲ್ಲಿ ತಯಾರು ಮಾಡುತ್ತೇವೆ. 10, 15 ಅಥವಾ 20 ಬೋಗಿಗಳನ್ನು ಒಂದು ಬ್ಯಾಚ್‌ ಎಂದು ಪರಿಗಣಿಸಿ ಅವುಗಳನ್ನು ವಾರ್ಡ್‌ಗಳಾಗಿ ಪರಿವರ್ತಿಸಲಾಗುತ್ತಿದೆ.

click me!