ಕೊರೋನಾ ಮಣಿಸಲು ಕೇಂದ್ರದ ದಿಟ್ಟ ಹೆಜ್ಜೆಗಳು 1,2,3,4......

By Suvarna NewsFirst Published Apr 2, 2020, 6:00 PM IST
Highlights

ಕೊರೋನಾ ಮಹಾಮಾರಿ ವಿರುದ್ಧದ ಹೋರಾಟ/ ಕೇಂದ್ರ ಸರ್ಕಾರಕ್ಕೆ ಇಲಾಖೆಗಳ ಸಾಥ್/ ಯುದ್ಧದ ಮಾದರಿಯಲ್ಲಿ ಕೆಲಸ/ ಸಾನಿಟೈಸ್ರ್ ಗಳ ಪೂರೈಕೆ

ನವದೆಹಲಿ(ಏ. 02) 25 ಸಾವಿರ ಎನ್ ಸಿಸಿ ಕೆಡೆಟ್ ಗಳು ಮತ್ತು ಮಿಲಟರಿಯಿಂದ ನಿವೃತ್ತಿ ಹೊಂದಿದ ಆರೋಗ್ಯ ಅಧಿಕಾರಿಗಳು ಕೊರೋನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಲಿದ್ದಾರೆ.

ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿರುವ ಸೇನಾ ಮುಖ್ಯಸ್ಥರು 9 ಸಾವಿರ ಹಾಸಿಗೆಗಳ ಸೌಲಭ್ಯ ಮತ್ತು 8500 ವೈದ್ಯರು ಹಾಗೂ ಮೆಡಿಕಲ್  ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ಇರಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಕೊರೋನಾಕ್ಕೆ ಸಂಬಂಧಿಸಿ ಎಲ್ಲ ಆರೋಗ್ಯ ವಿಚಾರಗಳನ್ನು ನೋಡಿಕೊಳ್ಳುತ್ತಿರುವ ಎಎಫ್ಎಂಎಸ್ ಡಿಜಿ ಲೆಫ್ಟಿನಂಟ್ ಜನರಲ್ ಅನುಪ್ ಬ್ಯಾನರ್ಜಿ ಮತ್ತು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಆರ್ಮಿ ಚೀಫ್ ಜನರಲ್ ಎಂಎಂ ನರವಾನೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಕಾಲಕಾಲಕ್ಕೆ ವರದಿ ನೀಡುತ್ತಿದ್ದಾರೆ. ನೌಕಾಸೇನೆಯ ಹಡಗುಗಳನ್ನು ಸ್ಟಾಂಡ್ ಬೈ ಇಟ್ಟುಕೊಳ್ಳಲಾಗಿದೆ ಎಂದು ನೇವಿ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ತಿಳಿಸಿದ್ದಾರೆ.

ಗಾಳಿಯಿಂದಲೂ ಹರಡುತ್ತೆ ಕೊರೋನಾ; ಬೆಚ್ಚಿ ಬೀಳಿಸಿದ ವರದಿ

25 ಟನ್ ಗೂ ಅಧಿಕ ಮೆಡಿಕಲ್ ಸಾಮಗ್ರಿಗಳನ್ನು 5 ದಿನದ ಅವಧಿಯಲ್ಲಿ ದೇಶದ ವಿವಿಧ ಕಡೆ ಉಪಯೋಗಕ್ಕೆ ನೀಡಲಾಗಿದೆ. ಸುರಕ್ಷತಾ ಸಲಕರಣೆಗಳು, ಸಾನಿಟೈಸರ್, ಮಾಸ್ಕ್ ಗಳ ಅಗತ್ಯ ಪೂರೈಸಲಾಗಿದೆ ಎಂದು ಏರ್ ಪೋರ್ಸ್ ಮುಖ್ಯಸ್ಥ ಮಾರ್ಷಲ್ ಆರ್ ಕೆ ಎಸ್ ಭದುರೀಯಾ ತಿಳಿಸಿದ್ದಾರೆ.

ಡಿಆರ್ ಡಿಒದಿಂದ ತಯಾರಾದ 50 ಸಾವಿರ ಲೀಟರ್ ಸಾನಿಟೈಸರ್ ಗಳನ್ನುರಕ್ಷಣಾ ಹೊಣೆ ಹೊತ್ತಿರುವ ದೆಹಲಿ ಪೊಲೀಸರು ಸೇರಿದಂತೆ ಸಿಬ್ಬಂದಿಗೆ ಕಳುಹಿಸಿಕೊಡಲಾಗಿದೆ. ಎನ್ 99 ಮಾಸ್ಕ್ ಗಳನ್ನು ಯುದ್ಧ ಮಾದರಿಯಲ್ಲಿ ತಯಾರು ಮಾಡಲಾಗುತ್ತಿದೆ ಎಂದು ಡಿಆರ್ ಡಿಒ  ಅಧ್ಯಕ್ಷ ಡಾ. ಜಿ ಸತೀಶ್ ರೆಡ್ಡಿ ಮಾಹಿತಿ ನೀಡಿದ್ದಾರೆ.

ಕೊರೋನಾ ವಿರುದ್ಧದ ಹೋರಾಟಕ್ಕೆ ನಿರಂತರವಾಗಿ ಕೇಂದ್ರ ಸರ್ಕಾರ ಮತ್ತು ಇಲಾಖೆಗಳು ಶ್ರಮವಹಿಸುತ್ತಲೇ ಇವೆ. ನಾಗರಿಕರು ಸಹಕಾರ ನೀಡಿದರೆ ಈ ಮಹಾಮಾರಿಯನ್ನು ಶೀಘ್ರವಾಗಿ ನಿಯಂತ್ರಣಕ್ಕೆ ತರಲು ಸಾಧ್ಯವಿದೆ.

click me!