ಕೊರೋನಾ ವೈರಸ್ ಇಡೀ ವಿಶ್ವವನ್ನೇ ನಡುಗಿಸುತ್ತಿದೆ. ಇದರ ಏಟಿಗೆ ಇಡೇ ಭಾರತ ದೇಶವನ್ನ ಲಾಕ್‌ಡೌನ್ ಮಾಡಲಾಗಿದೆ. ದಿನದಿಂದ ದಿನಕ್ಕೆ ಜನರಲ್ಲಿ ಭೀತಿ ಹುಟ್ಟಿಸುತ್ತಿದ್ದು, ಇದರ ಭಯಕ್ಕೆ ಓರ್ವ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮುಂಬೈ, (ಮಾ.25): ಕೊರೋನಾ ವೈರಸ್ ಭೀತಿಯಿಂದ 50 ವರ್ಷದ ಮಹಿಳೆಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಅಹಮದ್ ನಗರದಲ್ಲಿ ನಡೆದಿದೆ.
ಶನಿವಾರ ತನ್ನ ಮನೆಯ ಸಮೀಪ ಇರುವ ಬಾವಿಗೆ ಬಿದ್ದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಬಳಿಕ ಪೊಲೀಸರು ತನಿಖೆ ಆರಂಭಿಸಿದಾಗ ಮನೆಯಲ್ಲಿ ಡೆತ್ ನೋಟ್ ಸಿಕ್ಕಿರುವುದು ಬುಧವಾರ ಬೆಳಕಿಗೆ ಬಂದಿದೆ.
ಆರೋಗ್ಯವಾಗಿದ್ದ 21 ವರ್ಷದ ಯುವತಿ ಕೊರೋನಾ ವೈರಸ್‌ಗೆ ಬಲಿ; ಬೆಚ್ಚಿ ಬಿತ್ತು ಜಗತ್ತು!
ಈ ಡೆತ್ ನೋಟ್‍ನಲ್ಲಿ ಕೊರೋನಾ ಭಯಕ್ಕೆ ಹೆದರಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಮಹಿಳೆ ಬರೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಈಗ ಡೆತ್ ನೋಟ್ ನಲ್ಲಿರುವ ಬರಹ ಮಹಿಳೆಯದ್ದೋ ಅಥವಾ ಬೇರೆಯವರು ಬರೆದಿದ್ದಾರೋ ಎನ್ನುವುದನ್ನು ತಿಳಿಯಲು ಕೈ ಬರಹ ತಜ್ಞರ ಮೊರೆ ಹೋಗಿದ್ದು, ತನಿಖೆ ನಡೆಸಿದ್ದಾರೆ.
ಇನ್ನು ಕೊರೋನಾ ಸೋಂಕಿತರ ಸಂಖ್ಯೆ 100ರ ಗಡಿ ದಾಟಿದೆ. ಈ ಮೂಲಕ ಭಾರತ ದೇಶದಲ್ಲಿ ಹೆಚ್ಚು ಕೊರೋನಾ ಕೇಸ್ ಹೊಂದಿದ ರಾಜ್ಯಗಳಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ.