ಕೊರೋನಾ ಲಾಕ್‌ಡೌನ್: ಜೂನ್‌ವರೆಗೂ ವಿಸ್ತರಿಸುವಂತೆ ಮೋದಿಗೆ ಸಿಎಂ ಮನವಿ

By Suvarna NewsFirst Published Apr 6, 2020, 9:47 PM IST
Highlights

ಕೊರೋನಾ ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಲಾಕ್‌ಡೌನ್ ಹೇರಿದೆ. ಇದು ಏಪ್ರಿಲ್ 4ಕ್ಕೆ ಕೊನೆಯಗಲಿದ್ದು, ಇದನ್ನು ಮತ್ತಷ್ಟು ದಿನ ಮುಂದುವರಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಲಾಗಿದೆ.

ಹೈದರಾಬಾದ್, (ಏ.06): ಕೊರೋನಾ ವೈರಸ್ ಸೋಂಕು ತಡೆಗಟ್ಟಲು ಈ ಲಾಕ್‌ಡೌನ್ ಅನ್ನು ಜೂನ್ 3ರವರೆಗೆ ವಿಸ್ತರಿಸಿ ಎಂದು ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಬಾರದು ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರವು ಏಪ್ರಿಲ್ 14ರವರೆಗೂ ಲಾಕ್‌ಡೌನ್ ಘೋಷಿಸಿತ್ತು.

Fact Check: ಲಾಕ್ ಡೌನ್ ಒಂದು ಹಂತ ಅಲ್ಲ, 4 ಹಂತವಿದೆ, WHO ನಿರ್ದೇಶನ! 

ಆದರೆ ತೆಲಂಗಾಣದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತ ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಜೂನ್ 3ರವರೆಗೂ ಲಾಕ್‌ಡೌನ್ ವಿಸ್ತರಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ವಿನಂತಿಸಿದ್ದಾರೆ.

Telangana Chief Minister's Office now clarifies that CM K Chandrasekhar Rao suggested extension of lockdown for 2 more weeks (after April 15). He took a reference from BCG report which suggested lockdown in India will be good until June 3. No announcement of extension yet. pic.twitter.com/dxLb89RapT

— ANI (@ANI)

ಈವರೆಗೆ ದೇಶದಲ್ಲಿ 4,281ಜನರಿಗೆ ಕೊರೋನಾ ಸೋಂಕು ತಗುಲಿದ್ದು,111 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ತೆಲಂಗಾಣದಲ್ಲಿ

ಏಪ್ರಿಲ್ 5ರ ಮಾಹಿತಿ ಪ್ರಕಾರ 62 ಕೊರೊನಾ ವೈರಸ್ ಹೊಸ ಪ್ರಕರಣಗಳು ದಾಖಲಾಗಿತ್ತು. ಒಟ್ಟು ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 289ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಕೊರೊನಾ ವೈರಸ್‌ನಿಂದ ಇದುವರೆಗೆ 11 ಮಂದಿ ಮೃತಪಟ್ಟಿದ್ದಾರೆ. ಕೊರೊನಾ ಸೋಂಕು ಇನ್ನಷ್ಟು ಮಂದಿಗೆ ಹರಡದಂತೆ ತಡೆಯಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಏಪ್ರಿಲ್ 14ರ ವರೆಗೆ ಲಾಕ್‌ಡೌನ್ ಇದೆ. ಅದರೊಳಗೆ ಕೊರೋನಾ ಸೋಂಕು ಹರಡುವಿಕೆಯಲ್ಲಿ ಏನಾದರೂ ಕಡೆಮೆಯಾಗುತ್ತಿರುವುದು ಕಂಡುಬಂದರೆ ಮಾತ್ರ ಈ ಲಾಕ್‌ಡೌನ್ ಅಲ್ಲಿಗೆ ಮುಕ್ತಾಯ ಮಾಡಲಾಗುತ್ತೆ. ಒಂದು ವೇಳೆ ಸೋಂಕು ಹೆಚ್ಚಾಗುತ್ತಾ ಹೋದರೆ ಮತ್ತೆ ಲಾಕ್‌ಡೌನ್ ಮುಂದುವರಿಯುವ ಎಲ್ಲಾ ಸಾಧ್ಯತೆಗಳಿವೆ.

click me!