: ಕೊರೋನಾ ವ್ಯಾಪಕವಾಗಿ ವ್ಯಾಪಿಸದಂತೆ ತಡೆಯಲು ಹಲವು ಕ್ರಮ | ದೇಶದಲ್ಲಿ ಕೊರೋನಾ ಸ್ಥಿತಿ ಗಂಭೀರವಾದರೆ, ರೈಲುಗಳ ಆಸ್ಪತ್ರೆಗಳಾಗಿ ಪರಿವರ್ತನೆ?
ತಿರುವನಂತಪುರ(ಮಾ25): ಕೊರೋನಾ ವ್ಯಾಪಕವಾಗಿ ವ್ಯಾಪಿಸದಂತೆ ತಡೆಯಲು ಹಲವು ಕ್ರಮ ಕೈಗೊಳ್ಳುತ್ತಿರುವ ಕೇಂದ್ರ ಸರ್ಕಾರ, ಮುಂದಿನ ದಿನಗಳಲ್ಲಿ ಕೊರೋನಾ ಪರಿಸ್ಥಿತಿ ಕೈಮೀರಿದಲ್ಲಿ, ರೈಲು ಬೋಗಿಗಳನ್ನೇ ಸೋಂಕಿತರ ಚಿಕಿತ್ಸಾ ಕೇಂದ್ರಗಳನ್ನಾಗಿ ಪರಿವರ್ತಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ.
ಕೊರೋನಾ ವ್ಯಾಪಿಸದಂತೆ ತಡೆಗಾಗಿ ಈಗಾಗಲೇ ದೇಶಾದ್ಯಂತ ರೈಲು ಸೇವೆ ತಡೆಹಿಡಿಯಲಾಗಿದೆ. ಮತ್ತೊಂದೆಡೆ, ದೇಶಾದ್ಯಂತ ಕೊರೋನಾ ಪ್ರಕರಣಗಳ ಸಂಖ್ಯೆ ದುಬಾರಿಯಾದರೆ, ಆಸ್ಪತ್ರೆಗಳ ಕೊರತೆಯಾಗಲಿದೆ.
ಈ ವೇಳೆ ನಿಷ್ಕ್ರಿಯವಾಗಿರುವ ರೈಲು ಬೋಗಿಗಳನ್ನು ಆಸ್ಪತ್ರೆಗಳನ್ನಾಗಿ ಪರಿವರ್ತಿಸಲು ರೈಲ್ವೆ ಚಿಂತನೆ ನಡೆಸಿದೆ. ಈ ಸಂಬಂಧ ರೈಲ್ವೆಯ ವಿಭಾಗೀಯ ವ್ಯವಸ್ಥಾಪಕರ ಅಭಿಪ್ರಾಯನ್ನು ರೈಲ್ವೆ ಮಂಡಳಿ ಕೋರಿಕೊಂಡಿದೆ.