ಕೇರಳದ ಈ ನರ್ಸ್ ಕೊರೋನಾವನ್ನೇ ಸೋಲಿಸಿದ್ದು ಹೇಗೆ?

By Suvarna NewsFirst Published Apr 5, 2020, 7:22 PM IST
Highlights

ಕೊರೋನಾ ಸೋಲಿಸಿದ ನರ್ಸ್ ಮತ್ತೆ ಕೆಲಸಕ್ಕೆ ಹಾಜರ್/ ಕೊರೋನಾ ಸೋಂಕಿಗೆ ಸವಾಲೆಸೆದ ಕೇರಳದ ದಾದಿ/ 14 ದಿನಗಳ ಹೋಂ ಕ್ವಾರಂಟೈನ್ ಮುಗಿಸಿ ಮತ್ತೆ ಸೇವೆಗೆ

ತಿರುವನಂತಪುರ(ಏ. 05)   ಇದು ಕೇರಳದ ನರ್ಸ್ ಒಬ್ಬರ ಕತೆ. ನಿನ್ನನ್ನು ಸೋಲಿಸಿದ ನಾನು ಮತ್ತೆ ಹೋರಾಟಕ್ಕೆ ಧುಮುಕುತ್ತಿದ್ದೇನೆ. ಈ ಕೋಣೆಯಲ್ಲಿ ನನ್ನನ್ನು ನೀನು ಬಂಧಿ ಮಾಡಿದ್ದರೆ ಏನು?  ಮತ್ತೆ ನಿನ್ನ ಮಣಿಸಲು ಬರುತ್ತಿದ್ದೇನೆ.

ಇದು ಕೇರಳದ ನರ್ಸ್ ಒಬ್ಬರು ಕೊರೋನಾದಿಂದ ಗೆದ್ದು ಬಂದು ಕೊರೋನಾಕ್ಕೆ ಹೇಳಿದ ಮಾತು. 14 ದಿನದ ಕ್ವಾರಂಟೈನ್ ಮುಗಿಸಿದ 32 ವರ್ಷದ ನರ್ಸ್ ರೇಶ್ಮಾ ಮೋಹನ್ ದಾಸ್ ಮತ್ತೆ ತಮ್ಮ ಕರ್ತವ್ಯಕ್ಕೆ ಹಾಜರಾಗಿದ್ದಾರೆ.  ಕೊರೋನಾ ಸೋಂಕಿಗೆ ತುತ್ತಾಗಿದ್ದ ಹಿರಿಯ ವ್ಯಕ್ತಿ ಮತ್ತು ಆತನ ಪತ್ನಿಯನ್ನು ಆರೈಕೆ ಮಾಡಿದ್ದ ನರ್ಸ್ 14 ದಿನಗಳ ಕ್ವಾರಂಟೈನ್ ಗೆ ಒಳಗಾಗಿದ್ದರು.

93 ವರ್ಷದ ಥಾಮಸ್ ಅಬ್ರಾಹಿಂ ಮತ್ತು 88 ವರ್ಷದ ಮರಿಯಮ್ಮನ ಆರೈಕೆ ಮಾಡಿದ್ದ ನರ್ಸ್ ಅವರು ಗುಣಮುಖರಾಗುವಂತೆ ನೋಡಿಕೊಂಡಿದ್ದರು. ಒಂದು ವಾರದ ಒಳಗೆ ನಿನ್ನನ್ನು (ಕೊರೋನಾ) ಸೋಲಿಸಿ ಈ ಕೋಣೆಯನ್ನು ಬಿಡುತ್ತೇನೆ, ಹೀಗೆಂದು ರೇಶ್ಮಾ ತಮ್ಮ ಸ್ನೇಹಿತರ ವಾಟ್ಸಪ್ ಗ್ರೂಪ್ ನಲ್ಲಿ ಪೋಸ್ಟ್ ಮಾಡಿದ್ದರು.

ಕೊರೋನಾ ಸಮರಕ್ಕೆ ಶಕ್ತಿ ತುಂಬಿದ ಮಾಸ್ಕ್ ಮಹಿಳೆ

ನಾನು ಈ ಸಂದೇಶವನ್ನು ವಾಟ್ಸಪ್ ಗ್ರೂಪ್ ನಲ್ಲಿ ಶೇರ್ ಮಾಡಿಕೊಂಡಿದ್ದೆ, ನನಗೆ ಕೇರಳ ಆರೋಗ್ಯ ಇಲಾಖೆ ಮೇಲೆ ಸಂಪೂರ್ಣ ನಂಬಿಕೆ ಇತ್ತು. ವಿಶ್ವ  ದರ್ಜೆಯ ಗುಣಮಟ್ಟದ ಚಿಕಿತ್ಸೆ ಎಲ್ಲರಿಗೂ ಲಭ್ಯವಾಗುತ್ತಿದೆ ಎಂದು ವರದಿಗಾರರ ಬಳಿ ರೇಶ್ಮಾ ಹೇಳಿಕೊಂಡಿದ್ದಾರೆ.

ಮಾರ್ಚ್ 12 ರಿಂದ ಥಾಮಸ್ ಮತ್ತು ಮರಿಯಮ್ಮ ಅವರನ್ನು ನರ್ಸ್ ಆರೈಕೆ ಮಾಡಿದ್ದರು. ರೋಗಿಗಳೊಂದಿಗೆ ದಾದಿ ಅನಿವಾರ್ಯವಾಗಿ ಕ್ಲೋಸ್ ಕಾಂಟಾಕ್ಟ್ ನಲ್ಲಿ ಇದ್ದರು.

ನರ್ಸ್ ಹೇಳಿಕೆ ಮತ್ತು ಆಕೆ ಪುನಃ ಕೆಲಸಕ್ಕೆ ಹಾಜರಾಗುತ್ತಿರುವ ಬಗ್ಗೆ ಕೇರಳ ಆರೋಗ್ಯ ಮಂತ್ರಿ ಕೆಕೆ ಶೈಲಜಾ ಸಂತಸ ವ್ಯಕ್ತಪಡಿಸಿದ್ದಾರೆ.  ಮೊದಲು ಕೊರೋನಾ ವೈರಸ್ ಸೋಂಕಿತ ಪ್ರಕರಣಗಳು ಕಾಣಿಸಿಕೊಂಡಿದ್ದೇ ಕೇರಳದಲ್ಲಿ. ಭಾರತದ ಮಟ್ಟಿಗೆ ಕೇರಳ ಹಾಟ್ ಸ್ಪಾಟ್ ಆಗಿ ಗುರುತಿಸಿಕೊಂಡಿತ್ತು.

ಇಂಗ್ಲಿಷ್ ನಲ್ಲಿಯೂ ಓದಿ

click me!